ಒಂಟಿ
ಎಲ್ಲವೂ ದೂರ
ಎಲ್ಲೋ ಹೋದಂತಿದೆ.
ಮೇಲೆ ಹೊಳೆಯುವ ತಾರೆ
ಕೋಟಿ ವರ್ಷಗಳಿಂದ
ತೀರಿಹೋದಂತಿದೆ.
ಈಗ ಹಾದು ಹೋದ ಬಂಡಿಯಲ್ಲಿ
ಕಣ್ಣೀರು ಕಂಡಂತೆ ಏನೋಕೆಟ್ಟದ್ದು
ಅಂದಂತೆ ಅನಿಸುತ್ತಿದೆ.
ಬೀದಿಯ ಆಚೆ ಬದಿ ಆಮನೆಯಲ್ಲಿ
ಗಡಿಯಾರ ಹೊಡೆಯುವುದು ನಿಂತು…
ಅದು ಚಲಿಸಿದ್ದು ಯಾವತ್ತು..?
ಅನಿಸುತ್ತಿದೆ ಎದೆಯೊಳಗಿಂದ ಎದ್ದು ಹೊರಟು ನಿಂತು
ಆ ದೊಡ್ಡ ಆಗಸದ ಅಡಿಯಲ್ಲಿ ನಡೆಯಲು,
ಅನಿಸುತ್ತಿದೆ ಪ್ರಾರ್ಥಿಸಲು.
ನಿಜವಾಗಲೂ ಗತಿಸಿಹೋದ ಎಲ್ಲ ತಾರೆಗಳ ನಡುವೆ
ಬಹಳ ಹಿಂದಿನದೊಂದು
ಇನ್ನೂ ಉಳಿದಿದೆ ಅನಿಸುತ್ತಿದೆ.
ಅದು ಯಾವುದದು
ನನಗೆ ಗೊತ್ತಿರುವಂತೆ
ಯಾವುದದು- ತನ್ನ ಕಿರಣದ ಕೊನೆಯಲ್ಲಿ
ಆಕಾಶದಲ್ಲಿ
ಒಂದು ಬಿಳಿಯ ಪಟ್ಟಣದಂತೆ
ನಿಂತಿರುವುದು.. .. ..
“ರೈನರ್ ಮರಿಯಾ ರಿಲ್ಕ್ ನ ಇನ್ನೊಂದು ಕವಿತೆ..” ಗೆ ಒಂದು ಪ್ರತಿಕ್ರಿಯೆ
“ನಿಜವಾಗಲೂ ಗತಿಸಿಹೋದ ಎಲ್ಲ ತಾರೆಗಳ ನಡುವೆ
ಬಹಳ ಹಿಂದಿನದೊಂದು
ಇನ್ನೂ ಉಳಿದಿದೆ ಅನಿಸುತ್ತಿದೆ.”
bahala sathya…