ಲಡಾಖ್ ಪ್ರವಾಸ ಕಥನ ೪: ಗುರಿಯೇ ಇಲ್ಲದ ಹಗಲು ದಾರಿ

ಕಾರ್ಗಿಲ್ಲಿನಲ್ಲಿ ನಿಮಗೆ ಯಾರ ಜೊತೆಗಾದರೂ ಕನ್ನಡದಲ್ಲಿ ಮಾತನಾಡಬೇಕು ಅನಿಸಿದರೆ ಅಲ್ಲಿನ ಮುಖ್ಯಬೀದಿಯಲ್ಲಿರುವ ಟಿಬೆಟನ್ ಮಾರ್ಕೆಟ್ಟಿಗೆ ಹೋಗಬೇಕು. ಅಲ್ಲಿ ಸ್ವೆಟರು ಜರ್ಕಿನ್ನು ಬ್ಯಾಗು ಇತ್ಯಾದಿಗಳನ್ನು ಮಾರುವ ಟಿಬೆಟನ್ ಹೆಂಗಸರಲ್ಲಿ ನಾಲ್ಕೈದು ಮಂದಿಗಾದರೂ ಕನ್ನಡ ಬರುತ್ತದೆ. ಯಾಕೆಂದರೆ ಇವರು ಕರ್ನಾಟಕದ ಮುಂಡಗೋಡು, ಬೈಲುಕುಪ್ಪೆ ಅಥವಾ ಗುರುಪುರದ ಟಿಬೆಟನ್ ನಿರಾಶ್ರಿತರ ಶಿಭಿರಗಳಿಂದ ಬಂದು ಇಲ್ಲಿ ಚಳಿಗಾಲ ಶುರುವಾಗುವ ತನಕ ವ್ಯಾಪಾರ ಮಾಡಿಕೊಂಡು ಹಿಮಬೀಳಲು ತೊಡಗುವಾಗ ಇಲ್ಲಿಂದ ಬೇರೆಕಡೆಗೆ ಕಾಲು ಕೀಳುವವರು. ಇಲ್ಲಿರುವ ಬೈಲುಕುಪ್ಪೆಯ ಟಿಬೆಟನ್ ಮಹಿಳಾ ವ್ಯಾಪಾರಿಯ ಜೊತೆ ನಾನು ಕನ್ನಡದಲ್ಲಿ … Continue reading ಲಡಾಖ್ ಪ್ರವಾಸ ಕಥನ ೪: ಗುರಿಯೇ ಇಲ್ಲದ ಹಗಲು ದಾರಿ

ಲಡಾಖ್ ಪ್ರವಾಸ ಕಥನ ೩.ಬೆಳ್ಳಿಬಟ್ಟಲಲ್ಲಿ ನಂಕೀನ್ ಚಹಾ

‘ಮಾನ್ಯ ಮಹಾರಾಜರೇ ನಿಮ್ಮ ಅರಮನೆಯ ಪಡಶಾಲೆಯಲ್ಲಿ ಈ ಒಂದು ಇರುಳನ್ನು ಕಳೆಯಬಹುದೇ?’ಎಂದು ಕೇಳಬೇಕೆಂದಿದ್ದವನು ಬಾಯಿಕಟ್ಟಿಕೊಂಡು ಸುಮ್ಮನೆ ಕುಳಿತಿದ್ದೆ. ಕುಸಿದ ತನ್ನ ಅರಮನೆಯ ಅಳಿದುಳಿದ ಪಾಗಾರದೊಳಗೇ ತಕ್ಕಮಟ್ಟಿನ ಕೋಣೆಯೊಂದನ್ನು ಆಯ್ಕೆ ಮಾಡಿಕೊಂಡು ಅದನ್ನು ಅತಿಥಿಗಳನ್ನು ಸತ್ಕರಿಸುವ ನಡುಕೋಣೆಯನ್ನಾಯೂ, ಅದರ ಪಕ್ಕದ ಇನ್ನೊಂದು ಕೋಣೆಯನ್ನು ಶಯನಗೃಹವಾಗಿಯೂ, ಅದರ ಪಕ್ಕದನ್ನು ಅಡುಗೆ ಮನೆಯಾಗಿಯೂ, ಕೆಳಗಿನ ನೆಲಮಾಳಿಗೆಯನ್ನು ದನಕರುಗಳನ್ನು ಕಟ್ಟುವ ಕೊಟ್ಟಿಗೆಯನ್ನಾಗಿಯೂ ಪರಿವರ್ತಿಸಿಕೊಂಡು ಪದುಂ ಎಂಬ ಈ ಊರಿನ ಮಹಾರಾಜನ ಉತ್ತರಾಧಿಕಾರಿ ಬದುಕುತ್ತಿದ್ದರೆ ನಾನು ನಿಮ್ಮ ಈ ಇರುಳಿನ ಅತಿಥಿಯಾಗಿರಬಹುದೇ ಎಂದು ಕೇಳಿ … Continue reading ಲಡಾಖ್ ಪ್ರವಾಸ ಕಥನ ೩.ಬೆಳ್ಳಿಬಟ್ಟಲಲ್ಲಿ ನಂಕೀನ್ ಚಹಾ

ಲಡಾಖ್ ಪ್ರವಾಸ ಕಥನ ೨.ಹಿಮಕಣಿವೆಯ ಧರ್ಮಕಾರಣಗಳು

ಕಾಶ್ಮೀರದ ಲಡಾಕ್ ಪ್ರಾಂತ್ಯದಲ್ಲಿರುವ ಕಾರ್ಗಿಲ್ ಪಟ್ಟಣದಿಂದ ಸುಮಾರು ಇನ್ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಜಂಸ್ಕಾರ್ ಕಣಿವೆಯ ಪದುಮ್ ಪಟ್ಟಣಕ್ಕೆ ತೆರಳಲು ಟ್ಯಾಕ್ಸಿಗೆ ಸುಮಾರು ಹತ್ತುಸಾವಿರ ರೂಪಾಯಿ ತೆರಬೇಕಾಗುತ್ತದೆ. ಇದು ಅಲ್ಲಿನ ಟ್ಯಾಕ್ಸಿ ಚಾಲಕರ ಯೂನಿಯನ್ ನಿಗದಿಪಡಿಸಿರುವ ಮೊತ್ತ. ಭಾರತ ದೇಶದ ಅತ್ಯಂತ ದುರ್ಗಮವೂ ಶೀತಲವೂ ಕೆಲವೊಮ್ಮೆ ಮಾರಣಾಂತಿಕವೂ ಆಗಿರುವ ಈ ಸ್ವರ್ಗಸದೃಶ ಕಣಿವೆಯನ್ನು ಜೀವನದಲ್ಲಿ ಒಮ್ಮೆಯಾದರೂ ಕಾಣಲು ಎಷ್ಟು ಕಾಸು ಬೇಕಾದರೂ ಸುರಿಯಲು ತಯಾರಿರುವ ಪುಣ್ಯವಂತ ಸ್ತ್ರೀಪುರುಷರಿದ್ದಾರೆ. ಸ್ವರ್ಗವನ್ನೂ ಕಾಣಬೇಕು ಆದರೆ ಹೆಚ್ಚು ಕಾಸೂ ಖರ್ಚಾಗಬಾರದು, ಅಂತಹ ಕಷ್ಟವನ್ನೂ … Continue reading ಲಡಾಖ್ ಪ್ರವಾಸ ಕಥನ ೨.ಹಿಮಕಣಿವೆಯ ಧರ್ಮಕಾರಣಗಳು

ಲಡಾಖ್ ಪ್ರವಾಸ ಕಥನ ೧. ಪದ್ಮಸಂಭವನ ಭವಸಾಗರದಲ್ಲಿ

ಇದು ಖಿನ್ನತೆಯೋ ಆನಂದವೋ ದುಗುಡವೋ ನೀರವತೆಯೋ ಒಂದೂ ಅರಿವಾಗುತ್ತಿಲ್ಲ.ಹಿಮಾಲಯದ ತಪ್ಪಲಿನ ಸುರು ಮತ್ತು ಜಂಸ್ಕಾರ್ ಕಣಿವೆಗಳಲ್ಲಿ ಶರತ್ಕಾಲದಲ್ಲಿ ಹತ್ತು ದಿನ ಸುತ್ತು ಹಾಕಿ ವಾಪಾಸು ಬಂದು ಇಲ್ಲಿ ಮಡಿಕೇರಿಯಲ್ಲಿ ಸುಮ್ಮನೆ ಮೂಢನಂತೆ ಕುಳಿತಿರುವೆ. ಇಲ್ಲಿನ ಪರಿಚಿತ ಮುಖಗಳು ಅಪರಿಚಿವಾಗಿ ಕಾಣಿಸುತ್ತಿವೆ. ಗೊತ್ತಿರುವ ದಾರಿಗಳಲ್ಲೇ ದಾರಿತಪ್ಪಿ ಕಕ್ಕಾವಿಕ್ಕಿಯಾಗುತ್ತಿದ್ದೇನೆ. ಕಾಶ್ಮೀರದ ರಾಜಧಾನಿ ಶ್ರೀನಗರ ಮತ್ತು ಲಡಾಕ್ ಪ್ರಾಂತ್ಯದ ನಡುವೆ ಕಾರ್ಗಿಲ್ ಎಂಬ ಯುದ್ದಭೂಮಿ ಬರುತ್ತದೆ.ಕಾರ್ಗಿಲ್ ಪಟ್ಟಣದ ಆಗ್ನೇಯ ದಿಕ್ಕಿನಲ್ಲಿ ಸುಮಾರು ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಈ ಹಿಮಬೆಟ್ಟಗಳ ನಡುವಿನ ಮರುಭೂಮಿಯಂತಿರುವ … Continue reading ಲಡಾಖ್ ಪ್ರವಾಸ ಕಥನ ೧. ಪದ್ಮಸಂಭವನ ಭವಸಾಗರದಲ್ಲಿ