ಹಳೆಯ ಕಾಲದ ಮನೋಚಿಕಿತ್ಸಕ ಡಾಕ್ಟರ ಕಥೆ

ಈ ನಾಚುಕೆಮುಳ್ಳಿನ ಹೂವಿಗೂ ಎಷ್ಟೊಂದು ಸೌಂದರ್ಯ ಎಂದು ನೋಡುತ್ತಿದ್ದೆ. ಇದೇನು ಹೀಗೆ ಇದ್ದಕ್ಕಿದ್ದ ಹಾಗೆ ತಿಂದೇ ಬಿಡುವ ಹಾಗೆ ನೋಡುತ್ತಿದ್ದೀಯಲ್ಲ ಎಂದು ಅದೂ ಗಾಳಿಗೆ ಸಣ್ಣಗೆ ತಲೆ ಅಲ್ಲಾಡಿಸುತ್ತಾ ತನ್ನ ಅಸಮ್ಮತಿಯನ್ನು ತೋರಿಸುತ್ತಿತ್ತು. ಸಣ್ಣದಿರುವಾಗ ಮುಟ್ಟಿದರೆ ಮುನಿಯುತ್ತದೆಯೆಂದು ಮತ್ತೆ ಮತ್ತೆ ಮುಟ್ಟುತ್ತಾ ತುಳಿಯುತ್ತಾ ಗೋಳು ಹೊಯ್ದುಕೊಳ್ಳುತ್ತಿದ್ದ ಅಸಹಾಯಕ ಮುಳ್ಳಿನ ಗಿಡ. ಆಗ ಇದರ ಹೂವಿನ ಚಂದವನ್ನು ಕಾಣುವ ಸಹನೆಯೆಲ್ಲಿತ್ತು? ಈಗ ಕಾಲನ ಹೊಡೆತಕ್ಕೆ ಸಿಲುಕಿರುವ ಈ ನಡುಗಾಲದಲ್ಲಿ ಈ ನಾಚುಕೆಮುಳ್ಳಿನ ಹೂವಿನ ವಯ್ಯಾರ ಬೇರೆ! ನೋಡುನೋಡುತ್ತಿದ್ದಂತೆ ಪುಟ್ಟ … Continue reading ಹಳೆಯ ಕಾಲದ ಮನೋಚಿಕಿತ್ಸಕ ಡಾಕ್ಟರ ಕಥೆ

ಮೊಬೈಲು ಟವರು ಹತ್ತಿದ್ದ ಕಿಶೋರನ ಕಥೆ

‘ಈ ಸಲ ಮದ್ದಿಗೆ ಅಂತ ಹುಡುಕಿದರೂ ಒಂದು ಜಿಗಣೆ ಸಿಗುವುದಿಲ್ಲ.ಅಷ್ಟು ಮಳೆ ಸಾರ್. ಇರುವೆಗಳೂ ಇಲ್ಲ ಏಡಿಗಳೂ ಇಲ್ಲ ಜಿಗಣೆಗಳೂ ಇಲ್ಲ ಎಲ್ಲ ಖಲಾಸ್’ ಎಂದು ದಾರಿ ತೋರಿಸುತ್ತಾ ನಡೆಯುತ್ತಿದ್ದ ಕಿಶೋರ ಗೊಣಗುತ್ತಿದ್ದ. ನನಗೆ ಮಾರ್ಗದರ್ಶಿಯಾಗಿರುವನೆಂಬ ಒಂದು ದೊಡ್ಡ ಹೆಮ್ಮೆ, ಆದರೆ ತಾನಿನ್ನೂ ಬಾಲ್ಯಾವಸ್ತೆಯನ್ನ ದಾಟಿ ಪರಿಪೂರ್ಣ ಯುವಕನಾಗಿಲ್ಲವಲ್ಲ ಎಂಬ ಒಂದು ಸಣ್ಣ ಸಂಕೋಚ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಈ ಊರಿನಲ್ಲಿ ಯಾರೂ ತನ್ನ ಸಾಹಸಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವಲ್ಲ ಎಂಬ ಒಂದು ಶಾಶ್ವತವಾದ ಬೇಸರ ಅವನ ಮುಖದಲ್ಲಿ … Continue reading ಮೊಬೈಲು ಟವರು ಹತ್ತಿದ್ದ ಕಿಶೋರನ ಕಥೆ

ಕಣ್ಣಿಲ್ಲದ ಉದ್ಯಾನ, ಸನ್ಮಾರ್ಗಿಯಲ್ಲದ ಗುಲಾಮ

  ಸರಿ ಸುಮಾರು ಹತ್ತು ವರ್ಷಗಳ ನಾನು ಬರೆದ ಬರಹವೊಂದರ ಅಂಧ ಗಾಯಕಿಯನ್ನು ನಿನ್ನೆ ಸಂಜೆ ಭೇಟಿಯಾದಾಗ ಆಕೆ ಎಲ್ಲವನ್ನೂ ಮರೆತು ಹೋಗಿದ್ದಳು. ಎಲ್ಲವನ್ನು ಅಂದರೆ ಎಲ್ಲವನ್ನೂ. ಆಕೆಯ ತಾಯಿ, ಒಡಹುಟ್ಟಿದ ಮೂವರು ಸಹೋದರಿಯರು, ಭಾಲ್ಯಕಾಲದ ಒಂದಿಬ್ಬರು ಗೆಳತಿಯರ ಹೆಸರುಗಳು ಮತ್ತು ಹೈಸ್ಕೂಲಿನಲ್ಲಿ ಎಲ್ಲರೂ ಒಂದಾಗಿ ಎದ್ದುನಿಂತು ಹಾಡುತ್ತಿದ್ದ ಕನ್ನಡದ ಒಂದು ಪ್ರಾರ್ಥನಾ ಗೀತೆ ಇಷ್ಟು ಬಿಟ್ಟರೆ ಆಕೆ ಬೇರೆಲ್ಲವನ್ನೂ ಮರೆತಿದ್ದಳು. ಹುಟ್ಟಿನಿಂದಲೇ ಅಂಧಳಾಗಿದ್ದ ಈಕೆಯ ಮಿದುಳಿನ ಒಳಕ್ಕೆ ಸೋಂಕಿನ ವೈರಾಣುಗಳು ಹೊಕ್ಕು ಆಕೆ ಉಳಿದ ಎಲ್ಲವನ್ನೂ … Continue reading ಕಣ್ಣಿಲ್ಲದ ಉದ್ಯಾನ, ಸನ್ಮಾರ್ಗಿಯಲ್ಲದ ಗುಲಾಮ

ಮಹಾದೇವ ಮಾಮನ ಜೊತೆಗೆ

  ಭಾರತಕ್ಕೆ ಗಣತಂತ್ರ ಬಂದು ಅರವತ್ಮೂರು ವರ್ಷಗಳಾದವು, ನೀವು ಕುಸುಮಬಾಲೆ ಬರೆದು ಮೂವತ್ತು ವರ್ಷ,ಲಂಕೇಶರು ತೀರಿಹೋಗಿ ಹದಿಮೂರು ವರ್ಷಗಳು.ಹೀಗೆ ವರ್ಷಗಳನ್ನು ನೆನೆನೆನೆದುಕೊಂಡು ನಾವೆಷ್ಟು ದಿನ ಕಾಲ ಕಳೆಯುವುದು?ಇಲ್ಲಿನ ಬಡತನ,ಇಲ್ಲಿನ ಜೀತ,ಇಲ್ಲಿನ ಖದೀಮತನ ಬರೀ ಇವನ್ನೇ ನೆನೆಸಿಕೊಂಡು ಎಷ್ಟು ಅಂತ ಮರುಗುವುದು? ಈ ದೇಶ,ಇಲ್ಲಿನ ಜನ,ಇಲ್ಲಿನ ಖುಷಿ,ಈ ಬಣ್ಣ,ಈ ಮಕ್ಕಳ ನಗು,ಇಲ್ಲಿನ ಕಥೆಗಳು ಇವನ್ನೆಲ್ಲ ನಾವು ಹೇಗೆ ಬರೆಯದಿರುವುದು?’ ಎಂದು ನಾನು ದೇವನೂರು ಮಹಾದೇವರನ್ನು ಒಂದಿಷ್ಟು ಆಕಾಶದ ಕಡೆ ಒಯ್ಯಲು ಹೆಣಗುತ್ತಿದ್ದೆ. ಆದರೆ ಅವರು ಈ ಯಾವುದೇ ಬಣ್ಣದ … Continue reading ಮಹಾದೇವ ಮಾಮನ ಜೊತೆಗೆ

ಕಣ್ಣಿಲ್ಲದ ಪ್ರೀತಿ, ಕಣ್ಣಿಲ್ಲದ ಜೀತ

ಆಕೆ ಕೊಡಗಿನ ಯುವತಿ, ಈತ ಬಯಲು ಸೀಮೆಯ ಹುಡುಗ. ಇಬ್ಬರೂ ಹುಟ್ಟುವಾಗಲೇ ಅಂಧರು. ಆಕೆ ರೇಡಿಯೋದಲ್ಲಿ ಯಾವತ್ತೋ ಒಂದು ದಿನ ಚಂದವಾಗಿ ಹಾಡಿದ್ದಳು. ಅದನ್ನು ಈತ ನಿಮೀಲಿತನಾಗಿ ಕೇಳಿದ್ದ.ಆಮೇಲೆ ಅವರಿಬ್ಬರು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ಒಂದು ದಿನ ಇಬ್ಬರೂ ಯಾವುದೋ ಒಂದು ಬಸ್ಸು ನಿಲ್ದಾಣದಲ್ಲಿ ಭೇಟಿಯಾಗಿದ್ದರು.ಮದುವೆಯಾಗುವಾ ಎಂದು ತೀರ್ಮಾನಿಸಿಕೊಂಡು ದೇಗುಲವೊಂದರಲ್ಲಿ ತಾಳಿಕಟ್ಟಿ ಊರಿಗೆ ವಾಪಸಾಗಿದ್ದರು.ಎಲ್ಲವೂ ಸುಂದರವಾಗಿದೆ ಮತ್ತು ಸುಖವಾಗಿ ಮುಗಿದಿದೆ ಎಂದು ಅವರಿಬ್ಬರೂ ಖುಷಿಯಲ್ಲಿ ತಮ್ಮ ಪ್ರೇಮದ ಕಥೆಯನ್ನು ರೇಡಿಯೋದಲ್ಲಿ ಹೇಳಿದ್ದರು ಮತ್ತು ಅದಕ್ಕೆ ಸರಿ ಹೊಂದುವಂತಹ ಒಂದು … Continue reading ಕಣ್ಣಿಲ್ಲದ ಪ್ರೀತಿ, ಕಣ್ಣಿಲ್ಲದ ಜೀತ

ಒಂದು ದೇಹದಾನದ ಕಥೆ

ಹದಿನೇಳನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಹಾಲೇರಿ ವಂಶದ ಮುದ್ದುರಾಜ ಮಡಿಕೇರಿಯಲ್ಲಿ ಕಟ್ಟಿದ ಕೋಟೆಯೊಳಗೆ ಈಗ ಜಿಲ್ಲಾದಿಕಾರಿಗಳ ಖಚೇರಿಯೂ, ನ್ಯಾಯಾಲಯಗಳ ಸಂಕೀರ್ಣವೂ ಕಾರ್ಯನಿರ್ವಹಿಸುತ್ತಿದೆ. ತೀರ ಇತ್ತೀಚಿನವರೆಗೆ ಜಿಲ್ಲಾ ಕಾರಾಗೃಹವೂ ಇಲ್ಲೇ ಇತ್ತು.ಜೈಲಿನಲ್ಲಿ ಖೈದಿಗಳಾಗಿರುವ ತಮ್ಮ ಗಂಡನನ್ನೋ, ತಂದೆಯನ್ನೋ, ಮಗನನ್ನೋ ಕಾಣಲು ಬಂದ ಅನಧಿಕೃತ ಸಂದರ್ಶಕರು ಕೋಟೆಯ ಎತ್ತರದ ಒಂದು ಪಾಳಿಯನ್ನು ಏರಿ ಕೆಳಕ್ಕೆ ನೋಡುತ್ತ ಕೈಬಾಯಿ ಸಂಜ್ಞೆಯಲ್ಲಿ ಅವರೊಡನೆ ಕಷ್ಟಸುಖಗಳನ್ನು ಹೇಳಿಕೊಳ್ಳುವುದನ್ನು ನೋಡಲು ನಾನೂ ಆಗಾಗ ಕೋಟೆಯ ಪಾಳಿ ಹತ್ತಿ ಕೂತಿರುತ್ತಿದ್ದೆ. ನಾನಾ ಕಾರಣಗಳಿಗಾಗಿ ಜೈಲು ಸೇರಿರುವ ಖೈದಿಗಳು … Continue reading ಒಂದು ದೇಹದಾನದ ಕಥೆ

ನನ್ನದೇ ಹೆಸರಿನ ಅಸ್ಸಾಮಿ

  ಮಡಿಕೇರಿಯ ಹಳೆಯ ಬಸ್ಸು ನಿಲ್ದಾಣದ ಮೇಲ್ಮಹಡಿಯಲ್ಲಿ ರೈಲ್ವೇ ಬುಕಿಂಗ್ ಆಫೀಸು ಇದೆ . ಕೊಡಗಿನಲ್ಲಿ ಎಲ್ಲೂ ರೈಲು ಸಂಚಾರ ಇಲ್ಲದಿರುವುದರಿಂದ ಈ ಆಫೀಸಿನಲ್ಲಿ ಜನರ ಸಂಖ್ಯೆಯೂ ವಿರಳವೇ. ಆದರೂ ದೂರದ ಮೈಸೂರು, ಮಂಗಳೂರು, ಬೆಂಗಳೂರು ರೈಲು ನಿಲ್ದಾಣಗಳಿಂದ ರೈಲು ಹತ್ತಿ ಹೋಗಬೇಕಾದವರು ಇಲ್ಲಿಂದಲೇ ಸೀಟು ಕಾದಿರಿಸಿಕೊಳ್ಳಲು ಬರುವುದರಿಂದಾಗಿ ಒಮ್ಮೊಮ್ಮೆ ಸಣ್ಣಗಿನ ಜನಜಂಗುಳಿಯೂ ಇಲ್ಲಿ ನೆರೆದಿರುತ್ತದೆ. ಒಂದು ರೀತಿಯ ಅನೂಹ್ಯವಾಗಿರುವ, ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳಲು ಆಗದೇ ಇರುವ ಮುಖಗಳು ಇಲ್ಲಿ ಬಂದು, ಕಂಡಿಯೊಳಗೆ ಮುಖತೂರಿಸಿ, ತಮಗೆ ಬೇಕಾದ ಟಿಕೆಟ್ಟುಗಳನ್ನು … Continue reading ನನ್ನದೇ ಹೆಸರಿನ ಅಸ್ಸಾಮಿ

ಕಾಲಕಾಲಕ್ಕೆ ಎಣ್ಣೆ ಪಾಲಾದ ಮಗುವಿನ ಕಥೆ

ಸಂಜೆಯ ಎಳೆಬಿಸಿಲಲ್ಲಿ ಸಣ್ಣಯುವಕನ ಹಾಗೆ ಆ ಹಿರಿಯರು ನಡೆಯುತ್ತಿದ್ದರು. ಅವರಿಂದ ಒಂದು ಸಣ್ಣ ಅಂತರ ಕಾದುಕೊಂಡು ನಾನೂ ನಡೆಯುತ್ತಿದ್ದೆ. ಒಳ್ಳೆಯ ಓದುಗನೂ ಮತ್ತು ಸ್ವತಃ ಬರಹಗಾರನೂ ಆಗಿರುವ ಈ ಹಿರಿಯರಿಗೆ ಇರುವ ಒಂದೇ ಒಂದು ಕೆಟ್ಟ ಅಭ್ಯಾಸವೆಂದರೆ ಆಗಾಗ ಏನಾದರೊಂದು ಗಹನ ಸಂಗತಿಯನ್ನು ಹೇಳುವುದು ಮತ್ತು ಗಹನ ಸಂಗತಿ ನಮಗೆ ಅರ್ಥವಾಯಿತೋ ಇಲ್ಲವೋ ಎಂದು ಖಾತರಿ ಪಡಿಸಲು ಕೇಳಿಸಿಕೊಳ್ಳುತ್ತಿರುವವರ ಭುಜವನ್ನೋ ಬೆನ್ನನ್ನೋ ಅಥವಾ ಕಿಬ್ಬೊಟ್ಟೆಯನ್ನೋ ಜೋರಾಗಿ ಜಿಗುಟುವುದು. ಅದಕ್ಕಾಗಿ ಅವರಿಂದ ಒಂದು ಸಣ್ಣ ಅಂತರ ಕಾದುಕೊಂಡು ನಾನೂ … Continue reading ಕಾಲಕಾಲಕ್ಕೆ ಎಣ್ಣೆ ಪಾಲಾದ ಮಗುವಿನ ಕಥೆ

ಆಸ್ಪತ್ರೆಯಲ್ಲಿ ಹಕ್ಕಿಪಿಕ್ಕಿ

ಮೈಸೂರಿನ ಅತಿ ಹಳೆಯದಾದ ಐತಿಹಾಸಿಕ ಆಸ್ಪತ್ರೆಯೊಂದರ ಹಿಂಬದಿಯಲ್ಲಿರುವ ಹೊಸ ಕಟ್ಟಡವೊಂದರೊಳಗೆ ಬೆಳಬೆಳಗೆಯೇ ಸಿಹಿಮೂತ್ರ ಪರೀಕ್ಷೆಗಾಗಿ ಸರತಿಯಲ್ಲಿ ಕಾಯುತ್ತಿದ್ದೆ. ಬೆಳಬೆಳಗೆಯೇ ಬರಿಹೊಟ್ಟೆಯಲ್ಲಿ ರಕ್ತಪರೀಕ್ಷೆಗೆ ಕಾಯುತ್ತಿರುವ ನಡು ವಯಸ್ಸಿನ ಬೊಕ್ಕತಲೆಯ ಬೊಜ್ಜು ಹೊಟ್ಟೆಯ ಮಧ್ಯಮ ವರ್ಗದ ಗಂಡಸರು, ಬೆಳಬೆಳಗೆಯೇ ಅರಸಿಣವನ್ನೂ ಪೌಡರನ್ನೂ ಏಕಪ್ರಕಾರವಾಗಿ ಮುಖಕ್ಕೆ ಬಳಿದುಕೊಂಡು ಟ್ರೆಡ್ ಮಿಲ್ಲಿನ ಮೇಲೆ ಏದುಸಿರು ಬಿಡುತ್ತಿರುವ ಸಂಕೋಚಮುಖದ ಸ್ತ್ರೀಯರು, ಮೂತ್ರದ ಚೀಲವನ್ನು ಅದರ ಮಿತಿಗಿಂತಲೂ ತುಂಬಿಸಿಕೊಂಡು ತಡೆಯಲಾಗದ ಆತುರವನ್ನು ಹತ್ತಿಕ್ಕಲು ಮುಖ ಕಿವಿಚುತ್ತಾ ಬೆಳಗಿನ ಪತ್ರಿಕೆಯನ್ನು ಓದುತ್ತಿರುವ ಸ್ತ್ರೀಪುರುಷರು! ಅಕಸ್ಮಾತ್ ಕಾರ್ಲ್ ಮಾರ್ಕ್ಸನೂ,ಅಲೆಗ್ಸಾಂಡರನೂ, ಕುಮಾರವ್ಯಾಸನೂ, … Continue reading ಆಸ್ಪತ್ರೆಯಲ್ಲಿ ಹಕ್ಕಿಪಿಕ್ಕಿ

ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ.

  ಬೆಳ್ಳಂಬೆಳಗಿನ ಹೊತ್ತು ಕಾವಳ ತುಂಬಿಕೊಂಡ ಟಾರುರೋಡಿನಲ್ಲಿ ಒಬ್ಬನೇ ಹೋಗುತ್ತಿರುವಾಗ ಸೂರ್ಯನೂ ಮೆಲ್ಲಗೆ ಏಳುತ್ತಿರುತ್ತಾನೆ. ಅರಬಿತಿಟ್ಟಿನ ಕುರುಚಲು ಕಾಡಿನಲ್ಲಿ ಬೆಳಬೆಳಗೆಯೇ ಒಂದೆರೆಡು ನವಿಲುಗಳು ಕೇಕೆ ಹಾಕುತ್ತವೆ. ಹಿರಿಯ ಕಥೆಗಾರ ಚದುರಂಗರು ಬದುಕಿದ್ದಾಗ ಈ ಕಾಡಿಗೆ ಅರಬಿತಿಟ್ಟು ಎಂಬ ಹೆಸರು ಯಾಕೆ ಬಂತು ಎಂದು ಒಂದು ದೊಡ್ಡ ಕಥೆಯನ್ನೇ ಹೇಳಿದ್ದರು.ಹಿಂದಿನ ಕಾಲದಲ್ಲಿ ಅರೇಬಿಯಾ ದೇಶದಿಂದ ಬಂದಿದ್ದ ಚೋರನೊಬ್ಬ ಈ ಕಾಡಿನಲ್ಲಿ ಅಡಗಿ ಕುಳಿತು ದಾರಿಹೋಕರನ್ನು ಸುಲಿಯುತ್ತಿದ್ದನಂತೆ. ಆದರೆ ಆತ ಸ್ವಲ್ಪ ಒಳ್ಳೆಯ ಚೋರನಂತೆ. ಕದ್ದ ಹಣವನ್ನು ಕಷ್ಟದಲ್ಲಿರುವವರಿಗೆ ಕೊಟ್ಟುಹೋಗುತ್ತಿದ್ದನಂತೆ. … Continue reading ಜೇಬುಕತ್ತರಿಸಿಕೊಂಡ ಟಿಬೆಟನ್ನನ ಕಥೆ.

ಅಲ್ಲಾಡುತ್ತಿದ್ದ ಹಳೆಯ ಅಂಬಾಸಡರ್

ಲೋಕ ಇಲ್ಲಿಯೇ ಕೊನೆಯಾಗುತ್ತದೆಯೇನೋ ಎಂಬಂತಿರುವ ಒಂಟಿದಾರಿಯ ತುದಿ. ಮುಸ್ಸಂಜೆಯ ನಸುಗೆಂಪಲ್ಲಿ ಎದುರಿನಿಂದ ಅವಿತು ಅವಿತು ಬರುತ್ತಿರುವ ಮಂಜಿನ ತೆರೆ ಮಾಯಾವಿಯೊಬ್ಬನ ಕಂಬಳಿಯಂತೆ ನೆಲವನ್ನು ತಬ್ಬಿಕೊಳ್ಳುತ್ತಿತ್ತು. ಕತ್ತಲಾಗುತ್ತಿರುವ ಆಕಾಶದಲ್ಲಿ ಮಂಜಿನ ನಡುವೆ ಬೆಳ್ಳಕ್ಕಿಗಳೂ ಹಾರತೊಡಗಿ ಈಗಲೇ ಇರುವ ದುಗುಡ ಇನ್ನಷ್ಟು ಭಾರವಾಗಿ ಕಣ್ಣು ಕತ್ತಲಿಟ್ಟಂತಾಗುತ್ತಿತ್ತು. ಇನ್ನೂ ಹೋಗುವುದಾದರೆ ಪ್ರಪಾತವನ್ನು ಇಳಿದು ಕೆಳಗೆ ಹಾವಿನಂತೆ ಹರಿದುಹೋಗುವ ಟಾರುರೋಡನ್ನು ಸೇರಬೇಕು. ಹೋಗಲು ಮನಸಿಲ್ಲದಿದ್ದರೆ ಇಲ್ಲೇ ನಿಂತುಕೊಂಡು ಹಬ್ಬಿರುವ ಮಂಜಿಗೆ ನಮ್ಮ ಉಸಿರನ್ನೂ ಸೇರಿಸಿಕೊಂಡು ಆಕಾಶದಲ್ಲಿ ನಕ್ಷತ್ರಗಳು ಹುಟ್ಟುವುದನ್ನು ನೋಡುತ್ತಾ ನಿಂತುಕೊಳ್ಳಬೇಕು. ಹಾಗೇ … Continue reading ಅಲ್ಲಾಡುತ್ತಿದ್ದ ಹಳೆಯ ಅಂಬಾಸಡರ್

ಆಕಾಶ ಕಾಡು ಬೆಂಕಿ

ಬೆಳದಿಂಗಳಿನ ಹಾಗಿದ್ದ ಈ ತರುಣಿಯೂ ಈಗ ಹೊರಟುಹೋಗಿದ್ದಾಳೆ. ಎಲ್ಲಿಂದಲೋ ಬಂದವಳು, ಕೊಂಚ ದಿನ ಇಲ್ಲಿದ್ದವಳು, ಥಾಯ್ಲೆಂಡ್ ತಿರುಗಿ ಮುಗಿಸಿ ಈಗ ಕೆನಡಾದ ಯಾವುದೋ ಹಿಮಪರ್ವತದ ತಪ್ಪಲಿಗೆ ಹೊರಟು ಹೋಗಿದ್ದಾಳೆ. ಆಕೆ ಇಲ್ಲಿ ಇದ್ದಾಗ ಇಲ್ಲಿನ ಅನಾಥ ಮಕ್ಕಳ ಆಶ್ರಯದ ಮನೆಯಲ್ಲಿ ಬಹುಶಃ ತನ್ನ ಇಪ್ಪತ್ತಾರನೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ದಿನವೂ ಸಂಜೆ ಆ ಮಕ್ಕಳ ಜೊತೆ ಆಟವಾಡಲು ಬರುತ್ತಿದ್ದಳು. ಅವರನ್ನು ಇಲ್ಲೇ ಹತ್ತಿರದ ಕಲ್ಲು ಗುಡ್ಡವನ್ನು ಏರಲು ಕರೆದುಕೊಂಡು ಹೋಗುತ್ತಿದ್ದಳು. ಒಬ್ಬೊಬ್ಬರೇ ಅನಾಥ ಹುಡುಗರ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿ … Continue reading ಆಕಾಶ ಕಾಡು ಬೆಂಕಿ

ಉತ್ತರ ದೇಶದ ಕಥೆಗಳು

ಮಹಾರಾಜರ ಆಧುನಿಕ ಮೈಸೂರಿನಿಂದ ಹೊರಟು ಐದನೇ ಶತಮಾನದ ಎಲ್ಲೋರಾ ಗುಹೆಗಳಿರುವ ಮಹಾರಾಷ್ಟ್ರದ ಔರಂಗಾಬಾದಿನವರೆಗೆ ಜೀಪು ಓಡಿಸಿಕೊಂಡು ಹೋಗಿ ಬಂದೆವು. ದಾರಿಯ ಉದ್ದಕ್ಕೂ ಮಳೆಯ ನೆರಳು, ಕಣ್ಣಿನ ಹಸಿವು ಇಂಗಿ ಹೋಗುವಷ್ಟು ಹಚ್ಚಹಸಿರು ಹೊಲಗಳು,ಮನಸ್ಸು ತೊಯ್ದು ಹೋಗುವಷ್ಟು ಒಳ್ಳೆ ಒಳ್ಳೆ ಮನುಷ್ಯರು,ಉದ್ದಕ್ಕೂ ರಾಚುವ ರಾಜಕಾರಣ ಮತ್ತು ಧಾರ್ಮಿಕತೆಯ ಖೂಳಕೃತ್ಯಗಳು, ಸಾವಿರಾರು ವರ್ಷಗಳಿಂದ ಇದೆಲ್ಲವನ್ನು ನೋಡಿ ಸಹಿಸಿ ಇನ್ನೂ ಒಳ್ಳೆಯವರಾಗಿಯೇ ಉಳಿದಿದ್ದೇವೆ ಎಂಬಂತೆ ಹೊಲಗದ್ದೆಗಳಿಂದ ಎತ್ತಿನ ಬಂಡಿಯೇರಿ ಅನಾಮಿಕರಾಗಿ ಹೊರಬರುತ್ತಿರುವ ರೈತಾಪಿ ಜನಗಳು. ಅವರ ಆತ್ಮಬಲವೋ ಎಂಬಂತೆ ತಮ್ಮ ದಷ್ಟಪುಷ್ಟ … Continue reading ಉತ್ತರ ದೇಶದ ಕಥೆಗಳು

ಪತಿದೇವರಂತಹ ವಯೋವೃದ್ಧ ಉರಗ

ಕಳೆದ ಶನಿವಾರ ಇಲ್ಲೊಂದು ಸಂಗತಿ ನಡೆಯಿತು. ಇಲ್ಲಿನ ಹಾಸ್ಟೆಲ್ ಒಂದರ ಹುಡುಗರು ಶಾಲೆಯಿಂದ ಮಳೆಯಲ್ಲಿ ನೆನೆದುಕೊಂಡು ಬರುವಾಗ ಮೂತ್ರ ಹೊಯ್ಯಲು ಶಿಥಿಲವಾಗಿರುವ ಮನೆಯೊಂದರ ಜರಿದ ಗೋಡೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ಸಾಮೂಹಿಕ ಮೂತ್ರ ಶಕ್ತಿಯಿಂದ ಈ ಗೋಡೆಯನ್ನು ಒಂದಿಲ್ಲ ಒಂದುದಿನ ಬೀಳಿಸುತ್ತೇವೆ ಎನ್ನುವುದು ಈ ಬಡ ಹುಡುಗರ ಕನಸಂತೆ. ಈ ಹಾಸ್ಟೆಲಿನ ಪರಿಚಾರಿಕೆಯೊಬ್ಬರು ಮಧ್ಯಾಹ್ನದ ಹೊತ್ತು ಗಾಬರಿಯಲ್ಲಿ ಕರೆದು ‘ಯಾರಾದರೂ ಹಾವು ಹಿಡಿಯುವವರಿದ್ದರೆ ಕರೆದುಕೊಂಡು ಬನ್ನಿ’ ಎಂದು ಕೇಳಿಕೊಂಡರು. ‘ಹಾವು ಹಿಡಿಯುವವರು ದೂರದಲ್ಲಿ ಕಾರ್ಯಮಗ್ನರಾಗಿದ್ದಾರೆ, ನಾನೇ ಬರುತ್ತೇನೆ’ … Continue reading ಪತಿದೇವರಂತಹ ವಯೋವೃದ್ಧ ಉರಗ

ಗೆಳೆಯನಂತಿರುವ ಈ ಚೆಲುವ ಬಸವನ ಹುಳ

ಇಲ್ಲಿ ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಬಣ್ಣದ ಬಸವನ ಹುಳವೊಂದು ನನ್ನ ಸಹಪಾಠಿಯಂತೆ ಇಲ್ಲೇ ಸನಿಹದಲ್ಲಿ ಓಡಾಡುತ್ತಿದೆ. ಒಳ್ಳೆ ಸಾಕಿದ ಹರಿಣಿಯಂತೆ ಇಲ್ಲೇ ಮೇದುಕೊಂಡು, ಚಿಪ್ಪಿನೊಳಕ್ಕೆ ತನ್ನ ಹಸಿಹಸಿ ಕೆಂಪು ಮೈಯನ್ನು ಪೂರ್ತಾ ಎಳೆದುಕೊಂಡು ನಿದ್ದೆ ಹೊಡೆಯುತ್ತಾ ಕಾಲಕಳೆಯುತ್ತಿದೆ. ‘ಯಾಕೆ ಈ ಅಪರಿಮಿತ ಸುಂದರ ತರುಣ ಹೀಗೆ ಒಬ್ಬನೇ ಕಾಲದ ಪರಿವೆಯಿಲ್ಲದೆ ಇಲ್ಲೇ ಇದೆ? ಇದಕ್ಕೇನು ಸಂಸಾರ, ಸಮಾಜ, ಪ್ರೇಮ, ಕಾಮ ಏನೂ ಇಲ್ಲವೇ’ ಎಂದು ಬಹಳ ಕಾಲದಿಂದ ಚಿಂತಿಸುತ್ತಿರುವೆ. ಎಲ್ಲವೂ ಇದ್ದ ಹಾಗೆ ಕಾಣಿಸುತ್ತಿದ್ದರೂ ಆ … Continue reading ಗೆಳೆಯನಂತಿರುವ ಈ ಚೆಲುವ ಬಸವನ ಹುಳ

ಪರದಂಡ ಚಂಗಪ್ಪನವರ ದೇವಪುರಾಣ

ಮನಸಿನೊಳಗೆ ಮಹಾ ಶಾಂತ ಸ್ವಭಾವವನ್ನೂ, ಮುಖದಲ್ಲಿ ಅಪಾರ ಸಾತ್ವಿಕತೆಯನ್ನೂ ತುಂಬಿಕೊಂಡಿದ್ದ ಪರದಂಡ ಚಂಗಪ್ಪನವರು ನಿನ್ನೆ ಅಪರಾಹ್ನ ಮೂರೂವರ ಗಂಟೆಯ ಸುಮಾರಿಗೆ ನನ್ನನ್ನು ನೋಡಲು ಬಂದಾಗ ಅವರಿಗೆ ೯೪ ವರ್ಷ ಕಳೆದು ೯೫ ತುಂಬಿ ಅದಾಗಲೇ ಆರು ತಿಂಗಳುಗಳು ಕಳೆದಿದ್ದವು. ಅದಾಗಲೇ ಮೂರುನಾಲ್ಕು ಸಲ ಅವರನ್ನು ಕಂಡು ಪರಿಚಿತನಾಗಿದ್ದ ನನಗೆ ಅವರ ಆ ಶಾಂತ ಮುಖದಲ್ಲಿ ಅಪಾರ ತುಂಟತನಗಳೂ ಅವರ ಅರೆಮುಚ್ಚಿದ್ದ ಕಣ್ಣುಗಳಲ್ಲಿ ನೂರಾರು ಹೇಳದ ಕಥೆಗಳೂ ಕಂಡು ಬಂದು ‘ಬನ್ನಿ ಚಂಗಪ್ಪನವರೇ ಮೊದಲು ಒಂದು ಕಪ್ಪು ಖಾಲಿ … Continue reading ಪರದಂಡ ಚಂಗಪ್ಪನವರ ದೇವಪುರಾಣ

ಕಾಳಿ ತೋರಿಸಿದ ಕಾಡು ದಾರಿ

ಇಲ್ಲೊಂದು ಕಡೆ ಕಾವೇರಿ ತೀರದ ನಡು ಗುಡ್ಡೆಯಲ್ಲಿ ಜೇನು ಕುರುಬರ ವರ್ಷಾವಧಿ ಜಾತ್ರೆ ನೆರವೇರುತ್ತದೆ. ಅದು ಅಮ್ಮಾಳೆಯಮ್ಮನ ಹಬ್ಬ. ಯಾರೋ ಕಾಡೊಳಗೆ ಅನಾಥರನ್ನಾಗಿ ಬಿಟ್ಟು ಹೋದ ಏಳು ಜನ ಅಣ್ಣ ತಂಗಿಯರನ್ನು ಈಕೆ ಬೆಳಸಿ ದೊಡ್ಡವರನ್ನಾಗಿ ಮಾಡಿದಳಂತೆ. ಆ ಏಳು ಜನ ಅಣ್ಣ ತಂಗಿಯರು ಕಾಲಾಂತರದಲ್ಲಿ ಈ ಸೀಮೆಯ ದೇವದೇವತೆಯರಾಗಿ ಆಳುತ್ತಿದ್ದರಂತೆ. ಈಗಲೂ ಈ ಅಮ್ಮಾಳೆಯಮ್ಮನೇ ತಮ್ಮನ್ನೂ ಉಳಿದ ದೇವಾನುದೇವತೆಯರನ್ನೂ ಪೊರೆಯುವಳು ಎಂಬ ನಂಬಿಕೆಯಿಂದ ಅವರು ಈ ನಡುಗುಡ್ಡೆಯ ತಾರಿ ಮರವೊಂದರ ಕೆಳಗೆ ಕಲ್ಲಾಗಿ ಕುಳಿತಿರುವ ಅಮ್ಮಾಳೆಯಮ್ಮನನ್ನು … Continue reading ಕಾಳಿ ತೋರಿಸಿದ ಕಾಡು ದಾರಿ

ಹೆಣ್ಣುಕೋಳಿಯ ವೃದ್ದಾಪ್ಯದ ದಿನಗಳು

ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಕಡಿದಾದ ದಾರಿಯಲ್ಲಿ ಸ್ವಲ್ಪ ಇಳಿದರೆ ಈ ಜಾಗ ಬರುತ್ತದೆ. ಒಂದು ತುಕ್ಕು ಹಿಡಿದು ಹಳೆಯದಾದ ಅಕ್ಕಿಯ ಮಿಲ್ಲು, ಒಂದೆರೆಡು ಪುಡಿ ಅಂಗಡಿಗಳು ಮತ್ತು ಹೊಸದಾಗಿ ಆರಂಭಗೊಂಡಿರುವ ಒಂದು ವಿಹಾರಧಾಮ ಮತ್ತು ಯಾರೋ ಹಳೆಯ ಕಾಲದಲ್ಲಿ ನೆಟ್ಟು ಈಗ ಯಾರಿಗೂ ಬೇಡವಾಗಿ ಆಕಾಶದೆತ್ತರಕ್ಕೆ ನಿಂತಿರುವ ಅಡಿಕೆ ಮರಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ನೀವು ಸುಯ್ಯೆಂದು ಇಳಿದು ಹೋದರೆ ಇದೊಂದು ಇಳಿಜಾರು ಅಷ್ಟೇ. ನೀವು ಕೊಂಚ ನಿಧಾನಕ್ಕೆ ಹೋದರೆ ಇದೊಂದು ನಯನ ಮನೋಹರ ಗ್ರಾಮ. ನೀವು ಇನ್ನೂ … Continue reading ಹೆಣ್ಣುಕೋಳಿಯ ವೃದ್ದಾಪ್ಯದ ದಿನಗಳು

ಖಾನ್ ಸಾಹೇಬರು ಹೇಳಿದ ಬಿರಿಯಾನಿಯ ಕಥೆ

  ನನಗೆ ಇತ್ತೀಚೆಗೆ ತೀರಾ ತಲೆ ತಿನ್ನುತ್ತಿದ್ದ ವಿಷಯ ತೀರಿಹೋಗಿರುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಬಿರಿಯಾನಿ ತಿನ್ನುತ್ತಿದ್ದರಾ ಎಂಬುದಾಗಿತ್ತು. ಏಕೆಂದರೆ ನನಗೆ ಪರಿಚಯವಿದ್ದ ಬಿರಿಯಾನಿ ಮಾಡುವ ಅಡುಗೆ ಅಜ್ಜಿಯೊಬ್ಬಳು ೧೯೭೮ನೇ ಇಸವಿಯಲ್ಲಿ ಮಡಿಕೇರಿಗೆ ಆತ್ಮಕತೆ ಬರೆಯಲು ಬಂದಿದ್ದ ಇಂದಿರಾಗಾಂಧಿಗೆ ತಾನು ಕೈಯ್ಯಾರೆ ಬಿರಿಯಾನಿ ಮಾಡಿ ಕಳಿಸಿದ್ದೆ ಮತ್ತು ಆ ಬಿರಿಯಾನಿ ತಿಂದ ಇಂದಿರಾಗಾಂಧಿಯವರು ತನ್ನ ಅಡುಗೆಯನ್ನು ಹಾಡಿ ಹೊಗಳಿದ್ದರು ಎಂದು ತನ್ನನ್ನು ತಾನೇ ಹೊಗಳಿಕೊಂಡಿದ್ದಳು. ಆಕೆ ಹೇಳಿದ ಈ ಇತಿಹಾಸಕ್ಕೆ ಲಿಖಿತ ದಾಖಲೆಗಳೇನಾದರೂ ಇರಬಹುದೇ ಎಂದು … Continue reading ಖಾನ್ ಸಾಹೇಬರು ಹೇಳಿದ ಬಿರಿಯಾನಿಯ ಕಥೆ

ಒಂದು ಫೋಟೋ ಷೂಟಿಂಗು

ಸಂಜೆಯ ಹೊತ್ತು. ಮುಖಕ್ಕೆ ಮಂಜಿನ ಸೆರಗು ಎಳೆದುಕೊಂಡು ಪತಿವ್ರತೆಯರಂತೆ ತಲೆತಗ್ಗಿಸಿ ನಿಂತಿರುವ ಗಾಳಿ ಮರಗಳು ತಾವು ಇರುವೆವೋ ಇಲ್ಲವೋ ಎಂಬಂತೆ ಮರೆಯಾಗಲು ಹವಣಿಸುತ್ತಿದ್ದವು. ಅಷ್ಟು ಹೊತ್ತಿಗೆ ಆ ಬೆಟ್ಟದ ಮಣ್ಣುದಾರಿ ಏರಿಕೊಂಡು ಬಂದ ಅತ್ಯಾಧುನಿಕ ವಾಹನವೊಂದು ತಾನೂ ಆ ಮಂಜನ್ನು ಸರಿಸಿಕೊಂಡು ರಾಕ್ಷಸನಂತೆ ಆರ್ಭಟಿಸಿ ನಿಂತಿತು. ಅದಾಗ ತಾನೇ ತನ್ನ ಮಾಂಸಖಂಡಗಳನ್ನು ಹುರಿಗೊಳಿಸಿ ಬಂದಂತೆ ಕಾಣುತ್ತಿದ್ದ ದುಡುಕುಮುಖದ ಯುವಕ ಅದರೊಳಗಿಂದ ಮೊದಲು ಇಳಿದ. ಅವನ ಜೊತೆಗಿರಲು ತಾನೂ ಕಠಿಣಳಾಗಬೇಕೆಂದೇನಿಲ್ಲ.ತನ್ನ ಮಂದನಡಿಗೆಯೊಂದೇ ಸಾಕು ಅವನು ಅಳುವಂತೆ ಮಾಡಲು ಎಂಬ … Continue reading ಒಂದು ಫೋಟೋ ಷೂಟಿಂಗು