ಕಾಳಿ ತೋರಿಸಿದ ಕಾಡು ದಾರಿ

ಇಲ್ಲೊಂದು ಕಡೆ ಕಾವೇರಿ ತೀರದ ನಡು ಗುಡ್ಡೆಯಲ್ಲಿ ಜೇನು ಕುರುಬರ ವರ್ಷಾವಧಿ ಜಾತ್ರೆ ನೆರವೇರುತ್ತದೆ. ಅದು ಅಮ್ಮಾಳೆಯಮ್ಮನ ಹಬ್ಬ. ಯಾರೋ ಕಾಡೊಳಗೆ ಅನಾಥರನ್ನಾಗಿ ಬಿಟ್ಟು ಹೋದ ಏಳು ಜನ ಅಣ್ಣ ತಂಗಿಯರನ್ನು ಈಕೆ ಬೆಳಸಿ ದೊಡ್ಡವರನ್ನಾಗಿ ಮಾಡಿದಳಂತೆ. ಆ ಏಳು ಜನ ಅಣ್ಣ ತಂಗಿಯರು ಕಾಲಾಂತರದಲ್ಲಿ ಈ ಸೀಮೆಯ ದೇವದೇವತೆಯರಾಗಿ ಆಳುತ್ತಿದ್ದರಂತೆ. ಈಗಲೂ ಈ ಅಮ್ಮಾಳೆಯಮ್ಮನೇ ತಮ್ಮನ್ನೂ ಉಳಿದ ದೇವಾನುದೇವತೆಯರನ್ನೂ ಪೊರೆಯುವಳು ಎಂಬ ನಂಬಿಕೆಯಿಂದ ಅವರು ಈ ನಡುಗುಡ್ಡೆಯ ತಾರಿ ಮರವೊಂದರ ಕೆಳಗೆ ಕಲ್ಲಾಗಿ ಕುಳಿತಿರುವ ಅಮ್ಮಾಳೆಯಮ್ಮನನ್ನು … Continue reading ಕಾಳಿ ತೋರಿಸಿದ ಕಾಡು ದಾರಿ

ಹೆಣ್ಣುಕೋಳಿಯ ವೃದ್ದಾಪ್ಯದ ದಿನಗಳು

ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಕಡಿದಾದ ದಾರಿಯಲ್ಲಿ ಸ್ವಲ್ಪ ಇಳಿದರೆ ಈ ಜಾಗ ಬರುತ್ತದೆ. ಒಂದು ತುಕ್ಕು ಹಿಡಿದು ಹಳೆಯದಾದ ಅಕ್ಕಿಯ ಮಿಲ್ಲು, ಒಂದೆರೆಡು ಪುಡಿ ಅಂಗಡಿಗಳು ಮತ್ತು ಹೊಸದಾಗಿ ಆರಂಭಗೊಂಡಿರುವ ಒಂದು ವಿಹಾರಧಾಮ ಮತ್ತು ಯಾರೋ ಹಳೆಯ ಕಾಲದಲ್ಲಿ ನೆಟ್ಟು ಈಗ ಯಾರಿಗೂ ಬೇಡವಾಗಿ ಆಕಾಶದೆತ್ತರಕ್ಕೆ ನಿಂತಿರುವ ಅಡಿಕೆ ಮರಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ನೀವು ಸುಯ್ಯೆಂದು ಇಳಿದು ಹೋದರೆ ಇದೊಂದು ಇಳಿಜಾರು ಅಷ್ಟೇ. ನೀವು ಕೊಂಚ ನಿಧಾನಕ್ಕೆ ಹೋದರೆ ಇದೊಂದು ನಯನ ಮನೋಹರ ಗ್ರಾಮ. ನೀವು ಇನ್ನೂ … Continue reading ಹೆಣ್ಣುಕೋಳಿಯ ವೃದ್ದಾಪ್ಯದ ದಿನಗಳು

ಖಾನ್ ಸಾಹೇಬರು ಹೇಳಿದ ಬಿರಿಯಾನಿಯ ಕಥೆ

  ನನಗೆ ಇತ್ತೀಚೆಗೆ ತೀರಾ ತಲೆ ತಿನ್ನುತ್ತಿದ್ದ ವಿಷಯ ತೀರಿಹೋಗಿರುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಬಿರಿಯಾನಿ ತಿನ್ನುತ್ತಿದ್ದರಾ ಎಂಬುದಾಗಿತ್ತು. ಏಕೆಂದರೆ ನನಗೆ ಪರಿಚಯವಿದ್ದ ಬಿರಿಯಾನಿ ಮಾಡುವ ಅಡುಗೆ ಅಜ್ಜಿಯೊಬ್ಬಳು ೧೯೭೮ನೇ ಇಸವಿಯಲ್ಲಿ ಮಡಿಕೇರಿಗೆ ಆತ್ಮಕತೆ ಬರೆಯಲು ಬಂದಿದ್ದ ಇಂದಿರಾಗಾಂಧಿಗೆ ತಾನು ಕೈಯ್ಯಾರೆ ಬಿರಿಯಾನಿ ಮಾಡಿ ಕಳಿಸಿದ್ದೆ ಮತ್ತು ಆ ಬಿರಿಯಾನಿ ತಿಂದ ಇಂದಿರಾಗಾಂಧಿಯವರು ತನ್ನ ಅಡುಗೆಯನ್ನು ಹಾಡಿ ಹೊಗಳಿದ್ದರು ಎಂದು ತನ್ನನ್ನು ತಾನೇ ಹೊಗಳಿಕೊಂಡಿದ್ದಳು. ಆಕೆ ಹೇಳಿದ ಈ ಇತಿಹಾಸಕ್ಕೆ ಲಿಖಿತ ದಾಖಲೆಗಳೇನಾದರೂ ಇರಬಹುದೇ ಎಂದು … Continue reading ಖಾನ್ ಸಾಹೇಬರು ಹೇಳಿದ ಬಿರಿಯಾನಿಯ ಕಥೆ

ಒಂದು ಫೋಟೋ ಷೂಟಿಂಗು

ಸಂಜೆಯ ಹೊತ್ತು. ಮುಖಕ್ಕೆ ಮಂಜಿನ ಸೆರಗು ಎಳೆದುಕೊಂಡು ಪತಿವ್ರತೆಯರಂತೆ ತಲೆತಗ್ಗಿಸಿ ನಿಂತಿರುವ ಗಾಳಿ ಮರಗಳು ತಾವು ಇರುವೆವೋ ಇಲ್ಲವೋ ಎಂಬಂತೆ ಮರೆಯಾಗಲು ಹವಣಿಸುತ್ತಿದ್ದವು. ಅಷ್ಟು ಹೊತ್ತಿಗೆ ಆ ಬೆಟ್ಟದ ಮಣ್ಣುದಾರಿ ಏರಿಕೊಂಡು ಬಂದ ಅತ್ಯಾಧುನಿಕ ವಾಹನವೊಂದು ತಾನೂ ಆ ಮಂಜನ್ನು ಸರಿಸಿಕೊಂಡು ರಾಕ್ಷಸನಂತೆ ಆರ್ಭಟಿಸಿ ನಿಂತಿತು. ಅದಾಗ ತಾನೇ ತನ್ನ ಮಾಂಸಖಂಡಗಳನ್ನು ಹುರಿಗೊಳಿಸಿ ಬಂದಂತೆ ಕಾಣುತ್ತಿದ್ದ ದುಡುಕುಮುಖದ ಯುವಕ ಅದರೊಳಗಿಂದ ಮೊದಲು ಇಳಿದ. ಅವನ ಜೊತೆಗಿರಲು ತಾನೂ ಕಠಿಣಳಾಗಬೇಕೆಂದೇನಿಲ್ಲ.ತನ್ನ ಮಂದನಡಿಗೆಯೊಂದೇ ಸಾಕು ಅವನು ಅಳುವಂತೆ ಮಾಡಲು ಎಂಬ … Continue reading ಒಂದು ಫೋಟೋ ಷೂಟಿಂಗು

ಖ್ಯಾತ ಸಹಾಯಕ ನಿರ್ದೇಶಕರ ಕಥೆ

ಸಾಕಷ್ಟು ಹೆಸರುವಾಸಿಯಾಗಿರುವ ಸಹಾಯಕ ನಿರ್ದೇಶಕರೊಬ್ಬರು ಬೆಳಬೆಳಗೆಯೇ ಫೋನು ಮಾಡಿದ್ದರು. ಈ ಸಹಾಯಕ ನಿರ್ದೇಶನ ಎಂಬುದು ಅವರ ಬೃಹತ್ ಜೀವನ ಗಾಥೆಯ ಹತ್ತನೆಯದೋ ಹನ್ನೊಂದನೆಯದೋ ಅವತಾರ ಇರಬೇಕು. ಇದಕ್ಕೂ ಮೊದಲು ಅವರು ಕವಿಯಾಗಿ, ನಟರಾಗಿ, ಬಾತ್ಮೀದಾರರಾಗಿ, ಸಂಸಾರಸ್ತರಾಗಿ,ಕೆಲವು ಕಾಲ ಯೋಗಿಯಾಗಿ ಹಲವು ಅವತಾರಗಳನ್ನು ತಳೆದಿದ್ದರು. ಎಲ್ಲದರಲ್ಲೂ ತಮ್ಮ ವಿಶಿಷ್ಟ ಚಾಪನ್ನು ಮೂಡಿಸುವ ಹಠ ಅವರದ್ದು.ಹಾಗಾಗಿ ಅವರಿಂದ ಕೆಲಸ ತೆಗೆಯಬೇಕಾದ ಯಜಮಾನರುಗಳು ಅವರ ಬಗ್ಗೆ ಅಸಹನೆಯೋ ಅಥವಾ ಅಸೂಯೆಯೋ ಏನೋ ಒಂದನ್ನು ಬೆಳೆಸಿಕೊಂಡು ಅವರನ್ನು ಮನೆಗೆ ಕಳಿಸುತ್ತಿದ್ದರು. ಹಾಗೆ ಕಳಿಸಿದಾಗಲೆಲ್ಲ … Continue reading ಖ್ಯಾತ ಸಹಾಯಕ ನಿರ್ದೇಶಕರ ಕಥೆ

ಹಳೆಯ ಬೈಕು ಅದೇ ಹಳೆಯ ಮನುಷ್ಯ

ಸ್ವಲ್ಪ ಹೊತ್ತು ರಾಚಿದ ಮಳೆಯ ನಂತರ ಇಲ್ಲಿ ನಿನ್ನೆ ಮಧ್ಯಾಹ್ನ ಜೋರಾಗಿ ಮಂಜು ತುಂಬಿಕೊಂಡಿತ್ತು. ನಂತರ ಸ್ವಲ್ಪವೇ ಚುರುಕು ಬಿಸಿಲು ಅಲ್ಲಲ್ಲಿ ಹಾದುಹೋಯಿತು. ನಡು ಮಧ್ಯಾಹ್ನದ ಹೊತ್ತು ಮಳೆಯ ನಂತರ ಮಂಜಿನ ನಡುವೆ ಅಲ್ಲಲ್ಲಿ ಬಿಸಿಲೂ ಇಣುಕುತ್ತಿದ್ದರೆ ಇನ್ನೇನೂ ಬೇಕಾಗಿಲ್ಲ ಎನ್ನುವ ಹಾಗೆ ಇಳೆಗೆ ಇಳೆಯೇ ದೇವಲೋಕದಂತೆ ಬೆಳಗುತ್ತಿರುತ್ತದೆ. ಎಂತಹ ಸೂರ್ಯಪ್ರಕಾಶದ ಹಗಲಲ್ಲೂ ಇರದಷ್ಟು ಚೆಲುವಿನ ಬೆಳಕು. ಆದರೆ ನಡೆಯುವ ಜನರು, ನಿಂತಿರುವ ಮರಗಳು ಮತ್ತು ಅವುಗಳ ಚೂಪು ಎಲೆಗಳಿಂದ ಬೇಕೋ ಬೇಡವೋ ಎಂಬಂತೆ ಬೀಳುತ್ತಿರುವ ಮಳೆಯ … Continue reading ಹಳೆಯ ಬೈಕು ಅದೇ ಹಳೆಯ ಮನುಷ್ಯ

ನೀಲಿ ಕೊಡೆಯ ಚೆಲುವೆ

ಇಲ್ಲಿ ಬಿಸಿಲಿದ್ದರೂ, ಚಳಿಯಿದ್ದರೂ, ಮಂಜು ಮಳೆ ಸುರಿಯುತಿದ್ದರೂ ನಡುವಯಸ್ಸಿನ ಚೆಲುವೆಯೊಬ್ಬರು ನೀಲಬಣ್ಣದ ಕೊಡೆಯೊಂದನ್ನು ಹಿಡಿದುಕೊಂಡು ಈ ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ನಡೆದು ಹೋಗುತ್ತಿರುತ್ತಾರೆ. ಯಾವುದೋ ದೇಶ ಕಾಲ ಪ್ರಾಂತ್ಯ ಧರ್ಮಕ್ಕೆ ಸೇರಿದ ಸ್ವಲ್ಪ ವಯಸ್ಸಾದ ರಾಜಕುಮಾರಿಯೊಬ್ಬಳನ್ನು ಯಾರೋ ಈ ನಗರದಲ್ಲಿ ಇಳಿಸಿ ಮುಂದಿನ ನಿನ್ನ ದಾರಿಯನ್ನು ನೀನೇ ನೋಡಿಕೋ ಎಂದು ಬಿಟ್ಟು ಹೋಗಿರುವ ಹಾಗೆ ಆಕೆ ಕಾಣಿಸುತ್ತಾಳೆ. ಕಿವಿಯ ತುಂಬ ಲೋಲಾಕುಗಳು,ಕೈಯ ತುಂಬಾ ಗಾಜಿನ ಬಳೆಗಳು ಮೈಯ ಒಂದಿಂಚೂ ಕಾಣಿಸದ ಹಾಗೆ ಸುತ್ತಿಕೊಂಡಿರುವ ಅವಳ … Continue reading ನೀಲಿ ಕೊಡೆಯ ಚೆಲುವೆ

ಕವಿ ಹೃದಯ ಮತ್ತು ಕಾಡುಹಂದಿ

ಅಮವಾಸ್ಯೆಯ ನಡು ಇರುಳು, ‘ಇನ್ನೆಂದೂ ಹೀಗೆ ಸುರಿಯಲಾರೆ. ಈಗ ಸುರಿಯುತ್ತಿರುವ ನನ್ನನ್ನು ಮೊಗೆದು ಮೊಗೆದು ಕುಡಿ’ ಎಂಬಂತೆ ರಾಚುತ್ತಿರುವ ರಕ್ಕಸಿ ಮಳೆ. `ಈ ಹೊತ್ತು ಇಲ್ಲಿ ಎಲ್ಲವೂ ಅಂದುಕೊಂಡಂತೆ ಆಗುತ್ತಿದೆಯಲ್ಲ ದೇವರೇ ಎಂದು ಕಣ್ಣು ತುಂಬಿಕೊಳ್ಳುತ್ತಿತ್ತು. ಈ ಕಣ್ಣು ತುಂಬಿಕೊಳ್ಳುವುದು, ಎದೆ ಒದ್ದೆಯಾಗುವುದು ಇತ್ಯಾದಿಗಳೆಲ್ಲ ವಯಸ್ಸಾಗುತ್ತಿರುವಾಗ ಕಾಣಿಸಿಕೊಳ್ಳುವ ಕೆಟ್ಟ ರೋಗಗಳು ಎಂದು ಇದನ್ನೆಲ್ಲ ಅನುಭವಿಸುತ್ತಿರುವ ಗೆಳೆಯ ಅಂದಿದ್ದ. ಇನ್ನು ಮುಂದೆ ನಾನು ಹೀಗೆ ಬದುಕಬಾರದು, ಕಠಿಣ ಹೃದಯಿಯಾಗಿರಬೇಕು, ನನಗೆ ಬೇಕಾದ ಹಾಗೆ ಎಲ್ಲವನ್ನೂ ಬಗ್ಗಿಸಿ ಬದುಕಬೇಕು ಎಂದು … Continue reading ಕವಿ ಹೃದಯ ಮತ್ತು ಕಾಡುಹಂದಿ

ಕೋಲಾರದಲ್ಲಿ ಕಂಡ ‘ಕಾಮರೂಪಿ’

  ಕೋಲಾರದ ಬೆಟ್ಟವೊಂದರ ಬಂಡೆಗಳ ಮೇಲೆ ಕಡುಬಣ್ಣಗಳ ಸೆರಗು ಹಾಸುತ್ತಿರುವ ಆಕಾಶ. ಅದರ ನಡುವಿನ ಬಯಲು ಹೊಲದಲ್ಲಿ ಟೊಮೆಟೋ ಸಸಿಗಳಿಗೆ ಗುಟುಕು ಗುಟುಕು ನೀರು ಉಣಿಸುತ್ತಿರುವ ದಣಿದ ತಾಯಿ. ಅವಳ ಸುತ್ತ ಹಸಿವೇ ಇಲ್ಲವೇನೋ ಎಂಬಂತೆ ಗಿರಗಿಟ್ಟಲೆ ಓಡುತ್ತಿರುವ ಹೊಳೆವ ಕಣ್ಣುಗಳ ಕಂದಮ್ಮಗಳು. ಪುರಾತನ ಕಾಲದಿಂದಲೇ ಇಲ್ಲಿ ಬದುಕುತ್ತಿದ್ದಾನೆ ಎಂಬಂತೆ ಗೌರವಾನ್ವಿತನಾಗಿ ಕಿವಿಯಲ್ಲಿ ಒಂಟಿ ಹಾಕಿಕೊಂಡಿದ್ದ ಮುದುಕನೊಬ್ಬ ‘ಸಾ, ಟೀ ಕುಡಿಯಕ್ಕೆ ಕಾಸು ಕೊಡಿ’ ಎಂದು ಕಾಸು ಕೀಳುತ್ತಿದ್ದ. ಈ ಬೆಟ್ಟದ ಮೇಲೆ ಹೀಗೇ ಇರುವ ಏಳು … Continue reading ಕೋಲಾರದಲ್ಲಿ ಕಂಡ ‘ಕಾಮರೂಪಿ’

ಅಳಗು ಎಂಬ ಸಿಲೋನ್ ಅಣ್ಣಾಚಿಯ ಕಥೆ

ಮಡಿಕೇರಿಯಿಂದ ಸುಳ್ಯ ಜಾಲ್ಸೂರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಸುಮಾರು ಎಪ್ಪತ್ತೈದು ಕಿಲೋಮೀಟರ್ ಅಂತರವಿದೆ. ಅದೇ ನೀವು ಮಡಿಕೇರಿಯಿಂದ ಗಾಳಿಬೀಡು, ವಣಚಲು, ಕಡಮಕಲ್ಲು ಮುಖಾಂತರ ಹೋದರೆ ಅದರ ಅರ್ದದಷ್ಟು ದೂರವೂ ಇಲ್ಲ. ಜೊತೆಗೆ ಕೊಡಗಿನ ಹಿತವಾದ ಚಳಿಯಿಂದ ಹೊರಟು ಘಟ್ಟದ ಕೆಳಗಿನ ಅಸಾಧ್ಯ ಶೆಖೆಗೆ ಸಿಲುಕಿಕೊಂಡು ಬೇಯಬೇಕಾದ ಪ್ರಮೇಯವೂ ಇಲ್ಲ. ಆದರೆ ಸಮಸ್ಯೆ ಇರುವುದು ಹೋಗಲು ಬೇಕಾದ ದಾರಿಯದ್ದು. ಏಕೆಂದರೆ ಈ ದಾರಿಯೇ ಈಗ ಇಲ್ಲ.ಒಂದು ಕಾಲದಲ್ಲಿ ಕಾಡು ಕಳ್ಳರಿಗೂ, ಟಿಂಬರು ಕೂಪಿನ ಲಾರಿಗಳಿಗೂ ಹೋಗಲು ಇದ್ದ ದಾರಿ ಈಗ … Continue reading ಅಳಗು ಎಂಬ ಸಿಲೋನ್ ಅಣ್ಣಾಚಿಯ ಕಥೆ

ನಿಜದ ನಾಯಿಯೂ ಮಾಟದ ನಾಯಿಯೂ

ನಿನ್ನೆ ಶುಕ್ರವಾರ ಮಡಿಕೇರಿ ಸಂತೆಯಲ್ಲಿ ಕಾಡುಮಾವಿನ ಹಣ್ಣು ಹುಡುಕುತ್ತಾ ಅಲೆಯುತ್ತಿದ್ದೆ.`ಒಂದು ಕಾಡುಮಾವಿನ ಹಣ್ಣಿಗೆ ಒಂದು ವರಹವನ್ನಾದರೂ ಕೊಟ್ಟೇನು, ಎಲ್ಲಿಂದಾದರೂ ತಂದುಕೊಡಣ್ಣಾ' ಎಂದು  ತಂಗಿ ಗೋಗರೆದಿದ್ದಳು. ತಿರುಗುತ್ತಾ ನೋಡಿದರೆ ಸಂತೆಯ ಒಂದು ಮೂಲೆಯಲ್ಲಿ ಒಂದಿಷ್ಟು ನಾಟಿ ಪೈನಾಪಲ್ ಹಣ್ಣುಗಳನ್ನೂ, ಸಾರು ಬಾಳೆಕಾಯಿಗಳನ್ನೂ, ನಾಟಿಕೋಳಿ ಮೊಟ್ಟೆಗಳನ್ನೂ ಸುರುವಿ ಮುಂದೆ ಇಟ್ಟುಕೊಂಡು ಕುಳಿತಿದ್ದ ಪಾರ್ವತಿಯಮ್ಮನವರು, ‘ಸಾರ್ ಚೆನ್ನಾಗಿದೀರಾ?’ಎಂದು ನಾಚಿಕೊಂಡು ಕೇಳಿದರು.ಅವರು ತಮ್ಮ ಕಪ್ಪಾಗಿದ್ದ ಹಲ್ಲುಗಳನ್ನು ತೋರಿಸಿಕೊಂಡು ಕೆನ್ನೆಯ ಆ ಒಂದು ಗುಳಿಯನ್ನು ಇನ್ನಷ್ಟು ಗುಳಿಮಾಡಿಕೊಂಡು ಕೇಳಿದ ರೀತಿಯೇ ಚೆನ್ನಾಗಿತ್ತು. ಒಂದು ಕಾಲದಲ್ಲಿ … Continue reading ನಿಜದ ನಾಯಿಯೂ ಮಾಟದ ನಾಯಿಯೂ

ರಾಜರ ಕಾಲದ ಬ್ರಾಯ್ಲರ್ ಕೋಳಿ

ಸುಮಾರು ಇನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಕೊಡಗು ದೇಶವನ್ನು ಆಳಿದ್ದ ಹಾಲೇರಿ ರಾಜವಂಶದ ಕೊನೆಯ ದೊರೆ ಚಿಕವೀರರಾಜೇಂದ್ರ. ಈ ದೊರೆಯ ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದ ಕಾದಂಬರಿಯನ್ನು ನಿಮ್ಮಲ್ಲಿ ಕೆಲವರಾದರೂ ಓದಿರಬಹುದು. ಬ್ರಿಟೀಷರು ಈತನನ್ನು ಅಧಿಕಾರದಿಂದ ಬಲವಂತವಾಗಿ ಇಳಿಸಿ, ಬೆಂಗಳೂರು, ವೆಲ್ಲೂರು ಹಾಗೂ ಕೊನೆಗೆ ಕಾಶಿಯಲ್ಲಿ ಕೂಡಿಟ್ಟಿದ್ದರು.ಈ ದೊರೆಯ ಮಗಳು ಗೌರಮ್ಮಳನ್ನು ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಸಾಕುಮಗಳಂತೆ ಇಟ್ಟುಕೊಂಡಿದ್ದಳು.ಆಕೆಗೆ ಕ್ರೈಸ್ತ ಧರ್ಮ ದೀಕ್ಷೆ ನೀಡಿ ವಿಕ್ಟೋರಿಯಾ ಎಂಬ ಹೆಸರನ್ನೂ ಇಟ್ಟಿದ್ದಳು. ಹನ್ನೆರಡು ವರ್ಷದ ಈ ವಿಕ್ಟೋರಿಯಾ … Continue reading ರಾಜರ ಕಾಲದ ಬ್ರಾಯ್ಲರ್ ಕೋಳಿ

ಮಳೆಹಕ್ಕಿ ಸಂಸಾರ ಸಾರ

ಇಲ್ಲೊಂದು ಕಡೆ ಒಬ್ಬರ ಮನೆಯಲ್ಲಿ ಮಳೆಹಕ್ಕಿಗಳು ಗೂಡು ಕಟ್ಟಿವೆ.ಖಂಡಖಂಡಾತರಗಳಿಂದ ವಲಸೆ ಬರುವ ಇವುಗಳು ತಮ್ಮ ಪೂರ್ವಜ ಹಕ್ಕಿಗಳು ಈ ಹಿಂದೆ ಕಟ್ಟಿರುವ ಗೂಡುಗಳಿಗೆ ಮರಳಿ ಬಂದು, ಮೊಟ್ಟೆಹಾಕಿ, ಮರಿಗಳ ರೆಕ್ಕೆ ಬಲಿತೊಡನೆ ಮತ್ತೆ ಅವುಗಳೊಡನೆ ಹಾರಿ ಹೋಗುತ್ತವೆ.ಮತ್ತೆ ಆ ಮರಿಗಳು ಬೆಳೆದು ಮೊಟ್ಟೆಹಾಕಲು ಇಲ್ಲಿಗೇ ಬರುತ್ತವೆ.ಇದು ಹಲವು ಕಾಲದಿಂದ ಹೀಗೇ ನಡೆದು ಬಂದಿದೆ’ ಎಂದು ಗೆಳೆಯರೊಬ್ಬರು ಹೇಳಿದ್ದರು. ತಮಗೂ ಈ ಇಹಲೋಕಕ್ಕೂ ಏನೂ ಸಂಬಂಧವೇ ಇಲ್ಲ ಎಂಬ ಹಾಗೆ ಯಾವಾಗಲೂ ಆಕಾಶದಲ್ಲಿ ಒಂಟಿ ಆತ್ಮಗಳಂತೆ ಕೀಚು ದನಿಯಲ್ಲಿ … Continue reading ಮಳೆಹಕ್ಕಿ ಸಂಸಾರ ಸಾರ

ಮಲಯರ ಭಗವತಿಯ ಪಾತ್ರಿ ಹೇಳಿದ ಕಥೆ

ಸರಿ ಸುಮಾರು ಎಂಟುನೂರ ಮೂವತ್ತು ವರ್ಷಗಳ ಹಿಂದೆ ಕೇರಳದ ಈಗಿನ ಕಣ್ಣಾನೂರು ಜಿಲ್ಲೆಯಲ್ಲಿರುವ ಮಾಡಾಯಿಯಲ್ಲಿ ನೆಲಸಿದ್ದ ಶೂಲಿ ಭಗವತಿ ದೇವತೆಗೆ ಅಲ್ಲೇ ಪಕ್ಕದ ಬೈತೂರಿನಲ್ಲಿದ್ದ ಈಶ್ವರನನ್ನು ನೋಡಬೇಕೆಂಬ ಬಯಕೆಯಾಯಿತು. ಹಾಗೆ ಬಯಕೆಯಾದವಳು ಹೋಗಿ ಈಶ್ವರನನ್ನು ನೋಡಿದಳಂತೆ. ಆಕೆ ನೋಡಿಯಾದ ಮೇಲೆ ಈಶ್ವರನು ಬಾಣವೊಂದನ್ನು ಬಿಟ್ಟು ಈ ಬಾಣ ಬೀಳುವಲ್ಲಿ ನೀನು ನೆಲೆಸು ಎಂದು ಆಕೆಯನ್ನು ಬೀಳುಕೊಟ್ಟ. ಆ ಬಾಣ ನೆಟ್ಟಗೆ ಹೋಗಿ ಸುಮಾರು ಎಂಟುನೂರ ಮೂವತ್ತು ವರ್ಷಗಳ ಹಿಂದೆ ಕೊಡಗಿನಲ್ಲಿರುವ ಈ ಊರಿನಲ್ಲಿ ಬಿತ್ತಂತೆ. ಆ ಬಾಣದ … Continue reading ಮಲಯರ ಭಗವತಿಯ ಪಾತ್ರಿ ಹೇಳಿದ ಕಥೆ

ಗಂಡ ಹೆಂಡತಿ ಮತ್ತು ಮಳೆ

ಈತ ಸ್ಕಾಂಡಿನೇವಿಯನ್ ದೇಶವೊಂದರ ಪತ್ತೇದಾರಿ ಬರಹಗಾರ.ನನ್ನ ಕಳೆದ ಹತ್ತಾರು ವರ್ಷಗಳ ಗೆಳೆಯ.ಮುಖದಲ್ಲಿ ಸದಾ ತುಂಟ ಹುಡುಗನೊಬ್ಬನ ನಗು.ದೂರದಿಂದ ಕಂಡೊಡನೆ ತಲೆ ಅಲ್ಲಾಡಿಸುತ್ತಾ ಬಳಿ ಬಂದು ಮಾತನಾಡುತ್ತಾನೆ.ಈತನ ಮಡದಿ ಭಾರತದವಳು.ಅಂತರಾಷ್ಟ್ರೀಯ ಖ್ಯಾತಿಯ ಕಾದಂಬರಿಗಾರ್ತಿ.ಆದರೆ ಈ ಕುರಿತು ಒಂಚೂರೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಬರೆಯುತ್ತಲೇ ಇರುತ್ತಾಳೆ.ಮೊನ್ನೆ ಮಡಿಕೇರಿಯಲ್ಲಿ ಇದ್ದಕ್ಕಿದ್ದಂತೆ ಮಳೆ ಬಂದು ಮಂಜು ಮುಸುಕಿ ಭೂಲೋಕವೆಲ್ಲ ದೇವಲೋಕದಂತೆ ಬೆಳ್ಳಂಬೆಳ್ಳಗಾದಾಗ ಈಕೆಗೆ ಕೊಂಚ ಶೀತವಾಗಿದೆ ಅನಿಸಿ ಬಿಸಿ ನೀರಿಗೆ ಒಂದಿಷ್ಟು ಬ್ರಾಂದಿ ಬೆರೆಸಿ ಕುಡಿದು ಎಲ್ಲ ಸರಿಯಾಯಿತು ಎಂದು ಆಕೆ … Continue reading ಗಂಡ ಹೆಂಡತಿ ಮತ್ತು ಮಳೆ

ಕಪ್ಪಡಿಯಲ್ಲಿ ಕಂಡ ಮುಖ

ಪ್ರತಿ ವರುಷ ಶಿವರಾತ್ರಿಯಿಂದ ಉಗಾದಿಯವರೆಗೆ ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕು ಚುಂಚನಕಟ್ಟೆಯ ಪಕ್ಕದಲ್ಲಿರುವ ಕಪ್ಪಡಿಯ ಕಾವೇರಿ ನದಿ ತೀರದಲ್ಲಿ ರಾಚಪ್ಪಾಜಿಯ ಪರಿಷೆ ನಡೆಯುತ್ತದೆ. ಈ ಪರಿಷೆಯಲ್ಲಿ ಸರಿದಾಡುವ ಯಾವ ಮುಖವನ್ನಾದರೂ ನೀವು ನಿಮ್ಮ ಮುಖಕ್ಕೆ ಅಂಟಿಸಿಕೊಂಡು ಓಡಾಡಬಹುದು. ನಿಮ್ಮ ಮುಖವನ್ನು ಯಾರ ಮುಖಕ್ಕೆ ಬೇಕಾದರೂ ಬದಲು ಮಾಡಿಕೊಳ್ಳಬಹುದು. ಇಲ್ಲಿರುವ ಒಬ್ಬ ಕುರುಡ, ಒಬ್ಬ ಕುಂಟ, ವಕ್ರ ಮೂಗಿನ ಒಬ್ಬಳು ಬಿಕ್ಷುಕಿ, ನದಿಯಲ್ಲಿ ಅದಾಗ ತಾನೇ ಮಿಂದು ಕಾರಣಿಕ ಪುರುಷನ ಪೀಠದವರೆಗೆ ಹೆತ್ತವರ ಕೈಯಿಂದ ಮಣ್ಣಲ್ಲಿ ಉರುಳಾಡಿಸಿಕೊಂಡು ಅಳುತ್ತಾ … Continue reading ಕಪ್ಪಡಿಯಲ್ಲಿ ಕಂಡ ಮುಖ

ತಿಕ್ಕಿ ತೊಳೆಯಲು ಓರ್ವಳು ರಕ್ಕಸಿಯಾದರೂ ಇದ್ದಿದ್ದರೆ.

ಚಾಮುಂಡಿ ನೆಲೆಸಿರುವ ಮೈಸೂರಿನಿಂದ ಚೆಲುವನಾರಾಯಣ ಪವಡಿಸಿರುವ ಮೇಲುಕೋಟೆಯ ನಡುವೆ ಪಾಂಡವಪುರ ಎಂಬ ಊರು ಬರುತ್ತದೆ.ದ್ವಾಪರ ಯುಗದ ಕೊನೆಯಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಊರಿನ ಪಕ್ಕದಲ್ಲಿರುವ ಬೆಟ್ಟವನ್ನು ಕುಂತಿ ಬಹುವಾಗಿ ಇಷ್ಟ ಪಡುತ್ತಿಳು.ಆ ಕುಂತಿಬೆಟ್ಟ ಈಗಲೂ ಹಾಗೇ ಅಲ್ಲಿದೆ.ಕಲಿಯುಗದಲ್ಲಿ ಟೀಪೂ ಸುಲ್ತಾನನಿಗೆ ಸಹಾಯ ಮಾಡಲು ಬಂದ ಫ್ರೆಂಚ್ ಸೈನಿಕರು ಈ ಬೆಟ್ಟದ ಕಲ್ಲುಗಳಿಗೆ ಮರುಳಾಗಿ ಇಲ್ಲೇ ಬಿಡಾರ ಹೂಡಿ ಈ ಊರನ್ನು ಫ್ರೆಂಚ್ ರಾಕ್ಸ್ ಎಂದು ಕರೆದರು.ಈಗ ಅದು ಮತ್ತೆ ಪಾಂಡವಪುರವಾಗಿದೆ. ಪಾಂಡವಪುರದಿಂದ ಮೇಲುಕೋಟೆಯ ದಾರಿಯಲ್ಲಿ ಮುಂದೆಹೋಗಿ ಎಡಕ್ಕೆ … Continue reading ತಿಕ್ಕಿ ತೊಳೆಯಲು ಓರ್ವಳು ರಕ್ಕಸಿಯಾದರೂ ಇದ್ದಿದ್ದರೆ.

ಸುಳ್ಳು ಆನೆಬಾಲವೂ, ನಿಜದ ಹೆಂಡತಿಯೂ

ಇವರು ಹಕ್ಕಿಪಿಕ್ಕಿ ಜನ. ಒಂದು ಕಾಲದಲ್ಲಿ ಒರಿಜಿನಲ್ ಹುಲಿಯ ಉಗುರು, ಒರಿಜಿನಲ್ ನವಿಲು ತುಪ್ಪ, ಒರಿಜಿನಲ್ ಆನೆ ಬಾಲ, ಉಡದ ಚರ್ಮ ಮಾರುತ್ತಾ ತಿರುಗುತ್ತಿದ್ದ ಇವರಿಗೆ ದೇವರಾಜ ಅರಸರು ಕಾಲೊನಿ ಕಟ್ಟಿಸಿಕೊಟ್ಟರು.ಹುಲಿ ಸುದ್ದಿಗೆ ಹೋಗಬಾರದು, ಆನೆ ಬಾಲ ಕೀಳಬಾರದು, ಉಡ ಹಿಡಿಯಬಾರದು ಒಟ್ಟಾರೆ ಕಾಡಿನ ಕಡೆ ತಲೆ ಹಾಕಿ ಮಲಗಬಾರದು.ಬೇಕಾದರೆ ಬೇಸಾಯ ಮಾಡಬಹುದು ಅಂತ ಹೇಳಿ ಒಂದಿಷ್ಟು ಭೂಮಿಯನ್ನೂ ಮಂಜೂರು ಮಾಡಿಸಿದರು. ಆದರೆ ಇವರಿಗೆ ಬೇಸಾಯ ಹಿಡಿಸುತ್ತಿಲ್ಲ. ತಿರುಗಾಡದೆ ಇರಲಾಗುವುದಿಲ್ಲ. ಹಾಗಾಗಿ ದನದ ಕೊಂಬು ಸೀಳಿ, ಅರದಿಂದ … Continue reading ಸುಳ್ಳು ಆನೆಬಾಲವೂ, ನಿಜದ ಹೆಂಡತಿಯೂ

ತಡಿಯಂಡಮೋಳುವಿನ ಎರಡು ಮಗ್ಗುಲು

ಕೊಡಗಿನ ಅತಿ ಎತ್ತರದ ಶಿಖರ ತಡಿಯಂಡಮೋಳು ಪರ್ವತದ ತಪ್ಪಲಲ್ಲಿ `ಬಕ್ಕತಕೊಲ್ಲಿ' ಎಂಬ ಬಾಣೆಯೊಂದಿದೆ. ಈ ಹುಲ್ಲುಗಾವಲು ಎಷ್ಟು ಚೆಂದವಿದೆ ಅಂದರೆ ಇದನ್ನು ನೀವು ದೇವತೆಗಳು ಭೂಮಿಯಲ್ಲಿ ನಡೆದಾಡಿಕೊಂಡಿರಲು ಆಯ್ದುಕೊಂಡಿರುವ ಜಾಗಗಳಲ್ಲಿ ಒಂದು ಜಾಗ ಎಂದು ಆರಾಮವಾಗಿ ಅಂದುಕೊಳ್ಳಬಹುದು. ಕೊಡಗಿನ ಬಹುತೇಕ ಬಾಣೆಗಳು, ಕಾಡುಗಳು, ಕೊಲ್ಲಿಗಳು, ಗದ್ದೆ ಬಯಲುಗಳು ಈಗಲೂ ದೇವಾನುದೇವತೆಗಳು ನಡೆದು ಹೋಗುವ ಜಾಗಗಳು ಎಂದೇ ಕರೆಯಲ್ಪಡುತ್ತವೆ. ಮನೆಕಟ್ಟುವಾಗ, ತೋಟಮಾಡುವಾಗ, ಕೆರೆ ತೋಡುವಾಗ ಈಗಲೂ ಮಲಯಾಳೀ ಮಂತ್ರವಾದಿಗಳು ಬಂದು ದೇವತೆಗಳು ನಡೆದುಹೋಗುವ ಜಾಗಗಳನ್ನು ತೋರಿಸಿಕೊಡುತ್ತಾರೆ. ದೇವತೆಗಳನ್ನು ಅವರ … Continue reading ತಡಿಯಂಡಮೋಳುವಿನ ಎರಡು ಮಗ್ಗುಲು

ಕಾರ್ಗಿಲ್ಲಿನ ದಾರಿಯಲ್ಲಿ

ಕಳೆದ ವರ್ಷ ದ್ರಾಸ್,ಕಾರ್ಗಿಲ್ ,ಲೇಹ್ ದಾರಿಯಲ್ಲಿ ಹೋಗುತ್ತಿರುವಾಗ ದಾರಿಯ ಉದ್ದಕ್ಕೂ ಅಲ್ಲಲ್ಲಿ ‘`you are under enemy observation’ಎಂಬ ಪಲಕಗಳನ್ನು ಹಾಕಿದ್ದರು. ದೂರದೂರದಲ್ಲಿ ಎತ್ತರಕ್ಕೆ ಹಿಮ ತುಂಬಿಕೊಂಡಿರುವ ಪರ್ವತ ಶ್ರೇಣಿಗಳತ್ತ ಕೈತೋರಿಸಿ ನಮ್ಮನ್ನು ಕರೆದೊಯ್ಯುತ್ತಿದ್ದ ಚಾಲಕ ಅದು ಪಾಕಿಸ್ತಾನದ ಬೆಟ್ಟ, ಇದು ಇಂಡಿಯಾದ ಬೆಟ್ಟ ಎಂದು ತೋರಿಸುತ್ತಿದ್ದ. ಎಲ್ಲ ಕಡೆಯೂ ಒಂದೇ ತರಹ ಹಿಮತುಂಬಿಕೊಂಡು ಬಿಸಿಲಲ್ಲಿ ಹೊಳೆಯುತ್ತಿರುವ ಈ ಬೆಟ್ಟಗಳು ಆತನ ಮಾತುಗಳ ನಂತರ ಬೇರೆಯೇ ತರಹ ಕಾಣಿಸಿಕೊಳ್ಳುತ್ತಿತ್ತು. ಜೊತೆಯಲ್ಲಿದ್ದ ಮಕ್ಕಳಂತೂ ಆಮೇಲೆ ಅದನ್ನೇ ಕಸುಬನ್ನಾಗಿ ಮಾಡಿಕೊಂಡು … Continue reading ಕಾರ್ಗಿಲ್ಲಿನ ದಾರಿಯಲ್ಲಿ