ಪೂರ್ಣ ಚಂದ್ರ ತೇಜಸ್ವಿ ತೀರಿಕೊಂಡರು

      ಮೊನ್ನೆ ತಾನೇ ತೇಜಸ್ವಿಯವರ ಪತ್ನಿ ಆರ್. ರಾಜೇಶ್ವರಿ ಮೈಸೂರು ಆಕಾಶವಾಣಿಯಲ್ಲಿ ಮಾತನಾಡಿದ್ದರು. ತೇಜಸ್ವಿ ಎಷ್ಟು ಸುಂದರವಾಗಿ ಮಟನ್ ಪಲಾವ್ ಮಾಡುತ್ತಾರೆ ಎಂದು ಗಂಡನ ಎದುರೇ ಕೊಂಡಾಡಿದ್ದರು. ತೇಜಸ್ವಿ ಹಿನ್ನೆಲೆಯಲ್ಲಿ ನಾಚಿಕೊಂಡು ಕೇಳಿಸಿಕೊಳ್ಳುತ್ತಿದ್ದರು. ಈವತ್ತು ಅವರು ಇಲ್ಲ. ಕಾಲ ನಿಜಕ್ಕೂ ತುಂಬಾ ಕೆಟ್ಟ ಕಟುಕ. ನಮ್ಮ ಪ್ರೀತಿಯ ಲೇಖಕನನ್ನು ಕಿತ್ತುಕೊಂಡ ಆತನಿಗೆ ಧಿಕ್ಕಾರ. [ಚಿತ್ರ ಕೃಪೆ: ಕರ್ನಾಟಕ ಫೋಟೋ ನ್ಯೂಸ್]