ಈವತ್ತು ಕಂಡ ಅನಂತಮೂರ್ತಿ

  ಈವತ್ತು ಬೆಂಗಳೂರಲ್ಲಿ ಶಶಿಕಿರಣ್ ಅವರ ಜೊತೆಗಿದ್ದೆ . ಅನಂತ ಮೂರ್ತಿಯವರಲ್ಲಿ 'ಬರಲಾ?' ಎಂದು ಕೇಳಿದೆ `ಬಾ ಮಗುವೇ' ಅನ್ನುವಂತೆ ಕರೆದು ನಮ್ಮ ಜೊತೆಬಹಳ ಹೊತ್ತು ಮಾತನಾಡಿದರು `ಟೀ ಮಾಡಿಕೊಡಲೇ' ಎಂದು ಕೇಳಿದರು. ಅಷ್ಟು ಪ್ರೀತಿ, ಅಷ್ಟು ಮಮತೆಯ ಈ ಹಿರಿಯ ಜೀವವನ್ನು ನಾವು ಇನ್ನೂ ತುಂಬಾ ಪ್ರೀತಿಸಬೇಕಿತ್ತು ಅಂದು ಕೊಂಡು ಕಣ್ಣು ತುಂಬಿ ಬಂತು.

ಪ್ರೊಫೆಸರ್. ಕೆ .ರಾಮದಾಸ್ ಇಂದು ಬೆಳಿಗ್ಗೆ ತೇಜಸ್ವಿಯವರ ಬಳಿ ಹೋದರು

ನಮ್ಮ ಪ್ರೀತಿಯ ಮೇಷ್ಟ್ರು, ಚಿಂತಕ, ಹೋರಾಟಗಾರ, ತುಂಟ ಮನಸಿನ ಓಡಾಟಗಾರ ಕೆ.ರಾಮದಾಸ್ ಇದೀಗ ಕೊಂಚ ಹೊತ್ತಿನ ಮೊದಲು ಮೈಸೂರಿನ ಕುವೆಂಪು ನಗರದ ತಮ್ಮ `ಚಾರ್ವಾಕ' ಎಂಬ ಮನೆಯಲ್ಲಿ ತೀರಿ ಹೋದರು.ಅವರಿಗೆ ೬೬ ವರ್ಷವಾಗಿತ್ತು. ಮಹಾರಾಜಾ ಕಾಲೇಜಿನಲ್ಲಿ ನನಗೆ ಅರಿವನ್ನು ಕಲಿಸಿದ ಗುರು, ಲಂಕೇಶ್, ತೇಜಸ್ವಿಯವರ ಪ್ರಾಣಮಿತ್ರ, ಕೆ. ರಾಮದಾಸ್ -ಇದೀಗ ಅವರನ್ನು ಸೇರಿಕೊಂಡಿದ್ದಾರೆ .ಯಾಕೋ ಏನೂ ಬರೆಯಲಾಗದ ಹಾಗೆ ಕಣ್ಣು ತುಂಬಿಕೊಳ್ಳುತ್ತಿದೆ. ರಾಮದಾಸ್ ಅವರ ಆಲ್ಬಂನಿಂದ ಕೆಲವು ಚಿತ್ರಗಳು: [ಪ್ರೀತಿಯ ತಾಯಿ ಮಂಜಮ್ಮ] [ಮದುವೆಯ ದಿನ ಮಡದಿ … Continue reading ಪ್ರೊಫೆಸರ್. ಕೆ .ರಾಮದಾಸ್ ಇಂದು ಬೆಳಿಗ್ಗೆ ತೇಜಸ್ವಿಯವರ ಬಳಿ ಹೋದರು