ಹೂವಿನ ಕೊಲ್ಲಿಯ ಪೂರ್ವ ದಿಕ್ಕಿನಲ್ಲಿ

ನಿನ್ನೆ ಹೂವಿನ ಕೊಲ್ಲಿಯ ಹತ್ತಿರ ಹೋಗಿದ್ದೆ. ಅಮ್ಮನ ಹತ್ತಿರ ಇನ್ನಷ್ಟು ಹಳೆಯ ವಿವರಗಳನ್ನು ಕೇಳಬೇಕಿತ್ತು.ಆದರೆ ಯಾಕೋ ಆಕೆ ತೀರಿಹೋದ ನನ್ನ ಅಪ್ಪನನ್ನೂ ಸೇರಿಸಿ ನನ್ನನ್ನೂ ಎಲ್ಲರನ್ನೂ ಕಠುವಾಗಿ ಟೀಕಿಸುತ್ತಿದ್ದಳು.ಯಾಕೋ ಆಕೆ ತೀರಾ ಸಂಕಟದಲ್ಲಿದ್ದಂತೆ ಇತ್ತು.ಪೆಚ್ಚಾಗಿ ಹೂವಿನಕೊಲ್ಲಿಯ ಪೂರ್ವ ದಿಕ್ಕಿನಲ್ಲಿರುವ ಈ ಹೊಳೆಬದಿಗೆ ಹೋದೆ. ನಾಳೆ ಹೂವಿನಕೊಲ್ಲಿಯ ೧೩ನೇ ಕಂತು ಬರೆಯಬೇಕು.ಏನೂ ಗೊತ್ತಾಗುತ್ತಿಲ್ಲ.............

ನಡೆಯಲು ಕಲಿಸಿದ ಪಾತಿಂಞ ಮತ್ತು ಆಧುನಿಕೋತ್ತರ ಬಿಕ್ಕಟ್ಟು!

ನನಗೆ ನಡೆಯಲು ಕಲಿಸಿದ ಮೇಲಿನ ಹಾಡಿಯ ಪಾತಿಂಞ ಮೊನ್ನೆ ಹೂವಿನಕೊಲ್ಲಿಗೆ ಹೋದಾಗ ಸಿಕ್ಕಿ ತುಂಬ ಖುಷಿ ಪಟ್ಟರು. ಕಾಲು ಪಾಲು ಕಾದಂಬರಿ ಬರೆದು ಸಾಗುತ್ತಿರುವ ನನಗೆ ಅವರ ಆಶೀರ್ವಾದ ಇನ್ನೂ ಸಿಕ್ಕಿಲ್ಲ.ಏಕೆಂದರೆ ಬರೆಯುತ್ತೇನೆ ಎಂದು ಅವರಲ್ಲಿ ಹೇಳಲು ನನಗೆ ದೈರ್ಯವಿಲ್ಲ.ಹೇಳಿದರೆ ಅದು ಪಾತಿಂಞಳಿಗೆ ಅರಿವಾಗುವುದೂ ಇಲ್ಲ. ಎಂತಹ ಆಧುನಿಕೋತ್ತರ ಬಿಕ್ಕಟ್ಟು ಇದು ಪಾತಿಂಞ! ನೀವು ನನಗೆ  ನಡೆಯಲು ಕಲಿಸದಿದ್ದರೆ ಹೀಗೆಲ್ಲಾ ಆಗುತ್ತಿತ್ತಾ???