-
ನೋಡು ಬಾ ಚಂದಿರ…
ಮತ್ತಷ್ಟು ಓದು: ನೋಡು ಬಾ ಚಂದಿರ…ಆ ಸಂಜೆ ನನಗೆ ಇನ್ನೂ ನೆನಪಿದೆ. ಪರದೆ ಇಳಿಬಿಟ್ಟ ಸಣ್ಣಗಿನ ಬೆಳಕಿನ ಇಂತಹದೇ ಆ ಸಂಜೆ ಆ ನಾಲ್ವರು ಸಹೋದರಿಯರು ಒಂದೇ ದನಿಯಲ್ಲಿ ಒಂದೇ ಮನಸ್ಸಿನಲ್ಲಿ ಒಂದೇ ಆತ್ಮ ಹಾಡುತ್ತಿದೆ ಎನ್ನುವ ಹಾಗೆ ಕನ್ನಡದ ಒಂದೊಂದೇ ಹಾಡುಗಳನ್ನು ಮಗುವನ್ನು ಎತ್ತಿಕೊಳ್ಳುವಂತೆ, ಮಗುವನ್ನು ತೋಳಿನಿಂದ ತೋಳಿಗೆ ಬದಲಿಸುತ್ತಿರುವಂತೆ, ಮಗುವಿನ ಕಣ್ಣುಗಳನ್ನು ಒಬ್ಬೊಬ್ಬರಾಗಿ ದಿಟ್ಟಿಸಿ ನೋಡುತ್ತಿರುವಂತೆ ಹಾಡಿದ್ದರು. ನಾನು ಕಣ್ಣು ತುಂಬಿಕೊಂಡು ಅವರನ್ನು ನೋಡುತ್ತಿದ್ದೆ. ಈ ಹಾಡುಗಳು ಯಾವುದೂ ಅರ್ಥವಾಗದೇ ಹೋಗಿದ್ದಿದ್ದರೆ, ಕಣ್ಣುಗಳು ಮಸುಕಾಗಿರುವ ನನಗೆ ಅವರ ಹಾಡಿನ ಕಣ್ಣುಗಳು…
-
ಅರಮನೆ, ಅಕ್ಕಸಾಲಿ ಮತ್ತು ಗುಡಿಸಲುಗಳು
ಮತ್ತಷ್ಟು ಓದು: ಅರಮನೆ, ಅಕ್ಕಸಾಲಿ ಮತ್ತು ಗುಡಿಸಲುಗಳುಶಾಮಾಚಾರಿಗಳು ಹನ್ನೆರಡು ವರ್ಷಗಳ ಬಾಲಕನಾಗಿರುವಾಗ ಹಸಿವು ತಾಳಲಾಗದೆ ಮಂಗಳೂರಿನಿಂದ ಮಾಡರ್ನ್ ಬಸ್ಸು ಹತ್ತಿ ಅರಸರ ಮೈಸೂರಿಗೆ ಬಂದವರು ಈಗ ಅರಸೊತ್ತಿಗೆಯಿಲ್ಲದ ಅರಮನೆಯ ಒಂದು ಮೂಲೆಯ ಮೆಟ್ಟಿಲೊಂದರ ಕೆಳಗಿನ ಸಂದಿನಂತಿರುವ ಕೋಣೆಯೊಂದರಲ್ಲಿ ಸಂದಿವಾತ ಪೀಡಿತರಾಗಿ ತಮ್ಮ ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಅರಮನೆಯ ಆಭರಣಗಳಿಗೆ ಹೊಳಪು ಬರಿಸಿ ಬರಿಸಿ ಅವರ ಕಣ್ಣುಗಳು ಈಗಲೂ ಹೊಳೆಯುತ್ತಿರುವಂತೆ ಕಾಣಿಸುತ್ತಿವೆ. ತಮ್ಮ ಯೌವನದಲ್ಲಿ ಅವರು ಬಲು ಸುಂದರವಾಗಿ ದ್ದರು ಅನ್ನುವುದು ಅವರನ್ನು ಈಗ ನೋಡಿದರೂ ಯಾರಿಗಾದರೂ ಗೋಚರಿಸುತ್ತವೆ.
-
ಮಗ ಬಾಪೂ ಸತ್ಯನಾರಾಯಣ ಮತ್ತು ತೀರ್ಥರೂಪ ಅಠಾಣ ರಾಮಣ್ಣ
ಮತ್ತಷ್ಟು ಓದು: ಮಗ ಬಾಪೂ ಸತ್ಯನಾರಾಯಣ ಮತ್ತು ತೀರ್ಥರೂಪ ಅಠಾಣ ರಾಮಣ್ಣಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ಸಂಘದ ಗ್ರೂಪ್ ಫೋಟೋ ಒಂದರಲ್ಲಿ ಎರಡನೆಯ ಸಾಲಿನಲ್ಲಿ ನಿಂತಿರುವವರಲ್ಲಿ ಎಡದಿಂದ ಮೂರನೆ ಯವರು ಅಠಾಣಾ ರಾಮಣ್ಣನವರು. ಮೊದಲನೆಯ ಸಾಲಿನಲ್ಲಿ ಕೆ.ವಿ. ಪುಟ್ಟಪ್ಪ, ಡಿ.ಎಲ್. ನರಸಿಂಹಾಚಾರ್, ತೀ.ನಂ. ಶ್ರೀಕಂಠಯ್ಯ ಮೊದಲಾದವರು ನಿಂತಿದ್ದಾರೆ. ಮೂರನೆಯ ಸಾಲಿನಲ್ಲಿ ಎಸ್.ವಿ. ರಂಗಣ್ಣ, ಎ.ಎನ್. ಮೂರ್ತಿರಾವ್, ವಿ. ಸೀತಾರಾಮಯ್ಯ ಮೊದಲಾದವರಿದ್ದಾರೆ. ಕುಳಿತಿರುವವರಲ್ಲಿ ಬಿ.ಎಂ. ಶ್ರೀಕಂಠಯ್ಯ, ಡಿ.ವಿ. ಗುಂಡಪ್ಪ, ಎ.ಆರ್. ಕೃಷ್ಣಶಾಸ್ತ್ರಿ, ಡಿ.ಎಸ್. ವೆಂಕಯ್ಯ ನವರಿದ್ದಾರೆ. ಅಠಾಣಾ ರಾಮಣ್ಣನವರು ಕುವೆಂಪು ಅವರಿಗಿಂತ ಹಿರಿಯರು. ಎ.ಎನ್. ಮೂರ್ತಿರಾಯರ ವಯಸ್ಸಿನವರು. ಕುವೆಂಪು ಅವರು…
-
ಸಿಂಹಾಸನವೂ ಹಣೆಯ ಬರೆಹವೂ
ಮತ್ತಷ್ಟು ಓದು: ಸಿಂಹಾಸನವೂ ಹಣೆಯ ಬರೆಹವೂಮೈಸೂರಿನ ಪ್ರಪಾತದಂತಿರುವ ಇಳಿಜಾರೊಂದರಲ್ಲಿ ಏಕಲವ್ಯ ನಗರ ಎಂಬ ಅದ್ಭುತ ಕೊಳಗೇರಿಯೊಂದಿದೆ. ಈ ಕೊಳಗೇರಿಯಲ್ಲಿರುವ ಮುನ್ನೂರು ನಾನೂರು ಗುಡಿಸಲುಗಳಲ್ಲಿ ಶಿಳ್ಳೆ ಕ್ಯಾತರು, ದೊಂಬಿದಾಸರು, ಹಕ್ಕಿ ಪಿಕ್ಕಿಗಳು, ಗೊಂಬೆರಾಮರು, ಇತ್ಯಾದಿ ಕಲಾವಿದರಿದ್ದಾರೆ. ಈ ಗುಡಿಸಲುಗಳನ್ನು ಗುಡಿಸಲು ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಈ ತಡಿಕೆಯಂತಹ ಕೋಳಿ ಗೂಡುಗಳೊಳಗೆ ನಾಟಕದ ಸಿಂಹಾಸನಗಳು, ಕಿರೀಟಗಳು, ಗದೆಗಳು, ಹಾರ್ಮೋನಿಯಂ, ಏಕತಾರಿಗಳು ಮತ್ತು ಕಲಾವಿದ ರಾದ ಮನುಷ್ಯರು ಅವರ ಮಕ್ಕಳು, ಬೆಕ್ಕುಗಳು ಮತ್ತು ನಾಯಿಗಳು ಉಸಿರಾಡಿ ಕೊಂಡಿರುತ್ತವೆ. ತಡಿಕೆಗಳ ಹೊರಗೆ ಪಟ್ಟದ ಕುದುರೆಗಳು, ಸಾರೋಟು ಗಾಡಿಗಳು…
-
ಪಂಡಿತಪ್ಪಸ್ವಾಮಿಗೆ ಕಾಯುತ್ತಾ ಬೋಟಿ ಬಜಾರಿನಲ್ಲಿ…
ಮತ್ತಷ್ಟು ಓದು: ಪಂಡಿತಪ್ಪಸ್ವಾಮಿಗೆ ಕಾಯುತ್ತಾ ಬೋಟಿ ಬಜಾರಿನಲ್ಲಿ…ಸುಂದರ್ ಬ್ರಾಂಡ್ ಹಲ್ಲುಪುಡಿ ಮಾರುವ ಪಂಡಿತಪ್ಪ ಸ್ವಾಮಿ ನನಗೆ ಇಲ್ಲಿ ಕಾಯಲು ಹೇಳಿದ್ದರು. ಈ ಪಂಡಿತಪ್ಪ ಸ್ವಾಮಿ ಮೈಸೂರಿನವರು ಎಂದು ನನಗೆ ಗೊತ್ತಿರಲಿಲ್ಲ. ಹಾಗೆ ನೋಡಿದರೆ ಇವರ ನೆನಪೂ ನನಗಿರಲಿಲ್ಲ. ಆವತ್ತು ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆ ಮೈಸೂರಿನ ರೈಲು ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್ ಲೈಟು ಯಾಕೋ ಇದ್ದಕ್ಕಿದಂತೆ ಕೆಟ್ಟು ಹೋಗಿರದಿದ್ದರೆ ಇವರನ್ನು ಬಹುಶಃ ಈ ಜೀವಮಾನದಲ್ಲಿ ನಾನು ನೋಡುತ್ತಲೂ ಇರಲಿಲ್ಲ.
-
ಗುಮ್ ನಾಮ್ ಬಾದಶಾನ ಗುಡ್ಡದಲ್ಲಿ
ಮತ್ತಷ್ಟು ಓದು: ಗುಮ್ ನಾಮ್ ಬಾದಶಾನ ಗುಡ್ಡದಲ್ಲಿನಾನಾದರೋ ಮೊನ್ನೆ ಜನವರಿ 16ಕ್ಕೆ ಸೂಫಿ ಸಂತರು ಕುಂತ ಈ ಗುಡ್ಡಕ್ಕೆ ಬಂದಿದ್ದೆ. ಈ ಗುಡ್ಡದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ವಾಸವಾ ಗಿದ್ದ ಗುಮ್ನಾಮ್ ಬಾದಶಾ ಎಂಬ ಸೂಫಿ ಸಂತನ ಗೋರಿಯಿತ್ತು. ಇತ್ತೀಚೆಗೆ 25 ವರ್ಷಗಳ ಹಿಂದೆಯ ವರೆಗೆ ಮೈಸೂರಿನಿಂದ ಬೆಂಗಳೂರಿಗೆ ಹೊರಡುತ್ತಿದ್ದ ಎಲ್ಲ ರೈಲು ಬಂಡಿ ಗಳೂ ಈ ಸೂಫಿ ಸಂತನ ಗುಡ್ಡದ ಬಳಿ ನಿಲ್ಲುತ್ತಿದ್ದವಂತೆ. ನಿಂತು ಅದರಿಂದ ರೈಲಿನ ಚಾಲಕ ಇಳಿದು ಗುಡ್ಡ ಹತ್ತಿ ಈ ಸಂತನ ಸಮಾಧಿಯ ಬಳಿ ಚಿರಾಗ್ ಎಂಬ…
-
ಒಂಟಿ ಸಲಗ ಮತ್ತು ಒಬ್ಬರು ಸ್ತ್ರೀ
ಮತ್ತಷ್ಟು ಓದು: ಒಂಟಿ ಸಲಗ ಮತ್ತು ಒಬ್ಬರು ಸ್ತ್ರೀಆ ಒಂಟಿ ಸಲಗ ನನ್ನನ್ನು ಹೂವಿನಂತೆ ಆಕಾಶದಲ್ಲಿ ಹತ್ತು ಅಡಿ ಎತ್ತರಕ್ಕೆ ಎಸೆಯಿತು. ಚೆಂಡಿನಂತೆ ಕಾಡಿನೊಳಕ್ಕೆ ಅಷ್ಟು ದೂರ ಕಾಲಿನಿಂದ ದೂಡಿತು, ಸೊಂಡಿಲಿನಿಂದ ಎತ್ತಿ ದಂತಗಳ ಮೇಲೆ ಕೂರಿಸಿತು, ನೆಲದಲ್ಲಿ ಮಲಗಿಸಿ ದೂರದಿಂದ ನೋಡಿತು… ಒಟ್ಟಿನಲ್ಲಿ ಈಗ ಯೋಚಿಸಿದರೆ ಆ ಒಂಟಿಸಲಗ ನನ್ನನ್ನು ಓರ್ವ ಪ್ರೇಮಿಯಂತೆ ಒಂದೂವರೆ ತಾಸುಗಳ ಹೊತ್ತು ಕಾಡಿಸಿತ್ತು’.