ಪಕ್ಷಿರಾಜಪುರದ ಪಿ.ಎಸ್.ವಸಂತನ ಕಥೆ

  ಹುಣಸೂರಿನ ಬಳಿಯ  ಪಕ್ಷಿರಾಜಪುರದ ೨೦ ಹಕ್ಕಿಪಿಕ್ಕಿ ಮಂದಿಯನ್ನು ನೇಪಾಳದ ಪೋಲೀಸರು ವನ್ಯಜೀವಿ ರಕ್ಷಣಾ ಕಾಯಿದೆಯಡಿ ಬಂದಿಸಿದ್ದಾರೆ. ಇವರಲ್ಲಿ ಒಬ್ಬರು ಈಗ ನಿಮ್ಮ ಜೊತೆ ಯು ಟ್ಯೂಬ್ ನಲ್ಲಿ ಮಾತನಾಡಲಿರುವ ಪಿ.ಎಸ್. ವಸಂತ ಎಂಬ ಅದ್ಭುತ ಮಾತುಗಾರನ ನಾಲ್ಕನೆಯ ಹೆಂಡತಿ ಸೋನಾ. ಹಾಗೆ ನೋಡಿದರೆ ಮರೆತ ಎಲೆಅಡಿಕೆ ತರಲು ಈ ವಸಂತ ರೈಲು ಇಳಿದು  ಹೋಗಿರದಿದ್ದರೆ ಈತನೂ ನೇಪಾಳದ ಪೋಲೀಸರ ಪಾಲಾಗುತ್ತಿದ್ದ. ಈಗ ಈ ವಸಂತನಿಗೆ ಒಂದು ಕಡೆ ಖುಷಿ. ಇನ್ನೊಂದು ಕಡೆ ವಿರಹ.  ಈ ಮಿಶ್ರ ಭಾವನೆಯನ್ನು … Continue reading ಪಕ್ಷಿರಾಜಪುರದ ಪಿ.ಎಸ್.ವಸಂತನ ಕಥೆ

ಚಾಮಮ್ಮ ಮತ್ತು ಲಕ್ಷ್ಮಮ್ಮ ಪಾಡಿದ ಇನ್ನೊಂದು ಹಾಡು

ಗೆಳೆಯರೊಬ್ಬರ ಕೋರಿಕೆಯ ಮೇರೆಗೆ ಹಿರೇನಂದಿಯ ಚಾಮಮ್ಮ ಮತ್ತು ಲಕ್ಷ್ಮಮ್ಮ ಪಾಡಿದ ಇನ್ನೊಂದು ಹಾಡು:- click for you tube video

ಚಾಮಮ್ಮನ ಪಾಡು, ಲಕ್ಷ್ಮಮ್ಮನ ಹಾಡು

  ಚಾಮಮ್ಮ  ಮತ್ತು ಲಕ್ಷ್ಮಮ್ಮ ವಾರಗಿತ್ತಿಯರು. ಸಖತ್ ಹಾಡುಗಾತಿಯರು.ಈವತ್ತು ಮನೆಗ ಬಂದಿದ್ದರು. ಹೆಗ್ಗಡದೇವನಕೋಟೆ ದಿಕ್ಕಿನಲ್ಲಿರುವ ಹಿರೇನಂದಿಎಂಬ ಹಳ್ಳಿಯವರು. ಕಷ್ಟ-ಸುಖ ಎಲ್ಲವನ್ನು ಕಲ್ಲು ನೀರು ಕರಗುವಂತೆ ಹಾಡು ಮಾಡಿ ಹಾಡುತ್ತಾರೆ. ಮೊದಲಿಗೆ ಚಾಮಮ್ಮನ ಪಾಡು-[you tube video] ಇದೀಗ ಲಕ್ಷ್ಮಮ್ಮನ ಹಾಡು :

ಶನಿವಾರ ಅಪರಾಹ್ನ-ಕುಪ್ಪೆ ಎಂಬ ಗ್ರಾಮ

ಕುಪ್ಪೆ ಗ್ರಾಮದ ನಂಜಮ್ಮನವರ ವೀರಶೈವ ಟೀ-ಹೋಟೆಲ್ಲಿನ ಮುಂದೆ ಬುಟ್ಟಿಯಲ್ಲಿ ಹತ್ತು ಮಾವಿನ ಹಣ್ಣುಗಳನ್ನು ಇಟ್ಟುಕೊಂಡು ದಲಿತರ ಮಂಚಮ್ಮ ಮಾರುವ tension ನಲ್ಲಿ ಕೂತಿದ್ದಳು ಸ್ವಲ್ಪ ನಗು ಅಂದೆ ಅಷ್ಟೆ! ಒಳಗೆ ನಂಜಮ್ಮನ ಮೊಮ್ಮಗಳು ಮಾವಿನ ಹಣ್ಣಿನ tension ನಲ್ಲಿದ್ದಳು ಅವಳಿಗೂ ನಗು ಅಂದೆ ಅಷ್ಟೆ!