ಲಂಕೇಶರ ಮೇಲಿನ ವಿಳಾಸಕ್ಕೆ ಬರೆದ ಒಂದು ಹಳೆಯ ಪತ್ರ

[ತೇಜಸ್ವಿಯವರಿಲ್ಲದ ಸಂದರ್ಭದಲ್ಲಿ]

swarga.jpg

ಪ್ರಿಯ ಲಂಕೇಶರಿಗೆ ,

ಮೇಲೆ ಆ ನರಕದ೦ತಹ ಸ್ವರ್ಗದಲ್ಲಿ ನೀವು ಹೇಗೆ ಚಡಪಡಿಸುತ್ತಿರಬಹುದು ಎ೦ದು ಕತ್ತಲಲ್ಲಿ ಒಮ್ಮೆ ಗಹಗಹಿಸಿ ನಕ್ಕೆ . ಮಡಿಕೇರಿಯ ಘಾಟಿ ಇಳಿಯುತ್ತಾ ಸ೦ಪಾಜೆಯ ಕಾಡಿನಲ್ಲಿ ಕಲ್ಲು ಕರಗುವ೦ತಹ ರಾತ್ರಿ ಹೊತ್ತಲ್ಲಿ ಒಬ್ಬನೇ ಬೈಕು ಓಡಿಸುತ್ತಿದ್ದೆ. ಎದುರುಗಡೆ ಮ೦ಜಿನಲ್ಲಿ ಕಾಣಿಸುವ೦ತಹ ದಾರಿ, ಮೇಲೆ ಹೊಳೆಯುವ ನಕ್ಷತ್ರಗಳು ಇದನ್ನು ಬಿಟ್ಟರೆ ಬಾಕಿ ಎಲ್ಲಾ ಕಣ್ಣುಮುಚ್ಚಿಕೊ೦ಡರೆ ಹೇಗಿರುತ್ತದೆಯೋ ಹಾಗೇ ಇತ್ತು. ಮೇಲೆ ಕುಮಾರವ್ಯಾಸ , ಶೇಕ್ಸ್ ಪಿಯರ್, ಬಸವಣ್ಣ ಮರ್ಲಿನಮನ್ರೋ, ಹೆಲೆನ್, ದೇವರಾಜ್ ಅರಸು, ಪುರ೦ದರದಾಸ , ಬೇ೦ದ್ರೆ ಗು೦ಡೂರಾಯರು, ನಮ್ಮ ಆಲನಹಳ್ಳಿ, ಎರಡು ವರ್ಷ ಹಿ೦ದೆ ತೀರಿಕೊ೦ಡ ನನ್ನ ಬಾಪಾ ಮತ್ತು ಈ ನಡುರಾತ್ರಿಯಲ್ಲಿ ನಿದ್ದೆಯಿ೦ದ ಎದ್ದು ಅಲ್ಲಿ ಹೋಗಿ ಸೇರಿಕೊ೦ಡ ನೀವು – ಎದುರಿಗೆ ಬ೦ದ ಲಾರಿಯ ಬೆಳಕಿಗೆ ಮತ್ತೊಮ್ಮೆ ಗಹಗಹಿಸಿದೆ . ಯಾಕೋ ಅಳು ಬರುತ್ತಿತ್ತು. ಬೈಕು ನಿಲ್ಲಿಸಿ ದೇವರ ಕೊಲ್ಲಿಯ ಆ ಬೃಹತ್ ಆಕಾರದ ಬೀಟಿಯ ಮರದ ಕೆಳಗೆ ಕೊ೦ಚ ಹೊತ್ತು ಕೂತೆ. Continue reading “ಲಂಕೇಶರ ಮೇಲಿನ ವಿಳಾಸಕ್ಕೆ ಬರೆದ ಒಂದು ಹಳೆಯ ಪತ್ರ”

Advertisements

ಯಾಕಳುವೆ ಮಗು ತೇಜಸ್ವಿ…

kukkanakere4.jpg

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು..

‘ಯಾಕಳುವೆ ಮಗು ತೇಜಸ್ವಿ..’ಎಂದು ಕುವೆಂಪು ಬರೆದಿದ್ದರು

‘ನೀನು ಎರಡು ವರ್ಷದ ಮಗು ನಾನು ಎರಡು ವರ್ಷದ ತಂದೆ’ ಎಂದಿದ್ದರು.

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು

ಏನು ಬರೆಯುವುದು ಏನು ಚಿತ್ರ ತೆಗೆಯುವುದು ಏನು ಚಿಂತಿಸುವುದು

ಎಲ್ಲವೂ ಮಣ್ಣಲ್ಲಿ ಮಣ್ಣಾಗಿ ಬಿಡುವುದು.

ಕುರಿತು ಬರೆದ ಮರ , ಕುರಿತು ಬರೆದ ಮಲೆ- ಸರೋವರ,

ಮಾತು ಕೇಳಿ ನಕ್ಕು ಹೋದ ಜನ. ಬೈಸಿಕೊಂಡು ಕುಗ್ಗಿ ಹೋದ ಸಜ್ಜನ,

ಕಾಜಾಣ, ಕವಿಶೈಲ,- ಯಾವುದೂ ಉಳಿಯಬಿಡುವುದಿಲ್ಲ.

ತೇಜಸ್ವಿ, ನೀವಿಲ್ಲದ ಮೊದಲ ದಿನ – ಕೈ ಆಡುತ್ತಿಲ್ಲ.ಬಾಯಿ ಬರುತ್ತಿಲ್ಲ