ಷಿಲ್ಲಾಂಗಿನಲ್ಲಿ ಕನ್ನಡದ ಇಬ್ಬರು ಹೆಣ್ಣುಮಕ್ಕಳನ್ನು ನೆನೆಯುತ್ತ

        ಮೇ ಮಾಸದ ಈ ಇರುಳಿನಲ್ಲಿ ಒಬ್ಬನೇ ಕುಳಿತು ಮೇಘಾಲಯದ ಕನಸು ಕಾಣುತ್ತಿರುವೆ. ಶಾಂತಾ ಅವರ ನೆನಪಾಗುತ್ತಿದೆ. ಶಾಂತಾ ಕನ್ನಡದ ಸಂಪಿಗೆ ಘಾಟಿನಂತಹ ಕವಿ ಪು.ತಿ.ನ. ಅವರ ಮಗಳು.ಕೇಂದ್ರ ಜಲ ಮಂಡಲಿಯಲ್ಲಿ ಬಲು ದೊಡ್ಡ ಇಂಜಿನಿಯರ್ ಆಗಿದ್ದ ಶಾಂತಾ ಅವರ  ಗಂಡ ಶ್ರೀ ರಂಗಾಚಾರ್ ಷಿಲ್ಲಾಂಗ್ ನಲ್ಲಿರುವಾಗ ತೀರಿ ಹೋಗಿದ್ದರು. ತನ್ನ ಗಂಡನ ಆತ್ಮ ಅಲ್ಲೇ ಇದೆ ಎಂದು ನಂಬಿರುವ ಶಾಂತಾ ಇನ್ನು ನೂರಾರು ವರ್ಷವಾದರೂ ಅಲ್ಲೇ ಇರುತ್ತಾರೆ ಅನಿಸುತ್ತದೆ.  ಷಿಲ್ಲಾಂಗ್ ನ ನೋಂಗ್ರಿಮ್ ಹಿಲ್ಸ್ ನಲ್ಲಿ … Continue reading ಷಿಲ್ಲಾಂಗಿನಲ್ಲಿ ಕನ್ನಡದ ಇಬ್ಬರು ಹೆಣ್ಣುಮಕ್ಕಳನ್ನು ನೆನೆಯುತ್ತ

ಇತಿಹಾಸದ ಭಾರ ಮತ್ತು ನರಮನುಷ್ಯರು

  ಪುಟ್ಟ ಮಕ್ಕಳ ತಲೆಯೊಳಕ್ಕೆ ಇತಿಹಾಸವನ್ನು ಹೇಗೆ ತಿರುಚಿ ತುಂಬಲಾಗುತ್ತಿದೆ ಎಂಬ ವಿಷಯವಾಗಿ ಅಭ್ಯಾಸ ಮಾಡಲು ಐರ್ಲೆಂಡಿನ ಓವನ್ ಓ' ಕೆಲ್ಲಿ ಮತ್ತು ನಾನು ಅವನ ದೇಶದಲ್ಲಿ ಮತ್ತು ಭಾರತ ದಲ್ಲಿ ಸುತ್ತಾಡಿದೆವು.ನಾನು ಆತನನ್ನು ಕಟ್ಟಿಕೊಂಡು ದೆಹಲಿ,ಕೇರಳ,ಕರ್ನಾಟಕದಲ್ಲಿ ಓಡಾಡಿಸಿದರೆ ಆತ ನನ್ನನ್ನು ಕಟ್ಟಿಕೊಂಡು ಆತನ ದೇಶದಲ್ಲಿ ಓಡಾಡಿದ್ದ.ಬಾರತದಿಂದ ಐರ್ಲೆಂಡ್ ತಲುಪಬೇಕಾದರೆ ಇಂಗ್ಲೆಂಡಿನ ಮೇಲಿಂದಾಗಿ ಹಾರಬೇಕಾಗಿತ್ತು. ಅಕ್ಟೋಬರ್ ತಿಂಗಳ ಮಗುವಿನಂತಹ ಎಳೆ ಬಿಸಿಲಿನಲ್ಲಿ ನಮ್ಮನ್ನು ಅಷ್ಟು ವರ್ಷ ಆಳಿದ್ದ ಆ ಮಹಾ ವಶಾಹತುಶಾಹಿ ನೆಲ ಸೋಮಾರಿಯಂತೆ ಮಲಗಿತ್ತು. ನನ್ನ … Continue reading ಇತಿಹಾಸದ ಭಾರ ಮತ್ತು ನರಮನುಷ್ಯರು

ಮುಲ್ಲಾ ಇಸ್ಮಾಯೀಲನ ಕಥೆ

ಈತನ ಹೆಸರು ಮುಲ್ಲಾ ಇಸ್ಮಾಯಿಲ್ ಕೊತ್ವಾಲ್, ಹುಟ್ಟಿದ್ದು ಇಂಗ್ಲೆಂಡಿನ ಬೋಲ್ಟನ್ ಎಂಬ ಪಟ್ಟಣದಲ್ಲಿ.. ೧೯೬೦ರ ಆದಿಯಲ್ಲಿ ಬೋಲ್ಟನ್ ನಗರದ ಮೊದಲ ಮಸೀದಿ ಕಟ್ಟಿದ್ದು ಮುಲ್ಲಾ ಇಸ್ಮಾಯಿಲನ ಅಪ್ಪ. ಈ ಅಪ್ಪ ಹುಟ್ಟಿದ್ದು ಭಾರತದ ಗುಜರಾತ್ ರಾಜ್ಯದಲ್ಲಿ. ಅಪ್ಪನಿಗೆ ಮಗ ಇಸ್ಮಾಯಿಲ್ ಬಲುದೊಡ್ಡ ಮುಲ್ಲಾ ಆಗಬೇಕೆಂದು ಬಲು ಆಸೆ ಇತ್ತಂತೆ.ಅಪ್ಪನ ಆಸೆಯಂತೆ ಮಗ ಇಸ್ಮಾಯಿಲ್ ಹತ್ತನೆಯ ಎಳೆಪ್ರಾಯದಲ್ಲಿಯೇ ಮೂವತ್ತು ಅಧ್ಯಾಯಗಳ ಪವಿತ್ರ ಖುರಾನನ್ನು ಕಂಠಪಾಠ ಮಾಡಿದನಂತೆ.ಹದಿಮೂರನೆಯ ಹರೆಯದಲ್ಲಿಯೇ ಲೌಕಿಕ ವಿದ್ಯಾಬ್ಯಾಸದ ಜೊತೆ ಜೊತೆಯಲ್ಲಿಯೇ `ಹಾಫಿಜ್' ಆಗಿ ಅಪ್ಪನಿಗೆ ಅಚ್ಚರಿ … Continue reading ಮುಲ್ಲಾ ಇಸ್ಮಾಯೀಲನ ಕಥೆ

ದಾರಿ ಯಾವುದಯ್ಯಾ ವೈಕುಂಠಕೆ……….

  'ದಾರಿ ಯಾವುದಯ್ಯ ವೈಕುಂಠಕೆ'ಎಂದು ಗೊಣಗುತ್ತಿದ್ದೇನೆ.ಗೆಳೆಯ ದೂರದಿಂದ ದೂರವಾಣಿಯಲ್ಲಿ `ಕುರಾನ್ ಓದುತ್ತಿದ್ದೇನೆ..ಕೆಲವು ಕಡೆ ಎಷ್ಟು ಚೆನ್ನಾಗಿದೆ.ಇನ್ನು ಕೆಲವು ಕಡೆ ಗೊತ್ತಾಗುತ್ತಿಲ್ಲ. ನಿನಗೇನಾದರೂ ಅರಿವಾಗಿದೆಯೇ?'ಎಂದು ಕೇಳುತ್ತಿದ್ದಾನೆ. ನಾನು ಸುಮ್ಮನೇ ತಲೆಯಾಡಿಸುತ್ತೇನೆ.'ದೇವರುಗಳ ವಾಣಿ ಮಾರಾಯ.ನರಮನುಷ್ಯರ ಅರಿವಿಗೆ ಅಷ್ಟು ಸುಲಭದಲ್ಲಿ ಒದಗುವುದಿಲ್ ಲ.ಹಾಗೆ ಒದಗಿದ್ದಿದ್ದರೆ ಯಾಕೆ ನಾನು ಮತ್ತು ನೀನು ಯಾಕೆ ಈ ನಿತ್ಯ ನರಕದ ಬೆಂಕಿಯಲ್ಲಿ ಹೀಗೆ ಹಿತವಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದೆವು' ಎಂದು ಕಿಚಾಯಿಸಬೇಕೆನ್ನಿಸುತ್ತದೆ.ಆದರೆ ಆತ ಹೀಗೆ ಗಂಭೀರವಾಗಿ ಧರ್ಮಪಾರಾಯಣದಲ್ಲಿ ತೊಡಗಿರುವಾಗ ಹೇಗೆ ಲಂಪಟತನ ಮೆರೆಯಲಿ ಎಂದು ಸುಮ್ಮನಾಗುತ್ತೇನೆ. `ಒಂದು … Continue reading ದಾರಿ ಯಾವುದಯ್ಯಾ ವೈಕುಂಠಕೆ……….

ಬರ್ಕೆ ಹಲಸಿನ ಹಣ್ಣು ಮತ್ತು ಬರ್ಮುಡಾ ಚಡ್ಡಿ

        ಬರ್ಕೆ ಹಲಸಿನ ಹಣ್ಣು ಬೀಳುತ್ತದೆ ಎಂದು ಅಂದುಕೊಂದು ನಾವು ಹಲಸಿನ ಮರದ ಕೆಳಗೆ ನಿಂತುಕೊಂಡಿದ್ದರೆ ಹಣ್ಣು ಕೊಯ್ಯಲು ಹತ್ತಿದ್ದ ಕುಂಞಮ್ಮದ್ ತಾನೇ ದೊಪ್ಪೆಂದು ಬಿದ್ದುಬಿಟ್ಟಿದ್ದ.ಆಸೆ ಕಣ್ಣು ಬಿಟ್ಟುಕೊಂಡು ಮಳೆಗಾಳಿಯ ನಡುವೆ ಸೊಳ್ಳೆ ಕಚ್ಚಿಸಿಕೊಂಡು ಪಿಚಿಪಿಚಿ ಕೆಸರಿನಲ್ಲಿ ಕಾಲು ಊರಲಾರದೆ ಒಂಟಿಕಾಲಿನಲ್ಲಿ ನಿಂತುಕೊಂಡಿದ್ದ ಪುಡಿಮಕ್ಕಳಾದ ನಾವು ಉಡದಂತೆ ಮರ ಏರಿದ್ದ ಕುಂಞಮ್ಮದ್ ಇನ್ನೇನು ಹಣ್ಣು ಬೀಳಿಸುತ್ತಾನೆ ಎಂದುಕೊಂಡಿದ್ದರೆ ಆತನೇ ಹಲಸಿನ ಹಣ್ಣಂತೆ ಉರುಳಿ ಕೆಸರಲ್ಲಿ ಮುಖ ಮುಚ್ಚಿ ಬಿದ್ದು ತೀರಿಕೊಂಡವನಂತೆ ನಿಶ್ಚಲನಾಗಿದ್ದ. ಆಮೇಲೆ ನಿದಾನಕ್ಕೆ ಎದ್ದು ಕುಂಟುತ್ತಾ … Continue reading ಬರ್ಕೆ ಹಲಸಿನ ಹಣ್ಣು ಮತ್ತು ಬರ್ಮುಡಾ ಚಡ್ಡಿ

ಟಾಲ್ ಸ್ಟಾಯ್ ಮಹರ್ಷಿಯ ಒಂದು ಪುಟ್ಟ ಕಾದಂಬರಿ

 'ಹೇಗಾದರೂ ಮಾಡಿ ಒಂದು ಕಾದಂಬರಿ ಬರೆದುಬಿಡು.ಆಮೇಲೆ ನಿನ್ನ ಹಿಡಿಯುವವರೇ ಇರುವುದಿಲ್ಲ' ಎಂದು ಗೆಳೆಯರು ಪುಸಲಾಯಿಸುತ್ತಿದ್ದರು. ಇವರು ಪುಸಲಾಯಿಸುತ್ತಿರುವುದರ ಹಿಂದೆ ಏನೋ ಮಸಲತ್ತಿರಬೇಕು.ಇಲ್ಲ,ನನಗಾಗುವುದಿಲ್ಲ ಎಂದು ನಾನು ತಲೆಕೆದರಿಕೊಂಡು ಊರಿಡೀ ಅಳುತ್ತಾ ಓಡಾಡುವುದನ್ನು ಕಂಡು ಖುಷಿಪಡಲು ಇವರು ಮಸಲತ್ತು ನಡೆಸುತ್ತಿರಬೇಕು ಎಂದು ನಾನವರ ಮಾತುಗಳನ್ನು ಕೇಳಿಸಿಯೂ ಕೇಳಿಸಿಕೊಳ್ಳದವನ ಹಾಗೆ ಸುಮ್ಮನೇ ಓಡಾಡುತ್ತಿದ್ದೆ. ಒಂದು ವೇಳೆ ಇವರು ಇನ್ನೂ ಹಠ ಹಿಡಿದರೆ ಹೇಗೆ ತಪ್ಪಿಸಿಕೊಳ್ಳುವುದು? ತಪ್ಪಿಸಿಕೊಳ್ಳಲಾಗದೆ ಬರೆಯಲೇ ಬೇಕಾಗಿ ಬಂದ ಪಕ್ಷದಲ್ಲಿ ಏನು ಬರೆಯುವುದು?  ಕಾದಂಬರಿ ಬರೆಯುವುದು ಅಂದರೆ ಏನು ಸುಲಭವೇ... … Continue reading ಟಾಲ್ ಸ್ಟಾಯ್ ಮಹರ್ಷಿಯ ಒಂದು ಪುಟ್ಟ ಕಾದಂಬರಿ

ಅಂಬೇವಾಡ ಎಂಬುವುದು ಈ ಊರಿನ ಹೆಸರಾ……

ಕೋಟೆಯಂತಿದ್ದ ಆತನ ವಾಡೆಯೂ ಭೂಕಂಪವಾದಾಗ ಕಳಚಿಬಿದ್ದು ಆತನಿಗೂ ಹುಚ್ಚು ಹಿಡಿದಂತಾಗಿ ಕವಿತೆ ಬರೆಯಲು ಶುರು ಮಾಡಿದ್ದ. ಆ ರಾತ್ರಿ ಅಂಬೇವಾಡದಲ್ಲಿ ನಾನು ಹುಚ್ಚು ಹಿಡಿಯುವಷ್ಟು ಕತೆಗಳನ್ನೂ ಹಾಡುಗಳನ್ನೂ ಕೇಳಿಸಿಕೊಂಡೆ. ಬೆಳಗಿನ ಜಾವದಲ್ಲಿ ಯಾರದೋ ದನದ ಕೊಟ್ಟಿಗೆಯಪಕ್ಕ ಅವರು ಕೊಟ್ಟಿದ್ದನ್ನು ಹಾಸಿಕೊಂಡು ಮಲಗಿಕೊಂಡೆ.ಪಕ್ಕದಲ್ಲಿ ಗೋವುಗಳು ಮೆಲುಕು ಹಾಕುವ ಸದ್ದು ಕೇಳಿಸುತ್ತಿತ್ತು.ನೂರಾರು ವರ್ಷ ವಯಸ್ಸಾಗಿರುವ ಗೋವುಗಳು ಮೆಲುಕು ಹಾಕುವ ಸದ್ದು ಅನ್ನಿಸಿ ಕಿವಿಗೊಟ್ಟು ಕೇಳುತ್ತ ನಿದ್ದೆಮಾಡಲು ನೋಡುತ್ತಿದ್ದೆ.

ಅಷ್ಟು ದೊಡ್ಡದೂ ಅಲ್ಲದ ಅಷ್ಟು ಸಣ್ಣದೂ ಅಲ್ಲದ ಈ ಲೋಕದಲ್ಲಿ

ಅರಬಿ ಚಹರೆಯ ಆ ನಡುವಯಸ್ಸಿನ ಗಗನಸಖಿ ನನ್ನ ತಳಹರಿದ ಬೂಟನ್ನು ನೋಡಿ ಮನಸ್ಸಿನಲ್ಲೇ ನಗುತ್ತಿದ್ದಳು. ಅವಳು ಇನ್ನಷ್ಟು ನಗಲಿ ಎನ್ನುವ ಹುನ್ನಾರದಿಂದ ನಾನು ಹರಿದ ಬೂಟನ್ನು ಇನ್ನಷ್ಟು ಮುಂದಕ್ಕೆ ಕಾಣುವಂತೆ ಕಾಲು ಉದ್ದ ಮಾಡಿ ಕೂತೆ. ಎರಡನೇ ಮಹಾಯುದ್ಧದಲ್ಲಿ ಸೈನಿಕರನ್ನು ಒಯ್ಯುತ್ತಿದ್ದ ಹಡಗಿನ ಮಾದರಿಯ ಆ ವಿಮಾನ ಸಿರಿಯಾ ದೇಶದ ರಾಜಧಾನಿ ದಮಾಸ್ಕಸ್ನಿಂದ ಆಕಾಶಕ್ಕೆ ಏರಿ ಅರೇಬಿಯಾದ ಮರುಭೂಮಿಯ ಮೇಲೆ ಕತ್ತಲಲ್ಲಿ ನಕ್ಷತ್ರದಂತೆ ಭಾರತದ ಕಡೆ ಹಾರುತ್ತಿತ್ತು. ನಾವು ಭಾರತದ ನಾಲ್ಕು ಮಂದಿ ಬರಹಗಾರರು ಕಳೆದ ವರ್ಷ … Continue reading ಅಷ್ಟು ದೊಡ್ಡದೂ ಅಲ್ಲದ ಅಷ್ಟು ಸಣ್ಣದೂ ಅಲ್ಲದ ಈ ಲೋಕದಲ್ಲಿ