ನನ್ನ ತೀರಾ ಹತ್ತಿರದ ಗೆಳೆಯನ ತಂದೆ ಇಂದು ಮುಂಜಾನೆ ತೀರಿ ಹೋದರು.ಒಂದು ವಾರದ ಹಿಂದೆ ನನ್ನ ಮಾವ ತೀರಿ ಹೋದರು.ಇಬ್ಬರಿಗೂ ವಯಸ್ಸಾಗಿತ್ತು. ಮತ್ತು ಇಬ್ಬರೂ ಅವರವರ ರೀತಿಯಲ್ಲಿ ಬೆರಗು ಹುಟ್ಟಿಸುವಷ್ಟು ಸಮರ್ಥರಾಗಿದ್ದರುಎರಡು ಮೂರು ದಿನಗಳ ಹಿಂದೆ ನನ್ನ ಗೆಳೆಯ Dylan Thomas ಬರೆದ ಈ ಕವಿತೆಯನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದ. ಅದನ್ನು ಈಗ ಕೂತು ಕನ್ನಡಕ್ಕೆ ಅನುವಾದಿಸಿರುವೆ. ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ
ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ,
ಇಳಿವಯಸ್ಸು ಉರಿಯಲಿ ಹೊತ್ತಿ ದಿನ ಮುಗಿವ ವೇಳೆ;
ಕ್ರೋಧವಿರಲಿ, ಕ್ರೋಧ ಬೆಳಕು ಸಾಯುವ ಈ ಗಳಿಗೆ ಬಗ್ಗೆ.
ಜ್ಞಾನಿಗಳು ತಿಳಿದರೂ ನಿಜ ಕೊನೆಗೆ ಕತ್ತಲೆಯೇ ಎಂದರೂ,
ಅವರ ಮಾತುಗಳು ಮಿಂಚುಗಳ ಹೊಳೆಸದಿದ್ದರೂ,
ಹೋಗಲಾರರು ಹೀಗೆ ಮೆಲ್ಲಗೆ ಆ ಒಳ್ಳೆ ಕತ್ತಲೊಳಗೆ.
ಸಜ್ಜನರು ಹೋಗುವ ಮೊದಲು ಅಳುವರು,ಹೇಗೆ
ಹೊಳೆಯಲಿಕ್ಕಿತ್ತು ತಮ್ಮ ಕ್ಷೀಣ ನಡೆಗಳು ಹಸಿರ ಕೊಲ್ಲಿಯಲ್ಲಿ ಅಂದು ಕೊಳ್ಳುವರು,
ಕ್ರೋಧವಿರಲಿ, ಕ್ರೋಧ ಬೆಳಕು ಸಾಯುವ ಈ ಗಳಿಗೆ ಬಗ್ಗೆ.
ರಸಿಕರು ಸರಿಯುವ ಸೂರ್ಯನ ಹಿಡಿದು ಆಡಿದವರು,
ಅರಿಯುವರು ಕೊನೆಗಾದರೂ ಆಡಿದ್ದು ಅದರ ಕೊನೆಯ ಶೋಕವೆಂದು,
ಹೋಗದಿರು ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ.
ಸಾಧಾರಣ ಜನ ತೀರಿ ಹೋಗುವ ಹೊತ್ತು ಕಣ್ಣು ಕತ್ತಲಾಗುವುದು,
ಕುರುಡು ಕಣ್ಣುಗಳು ಉಲ್ಕೆಯ ಹಾಗೆ ಉರಿವ ಖುಷಿ ಪಡುವರು,
ಕ್ರೋಧವಿರಲಿ, ಕ್ರೋಧ ಬೆಳಕು ಸಾಯುವ ಈ ಗಳಿಗೆ ಬಗ್ಗೆ.
ಮತ್ತೆ ನೀನು ನನ್ನ ತಂದೆ ಈ ತೀರುವ ತುದಿಯ ಹೊತ್ತು,
ಶಪಿಸು,ಹರಸು ನಿನ್ನ ಉರಿವ ಕಣ್ಣೀರಿಂದ ನನ್ನ ,ಬೇಡುತಿರುವೆ.
ಹೋಗದಿರು ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ,
ಕ್ರೋಧವಿರಲಿ, ಕ್ರೋಧ ಬೆಳಕು ಸಾಯುವ ಈ ಗಳಿಗೆ ಬಗ್ಗೆ.
————————————————————–
“ಹೋಗದಿರಿ ಹೀಗೆ ಮೆಲ್ಲಗೆ ಆ ಸುಖದ ಇರುಳಿನೊಳಗೆ” ಗೆ 2 ಪ್ರತಿಕ್ರಿಯೆಗಳು
ರಶೀದರೆ,
ಅನುವಾದ ಯಾಕೋ ಸರಿಹೋಗುತ್ತಿಲ್ಲ. ಈ ಕವಿತೆಯನ್ನ ಸುಮಾರು ಹತ್ತುವರುಷಗಳ ಹಿಂದೆ ಓದಿದ್ದು. ಈ ಕವಿತೆ ಸಾವಿನ ಬಗ್ಗೆ ಅಷ್ಟೇ ಅಲ್ಲ, ಜೀವನದ ಬಗ್ಗೆ ಕೂಡ ಮಾತನಾಡುತ್ತದೆ. ನಿಮ್ಮನ್ನು ತಿದ್ದಿ ಎಂದು ಹೇಳುವಷ್ಟು ದೊಡ್ಡವಳಲ್ಲ ನಾನು. ಡಿಲಾನ್ ಥಾಮಸನ ಮೇಲಿನ ಅಕ್ಕರೆಯಿಂದ ಕೇಳಿಕೊಳ್ಳುವೆ.. ಇನ್ನೊಮ್ಮೆ ನೋಡಿ..
– ಟೀನಾ.
Sorry to hear your loss, dear friend. Death is such a great teacher.