ಅಷ್ಟೊಂದು ಅರಿತೆ
ಅರಿತೆ
ಅಷ್ಟೊಂದು
ಪಡೆದವನಿಂದ
ಇನ್ನು ನನ್ನ ನಾ
ಅರಿಯೆ
ಕ್ರೈಸ್ತ, ಹಿಂದು,ಮುಸಲ್ಮಾನ
ಬೌದ್ಧ, ಯಹೂದ್ಯ ಏನೆಂದೂ.
ಸತ್ಯ ಅಷ್ಟೊಂದು
ಹಂಚಿಕೊಡಿತು ಒಳಗೆ
ಇನ್ನು ಕರೆಯಲಾರೆ ಎನ್ನ
ಗಂಡೆಂದು,ಹೆಣ್ಣೆಂದು,ಜಿನ್ನೆಂದು
ಅಥವಾ ಬರಿಯ
ಆತ್ಮವೆಂದೂ.
ಪ್ರೇಮವೆಂಬುದು ಅಷ್ಟೊಂದು
ಹಚ್ಚಿಕೊಂಡಿದೆ ಹಫೀಝನನ್ನು
ಅದು ಬೂದಿಯಾಗಿದೆ ನಾನು
ನಿರ್ಬಂಧಿ
ಸಕಲ ತತ್ವಗಳಿಂದ,ಪ್ರತಿಮೆಗಳಿಂದ
ಇದುವರೆಗೆ ಅರಿತದ್ದರಿಂದ.
“ಹಾಫಿಝನ ಒಂದು ಕವಿತೆ” ಗೆ 2 ಪ್ರತಿಕ್ರಿಯೆಗಳು
ಪ್ರಿಯ ರಶೀದ್,
ಹಾಫಿಝನ ಪ್ರೇಮದೀಕ್ಷೆ ಅನನ್ಯವಾದ್ದು.
ಧರ್ಮ,ಲಿಂಗಗಳನ್ನು ಮೀರಿ ಅವನು ಕಂಡುಕೊಂಡ ಪರಮಸತ್ಯದ ಆಳ ಊಹೆಗೆ ನಿಲುಕದು.
ಕವಿತೆ ಓದುತ್ತಿದ್ದರೆ ನನ್ನ ಕವಿಗುರುಗಳ ಮಾತುಗಳನ್ನು ಕೇಳಿದಂತೆ ಭಾಸವಾಯಿತು.
ತುಂಬ ಚೆನ್ನಾಗಿ ಅನುವಾದಿಸಿದ್ದೀರಾ.
ಧನ್ಯವಾದಗಳು.
ನಿಮ್ಮ ಅನುವಾದಗಳ ಸರಳತೆ ಮತ್ತು ಗಾಢತೆ ನಿಜಕ್ಕೂ ಅದ್ಭುತ. ಹಾಫಿಝನ ಈ ಅನುವಾದವಂತೂ ಚೆನ್ನಾಗಿದೆ. ರಿಲ್ಕೆ, ರೂಮಿಗಳ ನಿಮ್ಮ ‘ಹುಚ್ಚಿ’ಗೆ ಸಾಕ್ಷಿ… ಥ್ಯಾಂಕ್ಯೂ!
ಶಶಿ ಸಂಪಳ್ಳಿ- ಮಲೆಯಮಾತು