ರೈನರ್ ಮರಿಯಾ ರಿಲ್ಕನ ಒಂದು ಸುನೀತ

glasgow141.jpg

 

ಶರತ್ತಿನ ಒಂದು ದಿನ

 

ಪ್ರಭುವೇ, ಇದೀಗ ಸಮಯ:

ಕಳೆಯುತ್ತಿದೆ ಬೇಸಗೆಯ ಹೊತ್ತು;

ನಿನ್ನ ನೆರಳಿಂದ ಸೂರ್ಯನ ಕಣ್ಣಾಲಿಗಳನ್ನು ಮುಚ್ಚು.

ಹಸಿರ ಬಯಲುಗಳಲ್ಲಿ ಗಾಳಿ ತೇಲಿಹೋಗಲು ಅನುವು ಮಾಡಿಕೊಡು,

ಹಣ್ಣುಗಳನ್ನು ತುಂಬಿಕೊಳ್ಳಲು ಹೇಳು ಮರಗಳಲ್ಲಿ,ಬಳ್ಳಿಗಳಲ್ಲಿ

ಅವುಗಳಿಗಿನ್ನೂ ಕೊಂಚ ಬೆಚ್ಚನೆಯ ಸ್ವಚ್ಚ ಹಗಲುಗಳನ್ನು ದಯಪಾಲಿಸು.

ಹೇಳು ಮೈ ತುಂಬಿಕೊಳ್ಳಲು, ಹಿಂಡಿ ಇಳಿಸು ಸಿಹಿಯನ್ನು

ಅವುಗಳೊಳಗೆ.

ಈ ಹೊತ್ತು ಇರಲು ನೆಲೆ ಯಾರಿಗಿಲ್ಲವೋ ಇನ್ನು ಎಂದೂ ಇರುವುದಿಲ್ಲ

ಈಗ ಒಂಟಿಯಾದವನು ಇನ್ನೆಂದಿಗೂ ಒಂಟಿ

ಕೂರುವನು,ಓದುವನು, ದೀರ್ಘ ಪತ್ರಗಳ ಬರೆಯುವನು ಸಂಜೆಯೆಲ್ಲಾ

ಸಾಲುಮರಗಳ ದಾರಿಯಲಿ ನಡೆಯುವನು ಒಣ

ಎಲೆಗಳು ಹಾರುವವು ವ್ಯಗ್ರವಾಗಿ.

Advertisements