ಒಂದು ಸ್ವಂತ ಪದ್ಯ

drg-1.jpg

ನಿನ್ನ ಬೆವರಿಕೊಂಡಿರಬಹುದಾದ ಎದೆ

ಮತ್ತು  ನಿನ್ನ ಕಾಲ ಬೆರಳ ಉಗುರಲ್ಲಿ ಕಡಲಿನ ಮರಳು

ಮತ್ತು ನಿನ್ನ ಮುಂಗುರುಳಲ್ಲಿ ಸಿಕ್ಕಿಕೊಂಡಿರುವ ಹಕ್ಕಿಯ ಗರಿ

ನೀನೇ ನಿದ್ದೆಯಲ್ಲಿ ಪರಚಿಕೊಂಡಿರುವ ನಿನ್ನ ಬೆನ್ನ ಗೀರು

ಮತ್ತು ಇದು ಯಾವುದಕ್ಕೂ ಕಾರಣನಲ್ಲನೆಂಬ ನನ್ನ ಕೊರಗು.

ನಿನ್ನ ಎಚ್ಚ್ರರದ ಉದಾಸೀನ, ಮೈಮುರಿದುಕೊಳ್ಳುವ ನಿನ್ನ ಬೆನ್ನ ಬೆರಳ  ಲಾಸ್ಯ,

ಮತ್ತು ಇಷ್ಟಿಷ್ಟೇ ಬಿಟ್ಟು  ಹಿಂದಿಡಿದಿಟ್ಟುಕೊಳ್ಳುವ ನಿನ್ನ ಔದಾರ್ಯ ಮತ್ತು

ನನ್ನ ಮುಡಿಯಲ್ಲಿ ಬೆರಳಿಟ್ಟು ನಿದ್ದೆ ಮಾಡಿಸಬಹುದೆನ್ನುವ

ನಿನ್ನ ಮರುಳು ಧೈರ್ಯ!

ನಾನು ಏನೋ ತೊದಲುವೆನು, ಮತ್ತೆ ನಿದ್ದೆ ಹೋಗುವೆನು

ಎಲ್ಲವನು ಕಂಡು ಇಲ್ಲವಾಗುವೆನು

ಇರುವುದೇ ಎಲ್ಲವು ಎಂದು ಮುಟ್ಟಿ ನೋಡುವೆನು

ನಿನ್ನ ದೂರ ಕಳಿಸಿ ಬಿಟ್ಟು ಬಂದು….

[ಚಿತ್ರ:ಚರಿತಾ]

Advertisements