ಮೋಹಿತನ ಇನ್ನೂ ಹತ್ತು ಕವಿತೆಗಳು

169.jpg 

 ೧.

ನಿನ್ನ ತೆರೆದ ತೋಳನ್ನ ಕಂಡು
ಈವರೆಗೆ ಒಂದು ನೀಳ ನಿದ್ದೆ.
ಇದೀಗ ಎದ್ದಾಗ ಒಂದು ಕಂದು ಮಲೆ,
ಹಸಿವು -ಮತ್ತು ಅಸಹನೀಯ ಈ  ಮಳೆ.


೨.


ಯಾರು ನೀನು?
ನಿನ್ನೆ ತಾನೆ ಕಂಡವಳು.
ಕಾಗುಣಿತ ಸರಿಮಾಡೆಂದರೆ
ನಾನು ಸರಿಯಿದ್ದೇನೆಯೇ
ಪರಿಶೀಲಿಸು ಅಂದವಳು!

ನೀನು ಹೋಗುತ್ತೀಯ
ಮತ್ತೆ ಅವನಲ್ಲಿಗೆ.
ನಾನೂ ಅವಳ ಬಳಿಗೆ.
ಇಲ್ಲೇ ಉಳಿಯಿತು ಈ ನೆತ್ತರು-
ನಿನ್ನ ಬಳೆಯ ಚೂರು.


೪.


ಹೀಗಲ್ಲ ,ಹೀಗಲ್ಲವೆಂದು
ಮತ್ತೆ ಅಪ್ಪಿಕೊಂಡೆ.
ಕತ್ತಲಾಯಿತು ಹೋಗು ಅಂದೆ.
ಒಂದು ತುಣುಕು ಮೋಡ
ಉಳಿಯಿತು ಹಾಗೇ-
ಆಕಾಶದಲ್ಲಿ ಏನೂ ಆಗದಂತೆ.

೫.

ಹಾಗೆ ನೋಡಿದರೆ
ಏನೂ ಅಲ್ಲ ನಾವು ನಡೆಸಿದ್ದುindian-couple-1.jpg.
ಆ ಭಯಂಕರ ಬಿಸಿಲು,
ಮತ್ತೆ ಹೊಡೆದ ಸಿಡಿಲು,
ಮತ್ತು ಆ  ಬಿಳಿಯ ಬೆಕ್ಕು ರಸ್ತೆಯಲ್ಲಿ
ಅವಾಕ್ಕಾಗಿ  ಆಗ ತಾನೇ ಮರಣ ಹೊಂದಿ
ನೋಡುತ್ತಿದ್ದುದು.

ನೀರು ತುಂಬಿಕೊಳ್ಳುತ್ತದೆ.
ಮರಗಳು ಮುಳುಗಿ ಹಳಸಲು ತೊಡಗುತ್ತವೆ.
ನಿನ್ನ ಕಂಕುಳಿನಲ್ಲಿ ಯಾರೋ
ಗಂದಸಿನ ಪರಿಮಳ.’ ಅದು
ಕಸ್ತೂರೀ ಮೃಗ’ ಎಂದು ಗಹಗಹಿಸುತ್ತೀಯ.
ಕೆಟ್ಟ ಹುಡುಗಿ!

ಹೋಗು. ತಟ್ಟೆಯಲ್ಲಿ ಅನ್ನವಿಡು.
ನಿನ್ನೆಯ ಸಾಂಬಾರು.
ನೆರಿಗೆ ಸರಿಪಡಿಸಿಕೋ.
ನಿನ್ನ ಮುಂಗುರುಳಲ್ಲಿ
ನನ್ನ ಬೆರಳು.
ನಿನ್ನ  ಎದೆಯಲ್ಲೇ ಉಳಿದ
ನನ್ನ ಒಂದು ಬಿಳಿಯ ಕೂದಲು.


೮.


ಅಸಂಖ್ಯಾತ ನಕ್ಷತ್ರಗಳು
ಬರಿಯ ಸಬೂಬುಗಳು.
ಸುಳ್ಳು ಈ ಆಕಾಶ.
ದೇಹ ದೊಡ್ಡ ನೆಪ.
ಏನು ಅನ್ನುವುದು ನಿನ್ನ ಕಂಡೊಡನೆ
ತುಂಬಿಕೊಳ್ಳುವ ನನ್ನ ಕಣ್ಣಾಲಿಗಳನ್ನು?

sc008.jpg.

ಸುಳ್ಳು ನುಡಿಯುತ್ತೇನೆ ನಿನ್ನೊಡನೆ.
 ನಿಜ ಹೇಳಲಾಗದು  ನಿನಗೆ ನನ್ನೊಡನೆಯೂ.
ಸುಮ್ಮನೆ ತುಂಬಿಕೊಳ್ಳುವ ಈ ಆನಂದ,
ಈ ತುಂಟ ಹಠ,ನಿನ್ನ ಉಂಗುಷ್ಟವನ್ನು
ಮುತ್ತಿಡುವ ಕಾಮ,
ಉಧರ ವೈರಾಗ್ಯ!

೧೦

ಯಾಕೋ ಅತಿಯಾಯಿತು ಈ ಹತ್ತು
ಕವಿತೆಗಳೂ.
ಇರುತ್ತಿರಲಿಲ್ಲ
ಇದು ಯಾವುದೂ.
ನೀನೂ ಹಠ ಮಾಡಿದೆ,
ಸುಮ್ಮನೇ ಕಾರಣ ಕೇಳಿದೆ,
ನಾ ಸುಮ್ಮಗಿದ್ದರೂ ಬಿಡದೆ.
 

9 thoughts on “ಮೋಹಿತನ ಇನ್ನೂ ಹತ್ತು ಕವಿತೆಗಳು

 1. ಪ್ರಿಯ ರಶೀದ್,

  ಒಂದು ತುಣುಕು ಮೋಡ
  ಉಳಿಯಿತು ಹಾಗೇ
  ಆಕಾಶದಲ್ಲಿ ಏನೂ ಆಗದಂತೆ…

  …ನಿನ್ನ ಮುಂಗುರುಳಲ್ಲಿ ನನ್ನ ಬೆರಳು…
  …ಏನು ಅನ್ನುವುದು ನಿನ್ನ ಕಂಡೊಡನೆ ತುಂಬಿಕೊಳ್ಳುವ ನನ್ನ ಕಣ್ಣಾಲಿಗಳನ್ನು…
  ….ನಿಜ ಹೇಳಲಾಗದು ನನ್ನೊಡನೆಯೂ…
  ..ಯಾಕೋ ಅತಿಯಾಯಿತು….

  ಕಾಡುವ ಸಾಲುಗಳು.. ಯಾಕೋ ಅತಿಯಾಯಿತು. ಓದಲಾಗುತ್ತಿಲ್ಲ. ಓದದೆ ಇರಲೂ ಆಗುತ್ತಿಲ್ಲ..ಆರ್ದ್ರ ಭಾವನೆಗಳನ್ನು ಹೀಗೆ ಮೊಗ್ಗು ಮೊಗ್ಗಾಗಿ ಅರಳಿಸುವ ಸೃಷ್ಟಿಕಲೆಯನ್ನು ಯಾರ ಹತ್ತಿರ ಕಲಿತಿರಿ ನೀವು?

  ಓದುತ್ತ ಓದುತ್ತ ಹೃದಯ ಮತ್ತು ವಿವೇಕ ಒಟ್ಟಿಗೇ ಪಲ್ಟಿ ಹೊಡೆಯುತ್ತವೆ.ಸರಿ ಕೂರಿಸಿ ಕೂರಿಸಿ ಹೈರಾಣಾಗಿದ್ದೇನೆ ನಾನು. ಓದುಗರಲ್ಲಿ ಪ್ರೀತಿಯಿರಲಿ.

 2. ಕಂಗಳ ಒಡಲಲಿ ಕರಗಿದವನು.

  ನಿನ್ನಂತೆ ಕಾಡುವ ಹುಡುಗ
  ಸಿಗಲಾರ. ಇರಲಿ ಆದರೆಲ್ಲ
  ಹೇಳಿಬಿಡಲಾರೆ.
  ಒಡಲ ತುಂಬ ಅರಳಿಸಿಟ್ಟ
  ಕನಸುಗಳ ಮುಚ್ಚಿಡಲಿ ಎಲ್ಲಿ
  ಕಳೆದರು ಹಾಗೆ ಉಳಿದ ಮೂರುಗೇಣಿನ
  ತೋಳ ಬಂಧನದ ಅಮಲುಗಳ ಮೆಲುಕುಗಳ ತುಂಬಲೆಲ್ಲಿ ? ಮೋಹಿತ ನೀನಿಲ್ಲ .
  ಮುರಳಿ ಗುನುಗುತಿದೆ

  ನಿಮ್ಮವೆ ಸಾಲುಗಳಿಂದ ಪ್ರೇರಿತಳಾಗಿ.
  ಕೆರೆಯ ನೀರನು ಕೆರೆಗೆ ಚೆಲ್ಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s