ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೆಲವು ಕವಿತೆಗಳು

 

pande2.jpg

 ಬಹುಜನರ ಕೋರಿಕೆಯ ಮೇರೆಗೆ ಶ್ರೀ ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೈಬರಹದ ಕವಿತೆಗಳ ಪುಸ್ತಕದಿಂದ ಕೆಲವು ಕವಿತೆಗಳನ್ನು ಇಲ್ಲಿ ನೀಡುತ್ತಿರುವೆ. ನಿಮಗೆ ಇಷ್ಟವಾದರೆ ಅವರ ಸುಂದರ ಕೈಬರಹದಲ್ಲಿರುವ ಇನ್ನೂ ಕೆಲವು ಕವಿತೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬಲ್ಲೆ[ಪಾಂಡೆಯವರು ಇದಕ್ಕೆ ಅನುಮತಿ ನೀಡಿದ್ದಾರೆ] 

 ೧.

ನನ್ನನ್ನು ಪೂರ್ತಿಯಾಗಿ ಎಚ್ಚರಿಸಲಾಗದ

ಬೆಳಕಿನ ಚಂಚಲ ಕ್ಷಣಗಳಂತೂು

ಕಳೆದು ಹೋದವು.

ಈಗ ನನ್ನ ಪಾಲಿಗೆ ಬಂದಿರುವ

ಕತ್ತಲೆಯೂ ಸಹ ನ್ಯಾಯವಾಗಿಲ್ಲ.

ಇಲ್ಲಿಯೂ ಕೆಲವು

ಉಪಯೋಗಕ್ಕೆ ಬಾರದ

ನಕ್ಷತ್ರಗಳು

ನನ್ನ ನಿದ್ರೆಗೆಡಿಸುತ್ತಿದೆ.

೨.

ಹದಿ ಹರೆಯದವರು

ಬೆದೆಗೆ ಪ್ರೇಮವೆಂದು

ಪರಿಗಣಿಸುವ

ಆತಂಕವಿರುವುದರಿಂದ

ಮುದುಕರು; ಹಾದರವನ್ನು

ಕರಾರುವಕ್ಕಾಗಿ

ಮಾಡಿ ತೋರಿಸುತ್ತಾರೆ.

೩.

ಶಾಂತಿಯೆಂದರೆ

ಅದು;

ತುಂಬಾ ಹೊಡೆದಾಡಿದ ನಂತರ ಸಿಗುವ ವಸ್ತು.

೪.

ದ್ವೇಷವಾದರೆ ಬಿಡಿ

ಬಾಗಿಲು ಮುಚ್ಚಿಬಿಡಬಹುದು

ಬಾಗಿಲೊಡೆದು ಒಳ  ಬರುವ

ಸ್ನೇಹವನ್ನೇನು ಮಾಡಬೇಕು?

೫.

ನಾನು

ಸಮುದ್ರದಿಂದ

ಸಮೃದ್ಧತೆಯನ್ನೂ

ಆಕಾಶದಿಂದ

ಅಗಾಧತೆಯನ್ನೂ

ಕಸಿದುಕೊಂಡು ಬಂದು

ನನ್ನಕವಿತೆಗಳಲ್ಲಿ ತುಂಬಿದೆ!

ಆದುದರಿಂದ ನನ್ನ ಕವಿತೆಗಳು-

ಪರದೇಶಿಯಾದವು.

೬.

ಒಂದು ಕೊಲೆಗಾದರೆ

ಸಿದ್ದತೆಗಳನ್ನು

ಮಾಡಿಕೊಂಡು

ಮುಗಿಸಿಬಿಡಬಹುದು

ಆದರೆ ಒಮ್ಮುಖದ ಪ್ರಣಯ

ಅದಕ್ಕಿಂತಲೂ ಹೆಚ್ಚು

ಆತಂಕಕಾರಕ!

೭.

ಆ ದಿನದ ಕೊನೆಯನ್ನು

ಮತ್ತು ಆ ರಾತ್ರಿಯ ಪ್ರಾರಂಭವನ್ನು

ನಾನು ಶರಾಬು ಕುಡಿಯುವುದರೊಂದಿಗೆ

ಆಚರಿಸಿದೆ.ಏಕೆಂದರೆ

ಆ ದಿನದ ಹಣೆಬರಹ ಅನುಭವಿಸಿ

ಗೊತ್ತಿತ್ತು;ಮತ್ತು.

ಆ ರಾತ್ರಿಯ ತುಂಬ

ಬಹಳ ಕತ್ತಲೆಯಿತ್ತು.

ಅಲ್ಲದೆ

ಆ ನಿದ್ರೆಯೆನ್ನುವ ವಸ್ತುವನ್ನು

ತೆರೆದ ಕಣ್ಣುಗಳಿಂದ ಎಚ್ಚರದಲ್ಲಿಯೇ

ಹುಡುಕಬೇಕಾಗಿತ್ತು!

೮.

ಧನಿಕ: ಹಸಿವನ್ನು

ಹುಡುಕುವುದರಲ್ಲಿ

ಸಫಲನಾಗಲಾರ

ಏಕೆಂದರೆ, ಅದು

ಬಡವನಲ್ಲಿ

ರಕ್ತಗತವಾಗಿಬಿಟ್ಟಿದೆ!

೯.

ಬೇಗ ಸಾಯುವ

ಮುದುಕರು;

ತಡವಾಗಿ ಸಾಯುವ

ಯುವಕರು;

ಇವರಲ್ಲಿ ಯಾರು ಹಿರಿಯರು?

————————————

4 thoughts on “ನಾಗರಾಜ ಸೂರ್ಯನಾರಾಯಣ ಪಾಂಡೆಯವರ ಕೆಲವು ಕವಿತೆಗಳು

  1. ಪಾಂಡೆಯವರ ಕವಿತೆಗಳು ನಿಮ್ಮ ಕೈಗೆ ಸಿಕ್ಕಿದ್ದೂ, ಅವರು ಅದನ್ನ ಹೀಗೆ ಪ್ರಕಟಿಸಲು ನಿಮಗೆ ಅನುಮತಿ ಕೊಟ್ಟಿದ್ದೂ, ಅದನ್ನ ಹೀಗೆ ನನಗೆ ಓದೋಕೆ ಸಾಧ್ಯವಾಗಿದ್ದು…ಇದೆಲ್ಲ ಸಾಮಾನ್ಯ ಸಂಗತಿಯಂತೂ ಅಲ್ಲವೇ ಅಲ್ಲ! Thanks ರಶೀದ್ . ಆದಷ್ಟು ಬೇಗ ಇನ್ನೊಂದು ಕಂತು ಬರಲಿ. scan ಮಾಡುವುದು ಇನ್ನೂ ಒಳ್ಳೆ idea.

    ಮೀರ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s