ಎಜ್ರಾ ಪೌಂಡನ ಒಂದು ಕವಿತೆ

 ಫ್ರಾನ್ಸೆಸ್ಕಾ

 

facesi31.jpg
ನೀ ಇರುಳಿಂದ ಹೊರಬರುತ್ತಿದ್ದೆ.

 ಆಗ ನಿನ್ನ ಕೈಗಳಲ್ಲಿ ಹೂವುಗಳಿರುತ್ತಿತು .
ಈಗ ಬರುತ್ತೀಯ ಹೊರಕ್ಕೆ
ಮಂದಿಯ ಗೊಂದಲಗಳಿಂದ,
ನಿನ್ನಕುರಿತ ಬೇಕಾಬಿಟ್ಟಿ ಮಾತುಗಳಿಂದ
ಬರೆಯ ಸರಳ ಸಂಗತಿಗಳ ಸುತ್ತ ನಿನ್ನ ಕಂಡವನು ನಾನು
ಈಗ ಉರಿಯುತ್ತದೆ ಮೈ.

 ಮಂದಿ  ನಿನ್ನ ಹೆಸರ ಸಾದಾ ಎಡೆಗಳಲ್ಲೂ ಎತ್ತುವಾಗ
ಈ ನೆತ್ತಿಯ ಮೇಲೆ ತಣ್ಣನೆ ಗಾಳಿಯಾಡುವಂತಿದ್ದರೆ ಸಣ್ಣಗೆ
ಎಲ್ಲ ಸತ್ತ ಎಲೆಯಹಾಗೆ ಒಣಗುವಂತಿದ್ದರೆ
ಎಲ್ಲ ಸಾಸುವೆಯ ಬೀಜಗಳಂತೆ ಕೊಚ್ಚಿ ಹೋಗುತ್ತಿದ್ದರೆ
ನಿನ್ನನ್ನೊಮ್ಮೆ ನೋಡಬಹುದಿತ್ತು
ಒಬ್ಬಳನ್ನೇ…….

 

Advertisements