ಮೌಲಾನಾ ಜಲಾಲುದ್ದೀನ್ ರೂಮಿಯವರ ಇನ್ನೊಂದು ಕವಿತೆ
ನಿನ್ನ ಮೃದು ಕೆನ್ನೆಯನ್ನ ಒಂದರೆಗಳಿಗೆ
ಈ ಕುಡುಕನ ಕೆನ್ನೆಗೆ ಒತ್ತು
ನನ್ನೊಳಗಿನದೇ ನನ್ನ ಕಾದಾಟ ಕಾಠಿಣ್ಯ ಮರೆತು ಬಿಡಲು.
ಈ ಬೆಳ್ಳಿನಾಣ್ಯಗಳನ್ನ ಚಾಚಿ ಹಿಡಿದಿರುವೆ
ಹೊನ್ನ ಬೆಳಕಿನ ಮಧುವ ಸುರಿದು ಬಿಡು ಅದಕೆ.
ಸ್ವರ್ಗದ ಏಳೂ ಬಾಗಿಲುಗಳ ತೆರೆದಿರುವೆ ನೀನು.
ಕೈಯನ್ನ ನನ್ನ ಬಿಗಿದ ಎದೆಯ ಮೇಲೆ ತಾ.
ಕೊಡುವುದೇನಿದ್ದರೂ ನಿನಗೆ ನಾನು ಈ ಭ್ರಮೆ.ಅದೇ ನಾನು!
ಒಂದು ಹೆಸರನ್ನಾದರೂ ಇಡು, ಅದಾದರೂ ಆಗಲಿ ನಿಜ.
ನೀ ಮಾತ್ರ ಸರಿ ಜೋಡಿಸಬಲ್ಲೆ ನೀನೇ ಮುರಿದದ್ದ
ನನ್ನ ಕುಸಿದಿರುವ ಮಿದುಳ.
ನಾನು ಬೇಡುತ್ತಿರುವುದು ಮಿಠಾಯಿಯನ್ನಲ್ಲ
ನಿನ್ನ ಕೊನೆಯಿರದ ಒಲವನ್ನ
ಎಷ್ಟೊಂದು ಸಲ ಅರುಹುತ್ತಿರುವೆ
ನಿಲ್ಲಿಸು ಭೇಟೆಯಾಡುವುದ, ಕಾಲಿಡು ಈ ಬಲೆಯೊಳಗೆ.
“ನಿನ್ನ ಕೆನ್ನೆಗಳನ್ನು…” ಗೆ 2 ಪ್ರತಿಕ್ರಿಯೆಗಳು
ಒಳ್ಳೆಯ ಕವಿತೆ. ಬಳಸಿರುವ ಚಿತ್ರವೂ ಚೆನ್ನಾಗಿದೆ.
ವಾವ್ ರೂಮಿ,
ನಾನರಿಯೆ ನಿನ್ನ ವಿಚಿತ್ರ
ಪ್ರೇಮದ ಪರಿ
ಅದ ನೀ ಹೇಳುವ ಅನನ್ಯ
ಧಾಟಿಯ ಪರಿ
ನಲ್ಲೆಯ ಕೆನ್ನೆಯ ಸ್ಪರ್ಷಕೆ
ಕಾಠಿಣ್ಯ ಕಳೆಯುವ ಪರಿ
ಚಾಚಿರಿವ ಬೆಳ್ಳಿನಾಣ್ಯಗಳಿಗೆ
ಮದವೇರಿಸುವ ಪರಿ
ಹೃದಯಕ್ಕೆ ಏಳು ಬಾಗಿಲ
ಜೋಡಿಸುವ ಪರಿ
ಹೆಸರಿರದ ನಿನಗೆ ಹೆಸರೊಂದ
ಭ್ರಮಿಸುವ ಪರಿ
ಮುರಿದು ಕುಸಿದಿರುವ
ಮಿದುಳ ಪಡೆಯುವ ಪರಿ
ಒಲವಿನ ಬಲೆಯೊಳಗೆ
ಕರೆಯುವ ಪರಿ
ಮಿಠಾಯಿಯೊಳಗೆ ಶ್ರೇಷ್ಠ
ಮಿಠಾಯಿ ನಿನ್ನ ಪ್ರೇಮದ ಪರಿ.