ರಿಲ್ಕ್ ನ ಎಲಿಜಿಯ ಕೆಲವು ಸಾಲುಗಳು

rilke1.jpg

ಕೂಗಿ ಕರೆದರೆ ಕೇಳುವರು ಯಾರು ದೇವ ದೇವತೆಯರ ಸಾಲಿನಲ್ಲಿ
ಎಲ್ಲಾದರು ಒತ್ತಿಕೊಂಡರೆ ತೀರಿ ಹೋಗುವೆನು ಆ ತುಂಬು ಇರವಿನಲ್ಲಿ
ಚೆಲುವೆಂಬುದು ಅಲ್ಲ ಬೇರೇನೂ ಅದು ಭಯದ ಮೊದಲು
ಕೇವಲ ತಾಳಿಕೊಳ್ಳಬಲ್ಲೆವು ಮಾತ್ರ ಅದನು
ಚಕಿತಾರಾಗುವೆವು ಅಷ್ಟು..ತಣ್ಣಗೆ ಸಂಚಲ್ಲಿ ತೊಡಗುವುದು ಅದು,
ಮುಗಿಸಿಬಿಡಲು..ಪ್ರತಿದೇವತೆಯೂ ಭಯವ ಹುಟ್ಟಿಸುವುದು

ತಡೆ ತಡೆದು ಹಿಡಿದು ನುಂಗಿಕೊಳ್ಳುವೆನು ನನ್ನ ಅಳಲ,ಇರುಳ ಆಳುವ..
ಹಾ, ಯಾರ ಕಡೆ ತಿರುಗುವುದು? ದೇವತೆಗಳಲ್ಲ ನರರಲ್ಲ
ಅರಿತಿರುವ ಮೃಗಗಳಿಗು ತಿಳಿದಿರುವುದು ನಾವು
ಸಹಜವಾಗಿಲ್ಲ ಈ ಆಖ್ಯಾನಿತ ಲೋಕದಲ್ಲಿ.
ಇರಬಹುದು ಅಲ್ಲಿ ಉಳಿದಿರಬಹುದು ನಮಗೆ
ಒಂದು ಮರ ಮಲೆಯ ತುದಿಯಲ್ಲಿ ಅನುದಿನವು ಕಣ್ಣಲ್ಲಿ ತುಂಬಿಕೊಳ್ಳಲಿಕ್ಕೆ,
ಉಳಿದಿರಬಹುದು ನಮಗೆ ನಿನ್ನೆಯ ದಾರಿ
ಎಂದಿನ ಹಾಗಿನ ಒಂದು ಸಲೀಸಿನ ಹಾದಿ ನಮ್ಮಲ್ಲಿ ಉಳಿದದ್ದು
ಜೊತೆ ಸೇರಿದ್ದು ಎಂದೂ ಹೊರಟು ಹೋಗದ್ದು………

ಇರುಳು- ಈ ಇರುಳ ಗಾಳಿ ಅನಂತ ಆಕಾಶದಷ್ಟು
ಮುಖಕ್ಕೆ ರಾಚುವುದು. ಉಳಿವುದಿಲ್ಲ ಯಾರಿಗೂ ಇದು
ಬಹಳಷ್ಟು ಬಯಸಿ ಮರಳು ಮಾಡುವ ಇರವು
ಒಂಟಿ ಎದೆ ನೋವಲ್ಲಿ ಕೂಡುವುದು ಇದನು…..

ಗೊತ್ತಿಲ್ಲವೇ ನಿನಗೆ,ಬೀಸಿ ಒಗೆದುಬಿಡು ನಿನ್ನ ಖಾಲಿತನವ
ತೋಳುಗಳಿಂದ ಉಸಿರಿನ ಹೊರಕ್ಕೆ..
ಹಕ್ಕಿಗಳು ಅರಿಯಬಹುದು ಗಾಳಿ ಭಾರವಾಗಿರುವುದು,ಇನ್ನಷ್ಟು
ಲಗುಬಗೆಯಿಂದ ಹಾರಬಹುದು…..

“ರಿಲ್ಕ್ ನ ಎಲಿಜಿಯ ಕೆಲವು ಸಾಲುಗಳು” ಗೆ ಒಂದು ಪ್ರತಿಕ್ರಿಯೆ

  1. ರಷೀದರೇ,
    ಕನ್ನಡಪ್ರಭದ ಅಂಕಣದಿಂದ ಮಾಯವಾಗಿ, ತೀರಾ ಇತ್ತೀಚೆಗೆ ಉದಯವಾಣಿ ಅಂಕಣ ಸೇರಿರುವ ನಿಮ್ಮ ಬರಹಗಳನ್ನು ಓದುತ್ತಿರುವೆ. ಬ್ಲಾಗಲ್ಲೂ ಕನ್ನಡ ನೆಟ್ಟಿಗರನ್ನು ತಲಪುವ ಪ್ರಯತ್ನಕ್ಕೆ ಶುಭಾಶಯ.
    ಸಾಧ್ಯವಾದಾಗ ನನ್ನ ಬ್ಲಾಗಿಗೂ ಭೇಟಿ ಕೊಡಿ
    ವೇಣು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: