The Mysore Post

Saturday June 23, 2007

ಈವತ್ತು ಕಂಡ ಅನಂತಮೂರ್ತಿ

Filed under: Friends — Rasheed @ 11:43 pm

 

ಈವತ್ತು ಬೆಂಗಳೂರಲ್ಲಿ ಶಶಿಕಿರಣ್ ಅವರ ಜೊತೆಗಿದ್ದೆ . ಅನಂತ ಮೂರ್ತಿಯವರಲ್ಲಿ ‘ಬರಲಾ?’ ಎಂದು ಕೇಳಿದೆ

`ಬಾ ಮಗುವೇ’ ಅನ್ನುವಂತೆ ಕರೆದು ನಮ್ಮ ಜೊತೆಬಹಳ ಹೊತ್ತು ಮಾತನಾಡಿದರುdsc_0008.jpg

`ಟೀ ಮಾಡಿಕೊಡಲೇ’ ಎಂದು ಕೇಳಿದರು.

ಅಷ್ಟು ಪ್ರೀತಿ, ಅಷ್ಟು ಮಮತೆಯ ಈ ಹಿರಿಯ ಜೀವವನ್ನು ನಾವು ಇನ್ನೂ ತುಂಬಾ ಪ್ರೀತಿಸಬೇಕಿತ್ತು ಅಂದು ಕೊಂಡು ಕಣ್ಣು ತುಂಬಿ ಬಂತು.

Tuesday June 19, 2007

ಪ್ರೊಫೆಸರ್. ಕೆ .ರಾಮದಾಸ್ ಇಂದು ಬೆಳಿಗ್ಗೆ ತೇಜಸ್ವಿಯವರ ಬಳಿ ಹೋದರು

Filed under: Friends — Rasheed @ 6:59 am

picture-114.jpg

ನಮ್ಮ ಪ್ರೀತಿಯ ಮೇಷ್ಟ್ರು, ಚಿಂತಕ, ಹೋರಾಟಗಾರ, ತುಂಟ ಮನಸಿನ ಓಡಾಟಗಾರ ಕೆ.ರಾಮದಾಸ್ ಇದೀಗ ಕೊಂಚ ಹೊತ್ತಿನ ಮೊದಲು ಮೈಸೂರಿನ ಕುವೆಂಪು ನಗರದ ತಮ್ಮ `ಚಾರ್ವಾಕ’ ಎಂಬ ಮನೆಯಲ್ಲಿ ತೀರಿ ಹೋದರು.ಅವರಿಗೆ ೬೬ ವರ್ಷವಾಗಿತ್ತು. ಮಹಾರಾಜಾ ಕಾಲೇಜಿನಲ್ಲಿ ನನಗೆ ಅರಿವನ್ನು ಕಲಿಸಿದ ಗುರು, ಲಂಕೇಶ್, ತೇಜಸ್ವಿಯವರ ಪ್ರಾಣಮಿತ್ರ, ಕೆ. ರಾಮದಾಸ್ -ಇದೀಗ ಅವರನ್ನು ಸೇರಿಕೊಂಡಿದ್ದಾರೆ .ಯಾಕೋ ಏನೂ ಬರೆಯಲಾಗದ ಹಾಗೆ ಕಣ್ಣು ತುಂಬಿಕೊಳ್ಳುತ್ತಿದೆ.

ರಾಮದಾಸ್ ಅವರ ಆಲ್ಬಂನಿಂದ ಕೆಲವು ಚಿತ್ರಗಳು:

dsc04576.jpg

[ಪ್ರೀತಿಯ ತಾಯಿ ಮಂಜಮ್ಮ]

dsc04589.jpg

[ಮದುವೆಯ ದಿನ ಮಡದಿ ನಿರ್ಮಲಾ]

dsc04587.jpg

[ಮದುವೆಯಾದ ಮೇಲೆ ಕರೆಯೋಲೆ]

dsc04583.jpg

[ಲಂಕೇಶ್ ಮತ್ತು ತೇಜಸ್ವಿ ಜೊತೆ]

park-174.jpg

[ಗೆಳೆಯನ ಜೊತೆ ಚರ್ಚೆ]

dsc04584.jpg

[ಲಂಕೇಶ್ ತೀರಿ ಹೋಗುವ ಮೊದಲು]

 

[

Saturday May 19, 2007

ಮಲೆನಾಡಿನ ತರಳೆಯೊಬ್ಬಳ ಕವಿತೆಗಳು

Filed under: Friends — Rasheed @ 12:59 pm

 ನಾನು ಸಾಗರದ ಶಿಲಾಬಾಲಿಕೆ ಅಂತ ಹೇಳಿ ಒಬ್ಬರು ಕವಿತೆಗಳನ್ನು ಮೇಲ್ ಮಾಡಿದ್ದಾರೆ. ಓದಲು ಚೆನ್ನಾಗಿಯೇ ಇರುವ ಈ ಕವಿತೆಗಳು ನಿಮ್ಮ ಸಂತೋಷಕ್ಕಾಗಿ:

 

poetry.jpg

 

 

1

ಇದು ತೀರಾ ಖಾಸಗಿ ಸಂಗತಿ ಎಂಬಂತೆ

 ಉರಿಯ ನಡುವೆ ಮಳೆ ಎರಡು ಹನಿ

 ಬೀಳಿಸಿ  ಹೋಯಿತು.ಮಣ್ಣೆಲ್ಲ ಘಂಅಂತ ಪುಲಕಗೊಂಡು

ನೀ ಬಂದಾಗ ನನಗೆ ಆಗುವ ಹಾಗೆ

ಬನದಲ್ಲಿ ನವಿಲುಗಳು ಕೇಕೆ ಹಾಕಲು ತೊಡಗಿತು.

poetry2.jpg

                     2

 ನನಗೆ ನೀಲ ವರ್ಣ ಬಲು ಹಿತವೆನಿಸುತ್ತೆ

ಅವನ ಹಿಮ್ಮಡಿಯ ಒಡೆದ ಬಿರುಕೂ ಅಷ್ಟೆ

ಮೈಯುಜ್ಜುವ ಹೊಳೆಯ ಕಲ್ಲಿನ ಹಾಗೆ

ವರದಾ ನದಿಯ ನೀರು ನೀಲಿ

ಅವನ ಬಣ್ಣಗಾರಿಕೆಯ ಮಾತುಗಳ ಹಾಗೆ!

poetry4.jpg

 

3

 ನೀನು ಸಣ್ಣಗಿದ್ದೀಯಆದರೂ  ಚನ್ನಾಗಿದ್ದೀಯ

ಯಾಕೆ ಸಣ್ಣಗೆ ಕಂಪಿಸುತ್ತೀಯ?

ನೀನು ಏನೋ ಹೇಳುತ್ತೀ ಎಂದು ಕಾಯುತ್ತಿದ್ದೆ

ನೀನು ಸಹೋದರೀಅಂದೆ

ಆದರೂ ನನಗೆ ಖುಷಿಯಾಯಿತು

ನೀ ಇನ್ನೆಂದು ಬರುವೆ?

poetry6.jpg

 

 

4

 ಯಾಕೋ ಕಣ್ಣು ತುಂಬಿಕೊಳ್ಳುತ್ತಿತ್ತು

ಅಪ್ಪ ಸುಮ್ಮನೆ ಹಠ ಮಾಡಿ ಕ್ರಾಪ್

ಸರಿಮಾಡಿಕೊಂಡು ಹೊರಟ

ಅಮ್ಮ ತುರಿಮಣೆ ಎಳಕೊಂಡು ಕುಳಿತಳು

ನಾನು ಅಡಿಕೆಯ ಮರದ ತುದಿ ನೋಡತೊಡಗಿದೆ

ಕೃಷ್ಣ  ಬಂಗಾರ ವರ್ಣ

ಜೋಕಾಲಿಯಾಡುತ್ತಿದ್ದ!

poetrylast1.jpg

[ಬಹುಶಃ ನಿಮ್ಮ ಪ್ರತಿಕ್ರಿಯೆ ಈ ಕವಯತ್ರಿಯನ್ನು ಇನ್ನಷ್ಟು activate-motivate  ಮಾಡಬಹುದು]

Blog at WordPress.com.