Posted on Monday December 31, 2007 by Rasheed
ಪ್ರಿಯರೇ,
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ [...]
Filed under: Blogroll, Friends, ಅನುವಾದಗಳು, ಅಲೆಮಾರಿಯ ದಿನಚರಿ, ಈ ತಾಣ ಎಲ್ಲಿ ಬಲ್ಲಿರೇನ, ಕತೆ-ಗಿತೆ, ತೇಜಸ್ವಿ, ಪ್ರಬಂಧ, ಮಾತಿಗೂ ಆಚೆ, ಮುಖಚಿತ್ರ, ಮೈಸೂರಿನಿಂದ ಅಂಕಣ, ಮೋಹಿತನ ಕವಿತೆಗಳು, ರೂಮಿ, ಷಿಲ್ಲಾಂಗಿನಿಂದ ಲಂಕೇಶ, ಹಾಡು-ಪಾಡು, ಹೂವಿನಕೊಲ್ಲಿ | 5 Comments »
Posted on Monday July 9, 2007 by Rasheed
ತಲೆಯೊಳಗೆ ಏನೋ ಒಂದು ದುಂಬಿ ಹೊಕ್ಕವನ ಹಾಗೆ, ಒಬ್ಬನೇ , ಅನ್ಯಮನಸ್ಕನಾಗಿ ಕಳೆದ ಎರಡುದಿನಗಳಲ್ಲಿ ಮೈಸೂರಿನಿಂದ ಹೊರಟು ಪುನಃ ಇಲ್ಲಿಗೇ ಹೊರಟು ಬಂದೆ. ಬರಿಯ ಸುರಿವ ಮಳೆ ಮತ್ತು ಕಾರಿರುಳು.ಮಡಿಕೇರಿ-ಸಂಪಾಜೆ-ಹೆಬ್ರಿ-ಆಗುಂಬೆ-ತೀರ್ಥಹಳ್ಳಿ-ಶಿವಮೊಗ್ಗೆ-ಅರಸೀಕೆರೆ-ಮೈಸೂರು.ಇಲ್ಲಿ ಬಂದು ಇಷ್ಟು ಹೊತ್ತಾದರೂ ಹೋಗದ ಈ ಅನ್ಯಮನಸ್ಕತೆ! ಹೋಗಲಿ ಬಿಡಿ-ಈ ಚಿತ್ರಗಳನ್ನು ನೋಡಿ!
[ಬೆಳ್ಳಂಬೆಳಗೆ ರಾಜಾಸೀಟು] [ಕಾಟಕೇರಿಯಲ್ಲಿ...]
[ಮದೆನಾಡಿನ ಬಳಿ]
[ದೇವರ ಕೊಲ್ಲಿ]
[ಸೋಮೇಶ್ವರ]
ಉಳಿದಂತೆ ಬರಿಯ ಮಳೆ ಮತ್ತು ಕಾರಿರುಳು.
—————————————-
Filed under: ಈ ತಾಣ ಎಲ್ಲಿ ಬಲ್ಲಿರೇನ | No Comments »
Posted on Wednesday May 23, 2007 by Rasheed
ಮೈಸೂರಿನ ಜಗನ್ಮೋಹನ ಅರಮನೆಯ ಎದುರಿಗಿರುವ ಈ ಅಂಗಡಿಯಲ್ಲಿ ಹಳೆಯ ಕಲಾಕೃತಿಗಳೂ,ಅವುಗಳ ನಕಲು ಪ್ರತಿಗಳೂ ಸಿಗುತ್ತವೆ.
ಈ ಚಿತ್ರ ತೆಗೆದ ಛಾಯಾಚಿತ್ರಗಾರನ ಚಿತ್ರ ಕೆಳಗಿದೆ
ಇವರು ಯಾರೆಂದು ಹೇಳುತ್ತೀರಾ? ಇವರನ್ನು ಕಂಡರೆ ನಿಮಗೆ ಯಾಕೆ ಅಷ್ಟೊಂದು ಇಷ್ಟ?…ಹೇಳುತ್ತೀರಾ..
Filed under: ಈ ತಾಣ ಎಲ್ಲಿ ಬಲ್ಲಿರೇನ | 4 Comments »
Posted on Monday May 21, 2007 by Rasheed
ಇವತ್ತು ಈ ಚಿತ್ರ ಸಾಕು.
ಚಾಮುಂಡಿ ಬೆಟ್ಟದ ಮೆಟ್ಟಲ ಮೇಲೆ ಬತ್ತಿ ಮಾರುವ ಈತ
ಮತ್ತು ಸದಾ ಈತನ ಹಿಂದಿರುವ ಈ ಆಕಳು
ಈವತ್ತು ಸೋಮವಾರ .
ಈ ದಿನ ದೂಡಲು ಇವರಿಬ್ಬರ ಮುಖದ ನೆನಪು ಸಾಕು
Filed under: ಈ ತಾಣ ಎಲ್ಲಿ ಬಲ್ಲಿರೇನ | 2 Comments »