ನಾಳೆಯಿಂದ ಒಂದು ಹೊಸ ಹೂವಿನ ಹೆಸರು
ಪ್ರಿಯರೇ,
ಈ ತನಕದ ಹುಡುಗಾಟ, ಆಲಸ್ಯ, ಸುಖಾಸುಮ್ಮನೆ ತಿರುಗಾಟ-ಎಲ್ಲವೂ ಸಖತ್ ಚೆನ್ನಾಗಿದ್ದವು ನಿಜ.
ನಾಳೆಯಿಂದ ಈ ಎಲ್ಲದಕ್ಕೆ ಒಂದು ರೂಪ, ಒಂದು ಆಕಾರ ಬರುತ್ತಿದೆ.
- ಅದೂ ಒಂದು ಹೂವಿನ ಹೆಸರಿನ ರೂಪದಲ್ಲಿ.
ಇದು ನಾವು ಕಂಡಿರುವ ಒಂದು ದೊಡ್ಡ ಕನಸಿನ ಸಣ್ಣದೊಂದು ತುಣುಕು ಮಾತ್ರ.
ಕನ್ನಡ ನಾಡಿನ ಕನ್ನಡ ನುಡಿಯ ಕನ್ನಡ ನೆಲದ ಬದುಕಿನ ಕುರಿತು, ಬದುಕಿನ ಉಲ್ಲಾಸದ ಕುರಿತು, ಬದುಕಿನ ನೂರಾರು ಸಾಧ್ಯತೆಗಳ ಕುರಿತು- ಇಲ್ಲಿನ ಸೌಂದರ್ಯ,ಗೋಳು,ಕವಿತೆ,ಬಾಳು,ಇತಿಹಾಸ,ನೆನಪು,ಹಾಡು,ಕಷ್ಟ ಕೋಟಲೆಗಳ ಕುರಿತು..
ಬೇರೇನೂ ಅಲ್ಲ. ಒಂದು ಅಂತರ್ಜಾಲ ತಾಣ ತರಬೇಕು ಎಂದು ಕನಸು ಕಂಡಿದ್ದೆವು.
ಅದರ ಒಂದು ತುಣುಕು ನಾಳೆಯಿಂದ ನಿಮ್ಮ ಕಣ್ಣಿಗೆ ಕಾಣಿಸಲಿದೆ.
ದೊಡ್ಡ ಯೋಚನೆಯೊಂದರ ಕಾಲುದಾರಿ.
ಎತ್ತರದ ಹೂವೊಂದರ ಸಣ್ಣ ಪರಿಮಳ
ಒಂದು ಪುಟ್ಟ ಹೆಜ್ಜೆ
ಇಂದು ನಡುರಾತ್ರಿಗೆ ಮೊದಲೇ ಆ ಹೂವಿನ ಹೆಸರಿನ ವಿಳಾಸ ತಿಳಿಸುತ್ತೇನೆ.
ನಡುರಾತ್ರಿಯ ನಂತರ ನೀವು ಆ ಹೂವನ್ನ ಕಾಣುವಿರಿ.
ಕಳೆಯುತ್ತಿರುವ ವರ್ಷದ ಕಡೆಯ ಗಳಿಗೆಗಳು..
ಹೊಸ ವರ್ಷದ ಹೊಸ ನಿಮಿಷಗಳು..
ಕಾಯುತ್ತೀರಾ?
-ಅಬ್ದುಲ್ ರಶೀದ್.
Filed under: Blogroll, Friends, ಅನುವಾದಗಳು, ಅಲೆಮಾರಿಯ ದಿನಚರಿ, ಈ ತಾಣ ಎಲ್ಲಿ ಬಲ್ಲಿರೇನ, ಕತೆ-ಗಿತೆ, ತೇಜಸ್ವಿ, ಪ್ರಬಂಧ, ಮಾತಿಗೂ ಆಚೆ, ಮುಖಚಿತ್ರ, ಮೈಸೂರಿನಿಂದ ಅಂಕಣ, ಮೋಹಿತನ ಕವಿತೆಗಳು, ರೂಮಿ, ಷಿಲ್ಲಾಂಗಿನಿಂದ ಲಂಕೇಶ, ಹಾಡು-ಪಾಡು, ಹೂವಿನಕೊಲ್ಲಿ
We are impatient; we cannot wait!
ಸಂಪಿಗೆ ಸಂಪಿಗೆ ಕಾಮಗೇತಿ ಸಂಪಿಗೆ. ರಶೀದ್ ಬೇಗ….
ಖಂಡಿತಾ..ಕಾಯುತ್ತೇವೆ..ಯಾವಾಗ ಬರುತ್ತೆ ಸರ್. ತುಂಬಾ ಸತಾಯಿಸೋದು ಒಳ್ಳೆದಲ್ಲ..
ಸಂಪಿಗೆ ಅರಳಿದಾಗಿನ ಸಂಭ್ರಮ ಈಗ ಇಲ್ಲವೇ…………
http://radhakanasupreethi.blogspot.com/
begane barali