ಇನ್ನೊಂದು ಬಹಳ ಹಳೆಯ ಕವಿತೆ

ಅವಳು

avalu.jpg

ಚಂದವಿದ್ದಳು ಗೆಳೆಯ ಅವಳು

ಒಳ್ಳೆ ಮಜಬೂತು ಕುದುರೆ.

ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು

ಬಿಟ್ಟಾಗ ನಗುವ ನಕ್ಷತ್ರ ಮೀನು.

ಅವಳು ಕೂದಲು ಬಿಚ್ಚಿಟ್ಟು ತುಟಿಯಲ್ಲಿ

ಕಚ್ಚಿ ಹೇರುಪಿನ್ನು, ನಗುವ ಹಾಗೆ

ಗಲ್ಲದಲ್ಲೊಂದು ಗುಳಿಯಿತ್ತು ಗೆಳೆಯ,

ತುಂಬು ಕೊರಳಿನ ತುಂಬ ಕಾಡು ಹಾಡು.

ಅವಳ ತಟ್ಟನೆಯ ತಿರುವು ತಿರುವುತ್ತ

ಹರಿವ ಕಪ್ಪು ಟಾರಿನ ದಾರಿ ತಗ್ಗು ಕೆಳಗೆ

ಅಲ್ಲಿ ಏಲಕ್ಕಿ ಮಲೆ ಕೆಂಪು ಕಾಫಿಯ ತೋಟ

ಹಸಿರು ಗಾಳಿಗೆ ಉಲಿವ ಬೇಲಿಯೊಳಗೆ

ಚೀಲ ಬುತ್ತಿಯ ತೋಳೆ ಬರಿ ಕಿತ್ತಳೆ.

5 Comments

  1. Posted ಸೋಮವಾರ October 15, 2007 at 11:20 pm | Permalink

    ಚೆಂದವಿದ್ದಳು???….ಈಗ ಊರು ಚೆಂದ ಕಾಣ್ತಾ ಇಲ್ವಾ ನಿಮಗೆ?

  2. Posted Tuesday October 16, 2007 at 11:43 am | Permalink

    ಪ್ರಿಯ ವಿಕ್ರಂ,ಈ ಕವಿತೆ ಯನ್ನ ಬರೆದದ್ದು ಸುಮಾರು ೨೩ ವರ್ಷಗಳ ಹಿಂದೆ.ಈಗ ಅದೆಲ್ಲ ಯೋಚಿಸಿದಾಗ ಖುಷಿಯಾಗುತ್ತೆ.ಜೊತೆಗೆ ಏನೋ ಒಂದು ಸಂಕಟ ಕೂಡಾ.ಇದು ಎಲ್ಲರಿಗೂ ಆಗುತ್ತೆ.ಬಹುಶಃ ನಿಮಗೂ ಕೂಡಾ.ಕವಿತೆ ಮಾತ್ರ ಪಳೆಯುಳಿಕೆ ತರಾ ಹಾಗೇ ಉಳಿದಿರುತ್ತೆ.

  3. Posted Thursday October 18, 2007 at 3:07 pm | Permalink

    ಪ್ರೀತಿಯ ರಶೀದ್,
    ಶುಂಟಿ(ಠಿ)ಕೊಪ್ಪ ಇಷ್ಟು ಚೆನ್ನಾಗಿದೆ ಅಂತ ಗೊತ್ತಿರಲಿಲ್ಲ.. ಈಗ ಎದುರಿಗೆ ಹರವಾದ ಕಪ್ಪು ಕೂದಲು ಕಾಣದೆ ರಸ್ತೆಯ ಬೈತಲೆಗಳು,ಬೆಳೆದ ಊರಿನ ಬೆಳ್ಳಿಕೂದಲು ಕಣ್ಣಿಗೆ ಹೊಡೆಯಬಹುದು.. ಆದರೂ ಅರೆಕ್ಷಣ ನಿಂತು ನೋಡಿದರೆ ಬೆಳ್ಳಿಕೂದಲ ಮರೆಯಲಿ ಅಡಗಿನಿಂತ ಗತವೈಭವ ಮುಗುಳ್ನಗುತ್ತದೆ. ಸಂಕಟ ಇದ್ದೇ ಇರುತ್ತದೆ ಬಿಡಿ ಒಂದು ಬದಿಗೆ. ಕಾಲ ಮರೆತರೆ ಸೊಂಪಾದ ನೆನಪು ಹಾಯೆನಿಸುತ್ತದೆ..

    ಸಿಂಧು

  4. Posted Wednesday October 24, 2007 at 4:22 am | Permalink

    “ಹಾರಂಗಿ ಅಣೆಕಟ್ಟು ಕಟ್ಟಿಟ್ಟ ನೀರು

    ಬಿಟ್ಟಾಗ ನಗುವ ನಕ್ಷತ್ರ ಮೀನು”
    ಆಹಾ! ಏನು ಕವಿತೆ! ನಾನು ಆಗಾಗ ಓದುವ ಇಷ್ಟದ ಪದ್ಯ ಇದು. ಇದರ ನುಡಿಗಟ್ಟು, ಆ ಪನ್, ನವ್ಯದ ಅಪ್ಪಟ ಪೋಲಿತನ ಎಲ್ಲವೂ ‘ಹಾಲು ಕುಡಿದ ಹುಡುಗನ’ ಮನಸ್ಸೇ ಹಿಂದಿದೆ! ನಮ್ಮ ತಲೆಮಾರಿನವರಿಗೆ ಒಂದು ರೀತಿಯ ಖುಷಿ, ಸ್ಫೂರ್ತಿಯ ಸೆಲೆಗಳಲ್ಲಿ ಇದೂ ಒಂದು! ‘ಅಕ್ಷರ ಹೊಸ ಕಾವ್ಯ’ದಲ್ಲಿ ಮೇಷ್ಟ್ರೂ ಮೆಚ್ಚಿದ್ದಲ್ಲವೇ?

  5. Posted Wednesday September 17, 2008 at 10:01 am | Permalink

    ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಾಗಲೆಲ್ಲ ನಾನು ತಪ್ಪದೇ ಈ ಕವಿತೆಯ ಮೇಲೊಮ್ಮೆ ಕಣ್ಣಾಡಿಸಿ ಹೋಗದಿದ್ದರೇ ಒಂಥರ ತರ ತರ …ಅದ್ಭುತವದ್ ಜೋಡನೆ..:) ಇಪ್ಪತ್ತಮೂರು ವರ್ಷದ ಹೀಮ್ದಿನ ಕವಿತೆಯಾದರೂ..ಕವಿತೆ ಇನ್ನೂ ಒಂದು ದಿನದ ಕೂಸು ಅನ್ನುವಷ್ಟು ಮುದ್ದಾಗಿದೆ..:)

    ನಿಮ್ಮ ಹುಡುಗ:)


Post a Comment

Your email is never published nor shared. Required fields are marked *
*
*