The Mysore Post

Saturday September 29, 2007

ಪುಟ್ಟ ಮೂರು ರೂಮಿ ಕವಿತೆಗಳು

Filed under: ಅನುವಾದಗಳು, ಹಾಡು-ಪಾಡು — Rasheed @ 11:54 pm

 

[ಮೌಲಾನಾ ಜಲಾಲುದ್ದೀನ್ ರೂಮಿ ಬದುಕಿದ್ದರೆ ಅವರಿಗೆ ನಾಳೆ ಭಾನುವಾರಕ್ಕೆ ಎಂಟುನೂರು ವರ್ಷಗಳಾಗುತ್ತಿತ್ತು.ರೂಮಿಯ ಕುರಿತು, ಅವರ ಹುಟ್ಟೂರಿನ ಕುರಿತು, ಈಗ ಆ ಊರು ಹೇಗಿದೆ ಎಂಬುದರ ಕುರಿತು ನೀವು ಬಿ.ಬಿ.ಸಿ ಯ ಈ ತಾಣವನ್ನು ನೋಡಬಹುದು .]

--

ಅರಿಯದ ಪ್ರೇಮಕ್ಕಿಂತ ಮಿಗಿಲಿನ ಪ್ರೇಮವಿಲ್ಲ

ಗುರಿಯಿರದ ಕೆಲಸಕ್ಕಿಂತ ಘನದ ಕಾರ್ಯವಿಲ್ಲrumi3.jpg

ನಿನ್ನೆಲ್ಲ ಜಾಣತನ ಬಿಟ್ಟುಬಿಡಬಲ್ಲೆಯಾದರೆ

ಅದಕು ಮಿಗಿಲಿನ ತಂತ್ರ ಬೇರೆಯಿಲ್ಲ!

 

--

ಕುಡುಕರಿಗೆ ಪೋಲೀಸರ ಹೆದರಿಕೆ,

ಆದರೆ ಪೋಲೀಸರೂ ಕುಡುಕರೇ..

ಪ್ರೀತಿಸುತ್ತಾರೆ ಊರ ಮಂದಿ ಇವರಿಬ್ಬರನ್ನೂ,

ಪ್ರೀತಿಸುವಂತೆ ಪಗಡೆಯ ಕಾಯಿಗಳನ್ನು.

 

--

 

rumi11.jpg

ಪ್ರೇಮದ ಕಟುಕನಂಗಡಿಯಲ್ಲಿ ಕೊಲ್ಲುವುದು

ಒಳ್ಳೆಯದನ್ನೇ. ಬಡಕಲು ಮಿಕಗಳನ್ನಲ್ಲ.

ಓಡದಿರು ಈ ಮರಣದಿಂದ,

ಕೊಲ್ಲದೇ ಬದುಕಿ ಉಳಿದವರು

ಎಂದೋ ಸತ್ತು ಹೋದವರು

———–

4 Comments »

  1. ಈ ಕವಿತೆಗಳಲ್ಲಿನ ಚುರುಕು ಚಾಟಿ ತುಂಬಾ ಹಿಡಿಸಿತು.

    Comment by ಸುಪ್ತದೀಪ್ತಿ — Tuesday October 2, 2007 @ 2:30 am | Reply

  2. ಪ್ರಿಯ ರಶೀದ್,

    ತುಂಬ ಚೆನಾಗಿವೆ. ಇಷ್ಟವಾಯಿತು. ಜ್ಯೋತಿಯವರು ಹೇಳಿರುವುದು ನಿಜ. ಚುರುಕೆಂದರೆ ಚುರುಕೇ… ಹೆಚ್ಚೂಕಡಿಮೆ ಸೂಜಿಮೆಣಸಿನಕಾಯೇ..

    ಗುರಿಯಿರದ ಕೆಲಸ,ಪಗಡೆಯ ಕಾಯಿ,ಬಡಕಲು ಮಿಕ.. ಒಂದಕ್ಕಿಂತ ಇನ್ನೊಂದು… 800 ವರ್ಷಗಳ ಹಿಂದೆ ಇದ್ದ ಮನಸ್ಥಿತಿಯೇ ಈಗಲೂ ನಮ್ಮನ್ನ ಸುತ್ತುವರಿದಿರುವುದನ್ನ ನೋಡಿಕೊಂಡರೆ ಅಚ್ಚರಿಯೆನಿಸುತ್ತೆ. ಬದಲಾವಣೆಯೆ ಬದುಕು ಎಂದವರು ಯಾರೋ..

    Comment by Sindhu — Thursday October 4, 2007 @ 9:21 am | Reply

  3. ಏಕೋ ಎರಡನೆಯ ಕವನ ತುಂಬಾ ಹಿಡಿಸಿತು ಗುರು.

    Comment by veena — Thursday October 4, 2007 @ 3:29 pm | Reply

  4. Stoped for only three?!
    Please give us some more…

    Comment by Ravikumar — Monday April 28, 2008 @ 6:33 am | Reply


RSS feed for comments on this post. TrackBack URI

Leave a comment

Blog at WordPress.com.