ನನ್ನ ತೋಳುಗಳಲ್ಲಿ

ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು
ಸೆರೆಯಾಗಿದೆ ಓ ದೇವತೆಯೇ…
ನನ್ನ ತುಟಿಯ ನಡುವಿಂದ ಮುತ್ತುಗಳ ನಡುನಡುವೆ
ಪ್ರೀತಿಮಾತುಗಳು ಸೆಲೆಯೊಡೆಯುತ್ತಿವೆ.
ನನ್ನ ಬಿಗಿ ಅಪ್ಪುಗೆಯಿಂದ ಮಾತಿಲ್ಲದೆಯೆ
ನಿನ್ನ ತೆಳ್ಳಗಿನ ದೇಹ ಸರಿಯುತ್ತಿದೆ ದೂರ
ಸಂಶಯದೊಂದು ಸಣ್ಣ ನಡುವಿನ ಹುಡುಗೀ..
ನೀ ಕೊಂಕು ಮಾತಾಡುತಿರುವೆ.
ಮೋಸದ ನೋವಿನ ಸಾಲುಮಾತುಗಳು ನೆನಪಾಗುತಿದೆ
ನಿನಗೆ. ಸುಮ್ಮನೆ ಕೇಳಿಸಿಕೊಳ್ಳುತಿರುವೆ
ಏನೂ ಕೇಳಿಸದೆಯೇ..
ಶಪಿಸುತ್ತಿರುವೆ ನನ್ನ ಹುಮ್ಮಸ್ಸಿಗೆ ನಾನೇ
ನನ್ನ ನಯದ ಲಲ್ಲೆಯಾಟಗಳಿಗೆ,
ಯೌವನಕ್ಕೆ, ನಿತ್ಯ ಬೇಟಗಳಿಗೆ,
ಹೂತೋಟದ ಸದ್ದಿಲ್ಲದ ಆಟಗಳಿಗೆ
ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ.
ಶಪಿಸುತ್ತಿರುವೆ ಕವಿತೆಗಳ ಮಾಂತ್ರಿಕ ಮೋಡಿಗಳಿಗೆ,
ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,
ಅವರ ಕಣ್ಣೀರಿಗೆ, ಕಾಲ ಮೀರಿದ ವಿಷಾದಗಳಿಗೆ.
ತೋಳುಗಳಲ್ಲಿ ಎಳೆ ಚೆಲುವು….ಮಾತಿಲ್ಲದೆ ಸರಿದ ದೇಹ….ಕೊಂಕು ಮಾತು….
ಶಪಿಸುತ್ತಿರುವೆ, ಕವಿತೆ, ಎಳೆ ಹುಡುಗಿಯರು, ಅವರ ಕಣ್ಣೀರಿಗೆ, ಕಾಲ ಮೀರಿದ ವಿಷಾದಗಳಿಗೆ ಶಪಿಸುತ್ತಿರುವೆ
ತನ್ನ ಹುಮ್ಮಸ್ಸು, ನಯ, ಯೌವ್ವನ, ಬೇಟ-ಆಟ, ಕವಿತೆಗಳನ್ನು ಶಪಿಸುತ್ತಾನೆ, ತನ್ನನ್ನಲ್ಲ.
ವಾಹ್ ಜನಾಬ್!
ಬ್ಲಾಗಿನ ಈ ಲುಕ್ ಚೆನ್ನಾಗಿದೆ.
Comment by Vikram Hathwar — Sunday September 2, 2007 @ 3:35 am |
[...] ರಶೀದ್ ಪುಷ್ಕಿನ್ನನ ಕವಿತೆಯೊಂದನ್ನು ಅನುವಾದಿಸಿ…. [...]
Pingback by DesiPundit » Archives » ನನ್ನ ತೋಳುಗಳಲ್ಲಿ — Sunday September 2, 2007 @ 8:53 am |
Hi Rasheed: The new format is very pleasing. I’ll now go up and read the padya!
Comment by Shashikiran — Sunday September 2, 2007 @ 9:26 am |
hello sir,
new format looks like a stranger..!!….
am feeling as if i have entered a perfumed,air conditioned, artificial block..
old one had been dear to me..
Comment by rachana — Sunday September 2, 2007 @ 10:24 pm |
“ನನ್ನ ತೆರೆದ ತೋಳುಗಳಲ್ಲಿ ನಿನ್ನ ಎಳೆ ಚೆಲುವು…”
ಬರೆದವನು ಬಯಸಿದ್ದೇ ಅದು ಅಲ್ಲವೆ.. ತೆರೆದ ತೋಳು.. ಬಳಸಿದ್ದಲ್ಲ..
ಅವಳು ಹೊರಹರಿಯುವುದು ಅನಿವಾರ್ಯ.
ಕವಿಯು ಈ ಎಲ್ಲ ಸಾಲುಗಳಲ್ಲಿ ತೆರೆದುಕೊಂಡು ಒಂದು ಬಗೆಯ ಇಷ್ಟವಾಗದೆ ಇರುವ ಅಚ್ಚರಿ ಹುಟ್ಟಿಸುತ್ತಾನೆ. ಆದರೆ ಕೊನೆಯ ಎರಡು ಸಾಲುಗಳಲ್ಲಿ -ಅರಿಯದ ಸಣ್ಣ ಹುಡುಗಿಯರ ಸ್ಪರ್ಶಗಳಿಗೆ,ಅವರ ಕಣ್ಣೀರಿಗೆ, ಕಾಲ ಮೀರಿದ ವಿಷಾದಗಳಿಗೆ…- ವಿಷಾದವನ್ನೆ ಹರಡುತ್ತಾ ನಮ್ಮಂತೆಯೆ ಅನಿಸಿ ಅಚ್ಚರಿ ಕಳೆದು ಇಷ್ಟವಾಗುತ್ತಾನೆ.
ನಿಮ್ಮ ಬರಹಗಳು ಇಷ್ಟವಾಗುವುದೆ ಈ ಕಾರಣಕ್ಕೇ.. ಇಷ್ಟೇನೇ, ಇದೂ ಅದೇ ತರಾನೇ ಅನ್ನಿಸುವ ವಾಕ್ಯಗಳ ಬಳ್ಳಿ ಹಬ್ಬಿಸುತ್ತಾ ಹೋಗಿ ತುದಿಯಲ್ಲಿ ವಿಷಾದಪುಷ್ಪದ ಅರೆಬಿರಿದ(ಎಂದಿಗೂ ಪೂರ್ತಿ ಬಿರಿಯದ) ಹೂಗೊಂಚಲು..
Comment by Sindhu — Tuesday September 4, 2007 @ 1:40 pm |
kavanadalli kadiddu, ಪ್ರೇಮದ ಹೆಸರಿಲ್ಲದ ಪಿಸುಮಾತಿನ ಹೇಳಿಕೆಗಳಿಗೆ, ಕಾಲ ಮೀರಿದ ವಿಷಾದ….
chendada kavite. Dhanyavada.
Comment by chetana thirthahalli — Wednesday September 5, 2007 @ 10:58 am |