
ಹುಣಸೂರಿನ ಬಳಿಯ ಪಕ್ಷಿರಾಜಪುರದ ೨೦ ಹಕ್ಕಿಪಿಕ್ಕಿ ಮಂದಿಯನ್ನು ನೇಪಾಳದ ಪೋಲೀಸರು ವನ್ಯಜೀವಿ ರಕ್ಷಣಾ ಕಾಯಿದೆಯಡಿ ಬಂದಿಸಿದ್ದಾರೆ. ಇವರಲ್ಲಿ ಒಬ್ಬರು ಈಗ ನಿಮ್ಮ ಜೊತೆ ಯು ಟ್ಯೂಬ್ ನಲ್ಲಿ ಮಾತನಾಡಲಿರುವ ಪಿ.ಎಸ್. ವಸಂತ ಎಂಬ ಅದ್ಭುತ ಮಾತುಗಾರನ ನಾಲ್ಕನೆಯ ಹೆಂಡತಿ ಸೋನಾ.
ಹಾಗೆ ನೋಡಿದರೆ ಮರೆತ ಎಲೆಅಡಿಕೆ ತರಲು ಈ ವಸಂತ ರೈಲು ಇಳಿದು ಹೋಗಿರದಿದ್ದರೆ ಈತನೂ ನೇಪಾಳದ ಪೋಲೀಸರ ಪಾಲಾಗುತ್ತಿದ್ದ.
ಈಗ ಈ ವಸಂತನಿಗೆ ಒಂದು ಕಡೆ ಖುಷಿ. ಇನ್ನೊಂದು ಕಡೆ ವಿರಹ.
ಈ ಮಿಶ್ರ ಭಾವನೆಯನ್ನು ಈತನ ಮಾತುಗಳಲ್ಲೇ ಕೇಳಿ:
One Comment
ಪ್ರಿಯ ರಶೀದ್,
ಹೊಸ ಪ್ರಯತ್ನ.. ಅಲೆಮಾರಿಮನದ ಭಾವಬಿಂದುಗಳನ್ನ ಮಾತು ಬರದವನ ಮಾತಲ್ಲೇ ಕಡೆದು ನಿಲ್ಲಿಸುವ ವಿಶಿಷ್ಟ ಪ್ರಯತ್ನ..
ನೀವು ಹಾಕಿದ ಕೂಡಲೆ ನೋಡಲಾಗಲಿಲ್ಲ, ನೋಡಿದ ಕೂಡಲೆ ಬರೆಯಲೂ ಆಗಲಿಲ್ಲ..
ಅವನ ಎಲ್ಲೋ ಹೊರಟು ಎಲ್ಲೋ ಸೇರುವ ಮಾತುಗಳನ್ನ ನಿಮ್ಮ ತುಂಟ ಚಾಲಾಕಿ ಪ್ರಶ್ನೆಗಳ ದಿಕ್ಕಲ್ಲಿ (ದಿಕ್ಕು ತಪ್ಪಿಸಿ) ಹರಿಸಿ.. ಹಾಗೆ ಹರಿದ ಮಾತುಗಳಲ್ಲಿ ಅವನಿಗೇ ಅರ್ಥವಾಗದ, ನಮಗೆ ನೂರು ಅರ್ಥ ಕೊಡುವ ಹಲವು ಭಾವಸ್ಫೋಟ.. ಇಡೀ ಮಾತಿನ ಕತೆಯ ಹಿನ್ನೆಲೆಗೆ ಜೋಡಿಕೊಟ್ಟ ಮಗುವಿನ ಚೀರುದನಿಯ ಅಳು ಆ ಮಾತಿನ ಆಳವನ್ನು ತೋರಿಸುವಷ್ಟರಲ್ಲಿ, ನಾಲ್ಕನೆಯ ಮತ್ತು ಕಡೆಯ ಹೆಂಗಸನ್ನು ಕಳೆದುಕೊಂಡ ವಿಷಾದವನ್ನು ಮಾತಾಗಿಸಿ ನಗುತ್ತಿರುವ ಅವನ ನಗುವಿನಗಲ ಹರಡಿಕೊಂಡು, ಏನೂ ಇಲ್ಲದಿರುವ ಬದುಕಿನ ತೀವ್ರ ಹರಿವು, ಎಲ್ಲವನ್ನೂ ಕೊಚ್ಚುತ್ತಾ ಹೊಸಬಗೆಯ ಪ್ರಯತ್ನ..
ನೀವೇನು ಹೇಳ(ತೋರಿಸ)ಹೊರಟಿರೋ ಅದನ್ನ ಮೀರಿ ಹರಿದ ಭಾವ ಪ್ರವಾಹ..