
ನಿನ್ನ ಬೆವರಿಕೊಂಡಿರಬಹುದಾದ ಎದೆ
ಮತ್ತು ನಿನ್ನ ಕಾಲ ಬೆರಳ ಉಗುರಲ್ಲಿ ಕಡಲಿನ ಮರಳು
ಮತ್ತು ನಿನ್ನ ಮುಂಗುರುಳಲ್ಲಿ ಸಿಕ್ಕಿಕೊಂಡಿರುವ ಹಕ್ಕಿಯ ಗರಿ
ನೀನೇ ನಿದ್ದೆಯಲ್ಲಿ ಪರಚಿಕೊಂಡಿರುವ ನಿನ್ನ ಬೆನ್ನ ಗೀರು
ಮತ್ತು ಇದು ಯಾವುದಕ್ಕೂ ಕಾರಣನಲ್ಲನೆಂಬ ನನ್ನ ಕೊರಗು.
ನಿನ್ನ ಎಚ್ಚ್ರರದ ಉದಾಸೀನ, ಮೈಮುರಿದುಕೊಳ್ಳುವ ನಿನ್ನ ಬೆನ್ನ ಬೆರಳ ಲಾಸ್ಯ,
ಮತ್ತು ಇಷ್ಟಿಷ್ಟೇ ಬಿಟ್ಟು ಹಿಂದಿಡಿದಿಟ್ಟುಕೊಳ್ಳುವ ನಿನ್ನ ಔಧಾರ್ಯ ಮತ್ತು
ನನ್ನ ಮುಡಿಯಲ್ಲಿ ಬೆರಳಿಟ್ಟು ನಿದ್ದೆ ಮಾಡಿಸಬಹುದೆನ್ನುವ
ನಿನ್ನ ಮರುಳು ಧೈರ್ಯ!
ನಾನು ಏನೋ ತೊದಲುವೆನು, ಮತ್ತೆ ನಿದ್ದೆ ಹೋಗುವೆನು
ಎಲ್ಲವನು ಕಂಡು ಇಲ್ಲವಾಗುವೆನು
ಇರುವುದೇ ಎಲ್ಲವು ಎಂದು ಮುಟ್ಟಿ ನೋಡುವೆನು
ನಿನ್ನ ದೂರ ಕಳಿಸಿ ಬಿಟ್ಟು ಬಂದು….
[ಚಿತ್ರ:ಚರಿತಾ]
4 Comments
hmm..true,power cut aagade nimage nidde haege bandeethu blog boss…:)
power cut ಆದ್ರೂ notebook (laptop) ಇದೆ – so, Rasheed is non-stop, virtually.
edeyannu yaake yeda endu kanisiddeeya
ede edeyaage irali maaraaya..
ಪ್ರಿಯ ರಶೀದ್,
..ನಿನ್ನ ಎಚ್ಚ್ರರದ ಉದಾಸೀನ,
..ನಿನ್ನ ಮರುಳು ಧೈರ್ಯ!
..ಇರುವುದೇ ಎಲ್ಲವು ಎಂದು ಮುಟ್ಟಿ ನೋಡುವೆನು…
ನಿಮ್ಮ ಕವಿತೆಗಳು ನನಗೆ ಗಝಲ್ ಕೇಳಿದ ಅನುಭವ ಕೊಡುತ್ತವೆ.ಕವಿಯ/ಹಾಡುವವನ ದುಃಖ – ನನ್ನದಲ್ಲದ್ದು ಮತ್ತು ಕವಿಯ ಸ್ವಂತದ್ದು -ನನ್ನದೇ ಆದಂತೆ ಅನಿಸಿ ಮನಸು ತೋಯ್ದು ಬಾಗಿ ನಿಲ್ಲುತ್ತದೆ.