ಮೋಹಿತನ ಒಂದು ಸಂಕೋಚದ ಕವಿತೆ

ಕ್ಷಮಿಸು,1105070152796_240_29728.jpg

 ಕ್ಷಮಿಸು, ನಿನ್ನನ್ನು ಹಾಗೆ ಬಗ್ಗಿಸಬೇಕಾಗಿರಲಿಲ್ಲ

ಮತ್ತು ಹಾಗೆ ಮಖಾಡೆ ಮಲಗಿಸಿದ್ದೂ ತಪ್ಪಾಯ್ತು.

ನಿನ್ನ ಎದೆ,ಹೊಕ್ಕಳು,ನಿನ್ನ ಕಿಬ್ಬೊಟ್ಟೆ, ತೊಡೆ…

ನಿನ್ನ ಎಲ್ಲವನ್ನೂ ತಿಂದು ತೇಗಿದ್ದಾಯ್ತು. ಪರಮಾತ್ಮ!

ಇನ್ನು ಏನಂತಲೂ ಪರದಾಡಿ ಮುಗಿಯಿತು.

ಈಗಲಾದರೂ ಕಣ್ಣು ತೆರೆ, ಹೇಳು,

ಉಡುಪು ತೊಟ್ಟುಕೋ.

ಮಡಿಲಲ್ಲಿ ಕೂರು.ತುಟಿ ಒರೆಸಿ ಮಾತನಾಡು.

ಮುಗಿಯಿತೇ ಅಂತಾದರೂ ಕೇಳು.

ಸುಮ್ಮಗೆ ನಗದಿರು.

4 Comments

  1. Posted Wednesday June 27, 2007 at 1:04 pm | Permalink

    ಪ್ರಿಯ ರಶೀದ್,

    ಮೋಹಿತ ಕ್ಷಮಾ ವಿನಂತಿಯನ್ನ ಸಂಕೋಚದಿಂದ ಓದಿದೆ,
    ಅಕ್ಷರಗಳು ನಾಚಿಕೊಂಡವಾಗಲೀ ಭಾವ ಯಾವ ಬಿಮ್ಮಾನವಿಲ್ಲದೆ ತುಂಬಿ ಹರಿಯುತ್ತಿದೆ.

    ಮುಗಿಯಿತೇ ಅಂತ ಕೇಳಿದರೆ ಮುಗಿಯಿತೆ?
    ಕ್ಷಮೆ ದಕ್ಕೀತೆ?
    ಸುಮ್ಮನೆ ನಗುವುದು ಮಾತಿಗಿಂತ ಹೆಚ್ಚಿನ ಪರಿಣಾಮ ಅನ್ನಿಸಿತೆ?

  2. Rachana
    Posted Wednesday June 27, 2007 at 7:30 pm | Permalink

    both the image and words are so nicely going with each other..!!

    ………..aa naguvinalli aenellaa irabahudu… allva..?!

  3. Posted Thursday June 28, 2007 at 8:41 pm | Permalink

    “ಸುಮ್ಮನೆ ನಗುವುದು ಮಾತಿಗಿಂತ ಹೆಚ್ಚಿನ ಪರಿಣಾಮ ಅನ್ನಿಸಿತೆ?”

    - ಸುಮ್ಮನೆ ನಗುವುದು ಮಾತಿಗಿಂತ ಹೆಚ್ಚು ಪರಿಣಾಮಕರ – ಅಲ್ಲವೆ?

  4. Tina
    Posted Saturday June 30, 2007 at 4:53 pm | Permalink

    Rasheed Ungle,

    MMMM.. Idu baredaada mele Bandenawaazanannu yelethandu koorisibittiddeeri, ella tolakolluva haage..
    Swalpa galaate maadona annisidaroonu, kavana nodi karagihogi summanaguva haagaagide. Shree, couldn’t agree with you more!!


Post a Comment

Your email is never published nor shared. Required fields are marked *
*
*