
ನಮ್ಮ ಪ್ರೀತಿಯ ಮೇಷ್ಟ್ರು, ಚಿಂತಕ, ಹೋರಾಟಗಾರ, ತುಂಟ ಮನಸಿನ ಓಡಾಟಗಾರ ಕೆ.ರಾಮದಾಸ್ ಇದೀಗ ಕೊಂಚ ಹೊತ್ತಿನ ಮೊದಲು ಮೈಸೂರಿನ ಕುವೆಂಪು ನಗರದ ತಮ್ಮ `ಚಾರ್ವಾಕ’ ಎಂಬ ಮನೆಯಲ್ಲಿ ತೀರಿ ಹೋದರು.ಅವರಿಗೆ ೬೬ ವರ್ಷವಾಗಿತ್ತು. ಮಹಾರಾಜಾ ಕಾಲೇಜಿನಲ್ಲಿ ನನಗೆ ಅರಿವನ್ನು ಕಲಿಸಿದ ಗುರು, ಲಂಕೇಶ್, ತೇಜಸ್ವಿಯವರ ಪ್ರಾಣಮಿತ್ರ, ಕೆ. ರಾಮದಾಸ್ -ಇದೀಗ ಅವರನ್ನು ಸೇರಿಕೊಂಡಿದ್ದಾರೆ .ಯಾಕೋ ಏನೂ ಬರೆಯಲಾಗದ ಹಾಗೆ ಕಣ್ಣು ತುಂಬಿಕೊಳ್ಳುತ್ತಿದೆ.
ರಾಮದಾಸ್ ಅವರ ಆಲ್ಬಂನಿಂದ ಕೆಲವು ಚಿತ್ರಗಳು:

[ಪ್ರೀತಿಯ ತಾಯಿ ಮಂಜಮ್ಮ]

[ಮದುವೆಯ ದಿನ ಮಡದಿ ನಿರ್ಮಲಾ]

[ಮದುವೆಯಾದ ಮೇಲೆ ಕರೆಯೋಲೆ]

[ಲಂಕೇಶ್ ಮತ್ತು ತೇಜಸ್ವಿ ಜೊತೆ]

[ಗೆಳೆಯನ ಜೊತೆ ಚರ್ಚೆ]

[ಲಂಕೇಶ್ ತೀರಿ ಹೋಗುವ ಮೊದಲು]
[
9 Comments
oh! i am shocked!
besarada vishaya. ondu talemare mugidu hoda hage annisuttide yako..
Che! oTToTTige eraderadu aaghaatha.. Yako Kannada ivarannella kaLakondu baDavaagthide annisthide..
ನನ್ನ ಪ್ರೀತಿಯ ಮೇಷ್ಟ್ರಾದ ರಾಮದಾಸ್ ತೀರಿಹೊಗಿದ್ದು ತಿಳಿದು ದುಕ್ಕವಾಯಿತು. ಇತ್ತೀಚೆ ಶಿವಸ್ವಾಮಿ ಬಂದಿದ್ದಾಗ ಅವರ ಕುರಿತು ಮಾತಾಡಿದ್ದೆವು. ಅವರಿಗೆ ಹುಶಾರಿಲ್ಲ ಅಂತ ಫೋನು ಮಾಡದೇ ಉಳಿದೆವು. ಒಮ್ಮೆ ಹೋಗಿ ಅವರನ್ನು ಕಾಣಬೇಕು ಮಾರಾಯ ಅಂದಿದ್ದೆ ಶಿವುಗೆ. ಒಂದು ತಲೆಮಾರು ಮುಗಿಯುತ್ತಿದೆ ಅನ್ನಿಸುತ್ತೆ. ಕರ್ನಾಟಕದಲ್ಲಿ ಅಪರೂಪದ ಚಿಂತಕರಾಗಿದ್ದ ರಾಮದಾಸ, ಕೊನೆವರೆಗೂ, ಎಂದೆಂದಿಗೂ ಎಲ್ಲ ಪಟ್ಟಭದ್ರರಿಗೂ ಪ್ರತಿಪಕ್ಷವಾಗೇ ಉಳಿದಿದ್ದಾರೆ. ಸರಕಾರವನ್ನು, ಅಧಿಕಾರವನ್ನು ಪ್ರೀತಿಸದೇ, ಜನರನ್ನು ಪ್ರೀತಿಸುವುದನ್ನು ಮೇಷ್ಟ್ರು ನಮಗೆ ಕಲಿಸಿದ್ದರು – ಮಹಾರಾಜ ಕಾಲೇಜಲ್ಲಿಯೂ, ತಮ್ಮದೇ ಉದಾಹರಣೆಯಾಗಿಯೂ. ನನ್ನ ಎಲ್ಲ ನೈತಿಕ ದುರ್ಬಲ ಕ್ಷಣಗಳಲ್ಲಿ ಅವರ ಗಡಸು ದನಿ ‘ಈಡಿಯಟ್ಟು’ ಅಂತ ಎಚ್ಚರಿಸುತ್ತಿರುತ್ತದೆ. ಹೀಗೇ ಎಚ್ಚರಿಸುತ್ತಿರಿ, ಸಾರ್.
lankesh,tejaswi eega ramdas…moovara naguvinalluuu eshtu saamyathe..!!
moovatthu varshagaLa hinde aparichita mysoorinalli nanna thamma joyappanige collegina daari thorisi,vaichaarika balavannu neeDida raamdaas nammoLage sadaa achcha hasiru.
tumba chennagi ramadas vivara neediddeeri. ivattu avadhi blognalli baredaddu odide. nataraj huliyar saha ramadas nenapannu chennagi hididittiddare
pratibhaTaneya bahusha koneya kondi gatti dwani loka tejisiddannu aragisikolalaagutilla. Yaariddare aa jaaga tumbalu????????????
check out wikipedia article and photos on ram das here: http://tinyurl.com/2tbta5