ಎರಡು ಪುಟಾಣಿ ಕವಿತೆಗಳು

 -೧-

ಇನ್ನು ಯಾವತ್ತು….. ..

                                       [ಚಿತ್ರಗಳು:ಚರಿತಾ]                

ಇನ್ನು ಯಾವತ್ತು ಆ ಕಾರುಣ್ಯ ಮತ್ತೆ

ಎತ್ತಿಕೊಳ್ಳುವುದು?

ಯಾವತ್ತು ಇನ್ನು ಆ ಬರವು

ಒನಪಿಲ್ಲದೆಯೇ ಯಾವ ವಾಸನೆಯೂ ಇಲ್ಲದೆ

ಮಂತ್ರ ಮುಗ್ಧ ಗೊಳಿಸುವುದು ಬರಿಯ ಕೇವಲ

ಒಂದು ಅಂಗುಲ ನಗೆಯಿಂದಲೆಯೇ ಯಾವತ್ತು

ನಾನು ನನ್ನ ನಖಗಳ ಮರೆತು ಮುಳುಗುವ ಜಗವ

ನೋಡುವುದು ಇನ್ನು ಯಾವತ್ತು

ಆ ಕಾರುಣ್ಯ ಮರಳಿ ಬರುವುದು?

-೨-

ಬೇಕಿರಲಿಲ್ಲ

ಬೇಕಿರಲಿಲ್ಲ

ನಮ್ಮ ನಡುವೆ ಪದಗಳು ಮಾತನಾಡುವುದು

ಮತ್ತು ಮಾತುಗಳು ಅಡಗಲು ಹವಣಿಸುವುದು.

ಕಳೆದದ್ದು ಇರುವುದು ಮತ್ತು ನಡೆಯಲಿರುವುದು

ಸನ್ನೆಗಳಲಿ ಅರಿವಾಗುವುದು.

ಬೇಕಿರಲಿಲ್ಲಇದು ಯಾವುದೂ.

ಇದ್ದಿದ್ದರೆ ಒಂದು ಒದ್ದೆಯ ಹಿಮದ ಮಣಿಯ

ಗಾಳಿ ಆಡಲುನಾಚುವ, ಘನ ಗಂಬೀರ ಕಡಲೂ ನಗುವ

ನಾವು ಒಮ್ಮೆ ಕುಳಿತಿದ್ದಂತಹ ಜಾರುವ ಜಾಗ,

ಬೇಕಿರಲಿಲ್ಲಇದು ಯಾವುದೂ…..

 

6 Comments

  1. Posted Sunday June 10, 2007 at 3:23 am | Permalink

    ನಿಜ, ನಮ್ಮನ್ನು “ಎತ್ತಿಕೊಳ್ಳುವ ಕಾರುಣ್ಯ” ನಮ್ಮ ಬಳಿ ಇದ್ದಾಗ ಗುರುತಿಸಲಾಗದೆ ಮತ್ತೆ ಪರಿತಪಿಸುತ್ತೇವಲ್ಲ, ಅದೇ ಜೀವನ ಅಂತನ್ನಿಸುತ್ತದೆ.

    ಮೌನದ ಗಾಂಭೀರ್ಯ ಅರ್ಥಗರ್ಭಿತವಾಗಿದೆ.

  2. rachana
    Posted Sunday June 10, 2007 at 8:22 am | Permalink

    just spellbound………

  3. Tina
    Posted ಸೋಮವಾರ June 11, 2007 at 11:58 am | Permalink

    MMMM…These two are so different than ur other poems. Made me shed a teardrop or two. Made me yearn for the one who is not around me… Ufffff…and what not!!.Dear Charita.. ur work is classy. Keep up the spirit of this blog by contributing.

  4. Posted ಸೋಮವಾರ June 11, 2007 at 6:11 pm | Permalink

    ಪ್ರಿಯ ರಶೀದ್,

    ಕೇವಲ ಒಂದು ಅಂಗುಲ ನಗೆಯಿಂದಲೆಯೇ ಮಂತ್ರ ಮುಗ್ಧ ..
    ಇತ್ತೀಚೆಗೆ ಓದಿದ ಒಂದು ಅದ್ಭುತ ನಿರೀಕ್ಷೆ..

    ಬೇಕಿರಲಿಲ್ಲ.. ಮಾತಾಡದೆ ಆಡಿ, ಜಾಗವಿರದೆ ಅನುಭವಿಸಿ..
    ಜಾಣ ಬಯಕೆಯ ಆರ್ದ್ರ ರೂಪವೇ.. ಬರೆಯದೆ ಹೇಗೆ ಇರಲಿ? ;-)
    ಮತ್ತು ಹೇಗೆ ಬರೆಯಲಿ..? :(
    ಬೇಕಿರಲಿಲ್ಲ.

  5. Posted ಸೋಮವಾರ June 11, 2007 at 6:36 pm | Permalink

    ರಶೀದ್ ಸರ್,
    ನೀವು ಹೇಳಿದ್ದಷ್ಟೇ ಅಲ್ಲ, ಮಾಡಿ ತೋರಿಸಿದ್ದೀರಿ – ಕಥೆ ಬರೆಯುವವರೂ, ಕಲಾವಿದರೂ, ಕವಿಗಳೂ,ಚಿತ್ರ ತೆಗೆಯುವವರೂ,ಸಂಗೀತಗಾರರೂ – ಹೀಗೆ ಎಲ್ಲರೂ ಅಂತರ್ಜಾಲದಲ್ಲಿ ಒಟ್ಟಾದರೆ ಏನೆಲ್ಲಾ ಸಂಭವಿಸಬಹುದು! ಅಂತ.

    ಚರಿತಾ,
    ಕವನದ ಹಿಂದಿನ ಭಾವ ಅರ್ಥ ಮಾಡಿಕೊಂಡು ಚೆಂದದ ಚಿತ್ರಗಳನ್ನು ಬರೆಯುವುದು ಕೆಲವರ ಕೈಯಲ್ಲಿ ಮಾತ್ರ ಸಾಧ್ಯ… ಆ ಕೆಲವರಲ್ಲಿ ಒಬ್ಬರು ನೀವು, You are gifted. Keep going.

  6. charitha
    Posted ಸೋಮವಾರ June 18, 2007 at 8:45 pm | Permalink

    thank you tina and shree.
    nimma sihi maathu,sahridayakke thanks


Post a Comment

Your email is never published nor shared. Required fields are marked *
*
*