ಯಾಕಳುವೆ ಮಗು ತೇಜಸ್ವಿ…

kukkanakere4.jpg

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು..

‘ಯಾಕಳುವೆ ಮಗು ತೇಜಸ್ವಿ..’ಎಂದು ಕುವೆಂಪು ಬರೆದಿದ್ದರು

‘ನೀನು ಎರಡು ವರ್ಷದ ಮಗು ನಾನು ಎರಡು ವರ್ಷದ ತಂದೆ’ ಎಂದಿದ್ದರು.

ತೇಜಸ್ವಿಯವರಿಲ್ಲದ ಮೊದಲ ದಿನ ಈವತ್ತು

ಏನು ಬರೆಯುವುದು ಏನು ಚಿತ್ರ ತೆಗೆಯುವುದು ಏನು ಚಿಂತಿಸುವುದು

ಎಲ್ಲವೂ ಮಣ್ಣಲ್ಲಿ ಮಣ್ಣಾಗಿ ಬಿಡುವುದು.

ಕುರಿತು ಬರೆದ ಮರ , ಕುರಿತು ಬರೆದ ಮಲೆ- ಸರೋವರ,

ಮಾತು ಕೇಳಿ ನಕ್ಕು ಹೋದ ಜನ. ಬೈಸಿಕೊಂಡು ಕುಗ್ಗಿ ಹೋದ ಸಜ್ಜನ,

ಕಾಜಾಣ, ಕವಿಶೈಲ,- ಯಾವುದೂ ಉಳಿಯಬಿಡುವುದಿಲ್ಲ.

ತೇಜಸ್ವಿ, ನೀವಿಲ್ಲದ ಮೊದಲ ದಿನ – ಕೈ ಆಡುತ್ತಿಲ್ಲ.ಬಾಯಿ ಬರುತ್ತಿಲ್ಲ

 

7 Comments

  1. Posted Friday April 6, 2007 at 1:58 pm | Permalink

    You speak for all of us…

  2. Posted Friday April 6, 2007 at 2:57 pm | Permalink

    and he spoke to each of us

  3. Posted Friday April 6, 2007 at 7:17 pm | Permalink

    Photos are excellent. But, I am getting rubbish on your content. Hence, unable to read the text below them. Need to change some format at my end?

  4. Posted Friday April 6, 2007 at 7:43 pm | Permalink

    please go to the font help sir.

  5. shankar
    Posted Monday April 16, 2007 at 11:44 am | Permalink

    “ನೀವಿಲ್ಲದೆ ಉಸಿರೂ ಆಡಲಾಗುತ್ತಿಲ್ಲ, ಗಂಟಲು ಗದ್ಗದವಾಗುತ್ತಿದೆ..” ತೇಜಸ್ವಿ ಇಲ್ಲದ ನಾಡಾಗಿದೆ, ದಿನವಾಗಿದೆ ಎಂದರೆ ನಂಬಲು ಆಗುತ್ತಿಲ್ಲ! ಆ ನೋವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಆ ಮಹಾನ್ ಚೇತನವೇ ನಮಗೆಲ್ಲಾ ನೀಡಬೇಕು ಅಷ್ಟೆ!
    ಅದ್ಭುತವಾದ ಭಾವಪೂರ್ಣ ಶಬ್ಧಾಂಜಲಿಯಾಗಿದೆ ನಿಮ್ಮ ಕವನ!

  6. Posted Tuesday June 12, 2007 at 8:52 pm | Permalink

    ತೇಜಸ್ವಿ ಇಲ್ಲದ ಓದು ಕೂಡ ಓದಲ್ಲ ಅನ್ಸುತ್ತೆ. ಯಾಕೋ ಗೊತ್ತಿಲ್ಲ ಅವರನ್ನು ಕಳೆದುಕೊಂಡಿದ್ದಕ್ಕೆ ಅಕ್ಷರಗಳೂ ಕೂಡ ಗುಳೆ ಹೊರತಿವೆ ಅಲ್ವಾ !

  7. jahnavi
    Posted Monday June 18, 2007 at 3:40 pm | Permalink

    ಎರಡು ತಿಂಗಳಮೇಲೆ ಈಗ ಎಲ್ಲರಿಗೂ ಏನನಿಸುತ್ತಿದ? ಹಾಗೇ ಅನಿಸುತ್ತಿದೆಯಾ?


Post a Comment

Your email is never published nor shared. Required fields are marked *
*
*